Short News

ಈ ಕಾರಣಕ್ಕೆ ಬಾಲಿವುಡ್ ನಟಿ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ.!

ಈ ಕಾರಣಕ್ಕೆ ಬಾಲಿವುಡ್ ನಟಿ ಕಂಗನಾ ಸೋಷಿಯಲ್ ಮೀಡಿಯಾದಲ್ಲಿ ಇಲ್ಲ.!

ದಿನೇ ದಿನೇ ಸೆಲೆಬ್ರಿಟಿಗಳಿಗೆ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಿದ್ದರೂ, ನಟಿ ಕಂಗನಾ ಮಾತ್ರ ಸೋಷಿಯಲ್ ಮೀಡಿಯಾಗೆ ಕಾಲಿಟ್ಟಿಲ್ಲ. ಯಾಕೆ ಅಂತ ಕೇಳಿದ್ರೆ, 'ಟೈಮ್ ಇಲ್ಲ' ಅಂತಾರೆ ನಟಿ ಕಂಗನಾ. ''ಕೆಲ ಏಜೆಂಟ್ ಗಳು ನನ್ನ ಬಳಿ ಬಂದು ಒಂದು ಸೋಷಿಯಲ್ ಮೀಡಿಯಾ ಅಕೌಂಟ್ ಓಪನ್ ಮಾಡಿ ಸಾಕು. ಅದರಲ್ಲಿ ನಾವೇ ಪೋಸ್ಟ್ ಮಾಡ್ತೀವಿ. ನಾವೇ ಅಕೌಂಟ್ ಮ್ಯಾನೇಜ್ ಮಾಡ್ತೀವಿ ಅಂತಾರೆ. ಆದ್ರೆ, ನನಗೆ ಅದು ಸರಿ ಎನಿಸಲಿಲ್ಲ. ಲಕ್ಷಾಂತರ ಜನರ ಮುಂದೆ ನನ್ನ ಹೆಸರಲ್ಲಿ ಇನ್ನೊಬ್ಬರು ಪೋಸ್ಟ್ ಮಾಡುವುದು, ಫೇಕ್ ಮಾಡುವುದು ನನಗೆ ಇಷ್ಟ ಆಗುವುದಿಲ್ಲ'' ಅಂತ ಹೇಳಿದ್ದಾರೆ ನಟಿ ಕಂಗನಾ.

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!

ಬಿಜೆಪಿ ಭದ್ರಕೋಟೆ ಕೊಡಗಿನಲ್ಲಿ ಬಂಡಾಯದ ಸೂಚನೆ..?!

ಇಲ್ಲಿಯವರೆಗೆ ಬಿಜೆಪಿಯ ಭದ್ರಕೋಟೆ ಕೊಡಗಿನಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಮಡಿಕೇರಿ ಕ್ಷೇತ್ರಕ್ಕೆ ಅಪ್ಪಚ್ಚುರಂಜನ್ ಅವರಿಗೆ ಟಿಕೆಟ್ ನೀಡಲಾದ ಹಿನ್ನಲೆಯಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೀಗ ಒಂದಷ್ಟು ರಾಜಕೀಯ ಕಳೆ ಬಂದಂತಾಗಿದೆ.

ನಗರದ ಮಹದೇವಪೇಟೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅಪ್ಪಚ್ಚುರಂಜನ್ ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾಡಳಿತದ ಭವನಕ್ಕೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಈ ಬಾರಿ ಕೂಡ ಜ

ಹೆತ್ತ ತಂದೆಯಿಂದಲೇ 13ವರ್ಷದ ಮಗಳ ಮೇಲೆ ಅತ್ಯಾಚಾರ, ನೊಂದ ಬಾಲಕಿ ಸಾವಿಗೆ ಶರಣು

ಹೆತ್ತ ತಂದೆಯಿಂದಲೇ 13ವರ್ಷದ ಮಗಳ ಮೇಲೆ ಅತ್ಯಾಚಾರ, ನೊಂದ ಬಾಲಕಿ ಸಾವಿಗೆ ಶರಣು

ಬಿಹಾರದ ಪಶ್ಚಿಮ ಚಂಪರ್ಣ ಜಿಲ್ಲೆಯ ಮಜಾಹುಲಿಯ ಠಾಣಾ ವ್ಯಾಪ್ತಿಯಲ್ಲಿ ಹೆತ್ತ ತಂದೆಯೇ ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾನೆ. 30 ವರ್ಷದ ಕಾಮುಕ ತಂದೆ ಸ್ವಂತ ಮಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ತಾಯಿ ಮತ್ತು ಮಗಳು ಪಂಚಾಯಿತಿ ಬಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದು, ಈ ವೇಳೆ ಪಂಚಾಯಿತಿ ಸಭೆಯಲ್ಲೇ ತಾಯಿ ಮಗಳ ಮೇಲೆ ಆಕ್ರೋಶ ವ್ಯಕ್ತ ಪಡಿಸಿ ಹೊರ ನಡೆದಿದ್ದಾನೆ. ಈ ಘಟನೆಯಿಂದ ನೊಂದು ಖಿನ್ನತೆಗೊಳಗಾಗಿದ್ದ ಬಾಲಕಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಿಎಸ್ ವೈ: ರಮಣ್ ಸಿಂಗ್

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಿಎಸ್ ವೈ: ರಮಣ್ ಸಿಂಗ್

ಕರ್ನಾಟಕಕ್ಕೆ ಹೊಸ ನಾಯಕತ್ವದ ಅಗತ್ಯವಿದೆ" ಎಂದು ಛತ್ತೀಸ್ ಗಢ ಮುಖಕ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ.

ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿ ಎಸ್ ಯಡಿಯೂರಪ್ಪ ಏ.19 ರಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗಿದ್ದ ರಮಣ್ ಸಿಂಗ್ ಯಡಿಯೂರಪ್ಪನವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಯಡಿಯೂರಪ್ಪನವರು ನನಗೆ ಹಳೇ ಸ್ನೇಹಿತರು. ಶಿಕಾರಿಪುರದಿಂದ ಸ್ಪರ್ಧಿಸುತ್ತಿರುವ ಅವರಿಗೆ