Short News

ಅಭಿಮಾನಿಯ ನಿಧನಕ್ಕೆ ಕಂಬನಿ ಮಿಡಿದ ಸುದೀಪ್

ಅಭಿಮಾನಿಯ ನಿಧನಕ್ಕೆ ಕಂಬನಿ ಮಿಡಿದ ಸುದೀಪ್

ಕೆಲವು ದಿನಗಳ ಹಿಂದೆ ಕಿಚ್ಚನ ಅಭಿಮಾನಿಯೊಬ್ಬರು ಸುದೀಪ್ ಅವರನ್ನ ಭೇಟಿ ಮಾಡಲೇಬೇಕು ಎಂದು ಹಠ ಮಾಡಿದ್ದರು. ಅವರನ್ನ ಬೇಟಿ ಮಾಡಿದ ನಂತರ ತಿಳಿದ ವಿಚಾರ ಆಕೆ ಕೆಲವೇ ದಿನಗಳಲ್ಲಿ ತನ್ನ ಜೀವನದ ಪಯಣವನ್ನ ಮುಗಿಸಲಿದ್ದಾಳೆ ಎನ್ನುವುದು. ಸುದೀಪ್ ಕ್ಯಾನ್ಸರ್ ಗೆ ತುತ್ತಾಗಿದ್ದ ತಮ್ಮ ಅಭಿಮಾನಿಯನ್ನ ಇತ್ತಿಚಿಗಷ್ಟೇ ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದರು. ಜೊತೆಯಲ್ಲಿ ಪೋಟೋ ತೆಗೆಸಿಕೊಂಡು ಒಳ್ಳೆ ಚಿಕಿತ್ಸೆ ಪಡೆಯುವಂತೆ ತಿಳಿಸಿದ್ದರು. ಆದರೆ ಕಿಚ್ಚ ಅಪ್ಪಟ ಅಭಿಮಾನಿ ವಿನುತಾ ಕ್ಯಾನ್ಸರ್ ರೋಗದಿಂದ ಬಳಲಿ ಸಾವನ್ನಪ್ಪಿದ್ದಾರೆ. ನೆಚ್ಚಿನ ಅಭಿಮಾನಿಯನ್ನ ಕಳೆದುಕೊಂಡ ಸುದೀಪ್, ವಿನುತಾ ಅವರನ್ನು ನೆನೆಸಿಕೊಂಡು ಮರುಗಿದ್ದಾರೆ.
ಶ್ರೀದೇವಿನ ಕೊಂದ ದೇವರನ್ನು ದ್ವೇಷಿಸುತ್ತೇನೆ: ರಾಮ್ ಗೋಪಾಲ್ ವರ್ಮಾ

ಶ್ರೀದೇವಿನ ಕೊಂದ ದೇವರನ್ನು ದ್ವೇಷಿಸುತ್ತೇನೆ: ರಾಮ್ ಗೋಪಾಲ್ ವರ್ಮಾ

ನಟಿ ಶ್ರೀದೇವಿ ಅಂದ-ಚೆಂದಕ್ಕೆ ಮಾರು ಹೋಗಿದ್ದ ರಾಮ್ ಗೋಪಾಲ್ ವರ್ಮಾ,ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಶ್ರೀದೇವಿಯನ್ನ ಹತ್ತಿರದಿಂದ ನೋಡುವ ಸಲುವಾಗಿಯಂತೆ. ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಶ್ರೀದೇವಿಗಾಗಿ 'ಕ್ಷಣ ಕ್ಷಣಂ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದರಂತೆ. ''ಕ್ಷಣ ಕ್ಷಣಂ' ಶ್ರೀದೇವಿಗಾಗಿ ನಾನು ಬರೆದ ಲವ್ ಲೆಟರ್''ಎಂದು ಟ್ವೀಟ್ ಮಾಡಿದ್ದಾರೆ. ''ಯಾವತ್ತೂ ನಾನು ದೇವರನ್ನ ಇಷ್ಟು ದ್ವೇಷಿಸಿಲ್ಲ. ಪ್ರಕಾಶಮಾನವಾದ ಬೆಳಕನ್ನ ಇಂದು ದೇವರು ಕಿತ್ತುಕೊಂಡಿದ್ದಾನೆ. ನನ್ನ ಹೃದಯ ಬೋನಿಕಪೂರ್ ಗಾಗಿ ಮಿಡಿಯುತ್ತಿದೆ''. ಏಯ್ ಬಾಲಾಜಿ,ನನ್ನನ್ನ ಉಳಿಸಿ ಶ್ರೀದೇವಿಯನ್ನ ಮಾತ್ರ ಯಾಕೆ ನೀನು ಕರೆದುಕೊಂಡೆ?ಎಂದಿದ್ದಾರೆ ವರ್ಮಾ.
ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಹಾಫ್ ಮ್ಯಾರಾಥಾನ್‌ಗೆ ಚಾಲನೆ ನೀಡಿದ ರಾಹುಲ್ ಗಾಂಧಿ

