Short News

ಎಂಟನೇ ಅದ್ಭುತ: 'ಕರಾಳ ರಾತ್ರಿ'ಗಾಗಿ ದಯಾಳ್ ಜೊತೆ ಒಂದಾದ ಜಯಶ್ರೀನಿವಾಸನ್!

ಎಂಟನೇ ಅದ್ಭುತ: 'ಕರಾಳ ರಾತ್ರಿ'ಗಾಗಿ ದಯಾಳ್ ಜೊತೆ ಒಂದಾದ ಜಯಶ್ರೀನಿವಾಸನ್!

'ಬಿಗ್ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಗಾರ್ಡನ್ ಏರಿಯಾ ಗುಂಪಿನಲ್ಲಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗುರುತಿಸಿಕೊಂಡಿದ್ರೆ, ಲಿವಿಂಗ್ ಏರಿಯಾ ಗುಂಪಿನಲ್ಲಿ ದಯಾಳ್ ಪದ್ಮನಾಭನ್ ಗುರುತಿಸಿಕೊಂಡಿದ್ದರು. ಇಬ್ಬರ ಮಧ್ಯೆ 'ಬಿಗ್ಬಾಸ್' ಮನೆಯಲ್ಲಿ ಆತ್ಮೀಯ ಒಡನಾಟ ಇರಲಿಲ್ಲ. ಆದರೆ ಇದೀಗ ಇವರಿಬ್ಬರು ಸ್ನೇಹಿತರಾಗಿದ್ದಾರೆ. ದಯಾಳ್ ನಿರ್ದೇಶನದ 'ಕರಾಳ ರಾತ್ರಿ' ಚಿತ್ರಕ್ಕಾಗಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಬಣ್ಣ ಹಚ್ಚಿದ್ದಾರೆ. ದುರಾಸೆ ಇರುವ ಲೇವಾದೇವಿಗಾರನ ಪಾತ್ರದಲ್ಲಿ ಜಯಶ್ರೀನಿವಾಸನ್ ಅಭಿನಯಿಸುತ್ತಿದ್ದಾರೆ. ಹಿರೋ ಜಯರಾಂ ಕಾರ್ತಿಕ್ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
NTRO ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

NTRO ನೇಮಕಾತಿ... ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಶನ್ ಸಂಸ್ಥೆಯು ಸೈಂಟಿಸ್ಟ್ ಬಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ನೇರ ನೇಮಕಾತಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 62 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಎಪ್ರಿಲ್ 14 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. GATE Score 2016/2017/2018 ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. 56,100 ರಿಂದ 1,77,500 ರೂ ಪ್ರತಿ ತಿಂಗಳಿಗೆ ವೇತನ ನಿಗದಿ ಪಡಿಸಿದ್ದಾರೆ. ಈ ಪರೀಕ್ಷೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
ಬ್ಯೂಟಿ ಟಿಪ್ಸ್: ಮುಖದ ಅಂದ ಹೆಚ್ಚಿಸುವ ಕ್ಯಾರೆಟ್ ಫೇಸ್ ಮಾಸ್ಕ್

ಬ್ಯೂಟಿ ಟಿಪ್ಸ್: ಮುಖದ ಅಂದ ಹೆಚ್ಚಿಸುವ ಕ್ಯಾರೆಟ್ ಫೇಸ್ ಮಾಸ್ಕ್

ಕ್ಯಾರೆಟ್, ಮೊಸರು ಮತ್ತು ಕಡಲೆ ಹಿಟ್ಟಿನಿಂದ ಮಾಡಿದ ಮಾಸ್ಕ್‌ನಿಂದ ಮುಖದ ಮೇಲಿನ ಕಲೆಗಳನ್ನು ನಿವಾರಿಸಬಹುದು. ಇದಕ್ಕೆ ಬಳಸುವ ಪ್ರತಿಯೊಂದು ಸಾಮಗ್ರಿಯಲ್ಲೂ ಸೌಂದರ್ಯ ವೃದ್ಧಿಸುವ ಅಂಶಗಳಿವೆ. ಇದನ್ನು ಜತೆಯಾಗಿ ಬಳಸಿದಾಗ ಅದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಷಕಾಂಶಗಳಿಂದ ತುಂಬಿರುವ ಕ್ಯಾರೆಟ್ ತ್ವಚೆಗೆ ಹಿತಕಾರಿ.ಇದರಲ್ಲಿನ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಾಂಶಗಳು ತ್ವಚೆಗೆ ತುಂಬಾ ಲಾಭಕಾರಿ. ಮೊಸರು ಚರ್ಮದಲ್ಲಿ ಮೂಡುವ ಗುಳ್ಳೆ, ಮೊಡವೆ ಮತ್ತು ಕಂದು ಕಳೆಗಳನ್ನು ನಿವಾರಿಸುತ್ತದೆ. ಕಡಲೆ ಹಿಟ್ಟು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡಿ ಚರ್ಮವು ಕಾಂತಿಯುತವಾಗುವಂತೆ ಮಾಡುತ್ತದೆ.

ತಣ್ಣಗಿರಬೇಕಾದ ಫ್ರಿಡ್ಜ್, ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು!!

ತಣ್ಣಗಿರಬೇಕಾದ ಫ್ರಿಡ್ಜ್, ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು!!

ಚೀನಾದ ಕೆಫೆಯೊಂದರಲ್ಲಿ ಫ್ರಿಡ್ಜ್ ವೊಂದು ಸ್ಫೋಟಗೊಂಡ ಘಟನೆ ನಡೆದಿದ್ದು, ಯಾವುದೇ ಸಾವು - ನೋವು ಸಂಭವಿಸಿಲ್ಲ. ಮಾರ್ಚ್ 19ರಂದು ಚೀನಾದ ಪಿಂಗ್‍ದಿನ್‍ಶಾನ್ ಸಿಟಿಯಲ್ಲಿ ಈ ಅವಘಡ ನಡೆದಿದೆ. ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಂಗ್‍ದಿನ್‍ಶಾನ್ ಸಿಟಿಯ ಇಂಟರ್ ನೆಟ್ ಕೆಫೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಈ ವಿಡಿಯೋ ಸುಮಾರು 30 ಸೆಕೆಂಡ್‍ಗಳಿದ್ದು, ಗ್ರಾಹಕರೊಬ್ಬರು ಕ್ಯಾಶ್ ಕೌಂಟರ್ ಬಳಿ ನಡೆದುಕೊಂಡು ಹೋಗುವಾಗ ಆತನ ಹಿಂದೆ ಇದ್ದ ಫ್ರಿಡ್ಜ್ ಸ್ಫೋಟಗೊಂಡಿದೆ.