Short News

ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಯಾಕೆ.? ವಿನೋದ್ ರಾಜ್ ಕಣ್ಣಿಗೆ ಬೀಳ್ಲಿಲ್ವಾ.?

ಡ್ಯಾನ್ಸ್ ಶೋಗೆ ಚಂದನ್ ಶೆಟ್ಟಿ ಯಾಕೆ.? ವಿನೋದ್ ರಾಜ್ ಕಣ್ಣಿಗೆ ಬೀಳ್ಲಿಲ್ವಾ.?

'ಬಿಗ್ ಬಾಸ್' ಕಾರ್ಯಕ್ರಮದ ವಿನ್ನರ್ ಆಗಿರುವ ಕಾರಣ ಚಂದನ್ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿರಬಹುದು. ಚಂದನ್ ಶೆಟ್ಟಿ ಕಂಡ್ರೆ ಇಷ್ಟ ಪಡುವವರ ಸಂಖ್ಯೆ ದೊಡ್ಡದಿರಬಹುದು. ಆದ್ರೆ, ಅದೊಂದೇ ನೆಪಕ್ಕೆ ಸಂಬಂಧಪಡದ ಕ್ಷೇತ್ರಕ್ಕೆ ತೀರ್ಪುಗಾರರಾಗಿ ಚಂದನ್ ಶೆಟ್ಟಿ ರವರನ್ನ ಕರೆತಂದರೆ.? ಯಾರು ತಾನೆ ಸಹಿಸಿಕೊಳ್ತಾರೆ ಹೇಳಿ.!

ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಬಿಗ್ ಬಾಸ್' ಕಾರ್ಯಕ್ರಮದ ವಿಜೇತರಾದ ಚಂದನ್ ಶೆಟ್ಟಿ ಇದೀಗ ಅದೇ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಮಾಸ್ಟರ್ ಡ್ಯಾನ್ಸರ್' ಶೋಗೆ ತೀರ್ಪುಗಾರರಾಗಿದ್ದಾರೆ.

ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

ಸಿಜೆಐ ವಿರುದ್ಧ ವಿಪಕ್ಷಗಳಿಂದ ಮಹಾಭಿಯೋಗ ನಿಲುವಳಿ ಮಂಡನೆ

ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ (impeachment) ನಿಲುವಳಿಯನ್ನು ಕಾಂಗ್ರೆಸ್ ನೇತೃತ್ವದ ಏಳು ವಿಪಕ್ಷಗಳು ಮಂಡಿಸಿವೆ.

ಭಾರತೀಯ ಸಂವಿಧಾನದ 217 ಮತ್ತು 124(4)ನೇ ವಿಧಿಯ ಅಡಿಯಲ್ಲಿ ದೀಪಕ್ ಮಿಶ್ರಾ ಅವರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿ ಮಹಾಭಿಯೋಗ ನಿಲುವಳಿ ಮಂಡಿಸಲಾಗಿದೆ.

ಕಾಂಗ್ರೆಸ್, ನ್ಯಾಶ್ನಲ್ ಕಾಂಗ್ರೆಸ್ ಪಕ್ಷ, ಸಿಪಿಐ-ಎಂ ಮತ್ತು ಸಿಪಿಐ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷಗಳು ಈ ನಿಲುವಳಿಗೆ ಸಹಿ ಮಾಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಬ್ ನಬಿ ಆಜಾದ್, '64 ಸಂಸದರು ಈ ನಿಲುವಳಿಗೆ ಸಹಿ ಮಾಡಿದ್ದಾರೆ.

ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!

ಸ್ಮಾರ್ಟ್‌ಫೋನ್ ಚಟ ತಪ್ಪಿಸಲಿದೆಯಂತೆ ಫೋನ್ ಅಲ್ಲದ ಫೋನಿನಂತಿರೊ ಪುಸ್ತಕ!

ಅತಿಯಾದ ಫೋನ್ ಬಳಕೆಯ ಚಟ ತಪ್ಪಿಸುವ ಸಲುವಾಗಿ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆಯು ಒಂದು ಉಪಾಯ ಹೂಡಿದ್ದು, ಥೇಟ್ ಫೋನ್‌ನಂತೆಯೇ ಕಾಣುವ, ಫೋನ್‌ನಷ್ಟೇ ಅಳತೆಯದ್ದಾಗಿರುವ, ಆದರೆ ಫೋನ್‌ನಿಂದ ಮನಸ್ಸನ್ನು ದೂರವುಳಿಸುವ ಒಂದು ಪುಟ್ಟ ಪುಸ್ತಕವನ್ನು ಹೊರತಂದಿದೆ. ಅದಕ್ಕೆ 'ಫೋನ್ ಡಿಟಾಕ್ಸ್' ಎಂದು ಹೆಸರಿಟ್ಟಿದೆ. 'ಈ ಫೋನ್ ಡಿಟಾಕ್ಸ್ ಅನ್ನು ನಾವೆಷ್ಟು ಫೋನ್‌ಗಳನ್ನು ಪ್ರೀತಿಸುತ್ತೇವೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ತಯಾರು ಮಾಡಿರುವುದಾಗಿ ಹೇಳಿಕೊಡಿರುವ ಸ್ಕೂಲ್ ಆಫ್ ಲೈಫ್ ಡಿಸೈನ್ ಸಂಸ್ಥೆ, ಮೊಬೈಲ್ ಬಿಟ್ಟು ಅದರ ಜಾಗದಲ್ಲಿ ಈ ಪುಸ್ತಕ ಇಟ್ಟುಕೊಂಡರೆ, ಅದರಿಂದಾದ ಬದಲಾವಣೆ ನಿಮಗೇ ಗೋಚರಿಸೀತು ಎಂದು ಹೇಳಿಕೊಂಡಿದೆ.
ಕರ್ನಾಟಕ ಚುನಾವಣೆ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ

ಕರ್ನಾಟಕ ಚುನಾವಣೆ : ಜೆಡಿಎಸ್‌ ಅಭ್ಯರ್ಥಿಗಳ 2ನೇ ಪಟ್ಟಿ

ಕರ್ನಾಟಕ ಜೆಡಿಎಸ್ ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 126 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು. ಬಿಜೆಪಿಯಲ್ಲಿ ಟಿಕೆಟ್ ಸಿಗದೆ ವಲಸೆ ಬಂದಿದ್ದ ಎಲ್ಲಾ ನಾಯಕರಿಗೂ 2ನೇ ಪಟ್ಟಿಯಲ್ಲಿ ಟಕೆಟ್ ನೀಡಲಾಗಿದೆ. ಕಾಂಗ್ರೆಸ್‌ ಟಿಕೆಟ್ ಕೈ ತಪ್ಪಿದ ಶಶಿಕುಮಾರ್ ಗುರುವಾರ ಜೆಡಿಎಸ್ ಸೇರಿದ್ದರು. ಹೊಸದುರ್ಗ ಕ್ಷೇತ್ರದಿಂದ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ರಾಮಚಂದ್ರ ಅವರಿಗೆ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಟಿಕೆಟ್ ನೀಡಿದೆ.