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿಜಯಪುರದಲ್ಲಿ ಭಾನುವಾರ ಬೆಳಗ್ಗೆ ಹಾಫ್‌ ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿದರು. ಭಾನುವಾರ ಮುಂಜಾನೆ ವೃಕ್ಷ ಅಭಿಯಾನ ಟ್ರಸ್ಟ್‌ ವಿಜಯಪುರದಲ್ಲಿ 'ವೃಕ್ಷೋತ್ಥಾನ್ 2018' ಹಾಫ್ ಮ್ಯಾರಾಥಾನ್ ಆಯೋಜನೆ ಮಾಡಿತ್ತು. ಹಸಿರು ‌ವಿಜಯಪುರ ನಿರ್ಮಾಣಕ್ಕಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ವಿಜಯಪುರದ ಗೋಳಗುಮ್ಮಟ ಆವರಣದಲ್ಲಿ ರಾಹುಲ್ ಗಾಂಧಿ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ನಟ ಯಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಬಳ ಕೊಡಲು ಸಾಧ್ಯವಿಲ್ಲ, 3500 ಸಿಬ್ಬಂದಿಗಳಿಗೆ ಉದ್ಯಮಿ  ಮೆಹುಲ್ ಚೋಕ್ಸಿ ಪತ್ರ

ಸಂಬಳ ಕೊಡಲು ಸಾಧ್ಯವಿಲ್ಲ, 3500 ಸಿಬ್ಬಂದಿಗಳಿಗೆ ಉದ್ಯಮಿ ಮೆಹುಲ್ ಚೋಕ್ಸಿ ಪತ್ರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಪ್ರಮುಖ ಆರೋಪಿ, ಉದ್ಯಮಿ ಮೆಹುಲ್ ಚೋಕ್ಸಿ ತನ್ನ ಸಂಸ್ಥೆಯ ಸಿಬ್ಬಂದಿಗಳಿಗೆ ಬಾಕಿ ವೇತನ ಪಾವತಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ತನ್ನ ಸಿಬ್ಬಂದಿಗಳಿಗೆ ಈ ಸಂಬಂಧ ಪತ್ರ ಬರೆದು ತಾನು ಈಗಾಗಲೇ ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದೇನೆ. ನನ್ನ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವುಗಳೆಲ್ಲೂ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಪ್ರಸ್ತುತ ಸಿಬ್ಬಂದಿಗಳ ಬಾಕಿ ವೇತನ ಸಾಧ್ಯವಿಲ್ಲ ವಿವಿಧ ತನಿಖಾ ಸಂಸ್ಥೆಗಳು ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇದರಿಂದ ಗೊಂದಲ ಸೃಷ್ಟಿಯಾಗಿದೆ. ನನ್ನ ಸಮಸ್ಯೆಯನ್ನು ನಾನೇ ಎದುರಿಸುತ್ತೇನೆ. ಸತ್ಯಕ್ಕೆ ಯಾವತ್ತು ಜಯ ಎಂದಿದ್ದಾರೆ.