Short News

ಸುದೀಪ್ ಫಾಲೋ ಮಾಡುತ್ತಿರುವ 4 ಬಾಲಿವುಡ್ ಸ್ಟಾರ್ ಗಳಿವರು

ಸುದೀಪ್ ಫಾಲೋ ಮಾಡುತ್ತಿರುವ 4 ಬಾಲಿವುಡ್ ಸ್ಟಾರ್ ಗಳಿವರು

ಸುದೀಪ್ ಜನಪ್ರಿಯತೆ ಹೆಚ್ಚಾಗುತ್ತಿರುವ ಹಾಗೆ ಅವರ ಟ್ಟಿಟ್ಟರ್ ಖಾತೆಯ ಫಾಲೋವರ್ಸ್ ಸಂಖ್ಯೆ ಕೂಡ ಅದೇ ವೇಗದಲ್ಲಿ ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ಸುದೀಪ್ ಟ್ವಿಟ್ಟರ್ ನಲ್ಲಿ 2 ಮಿಲಿಯನ್ ಫಾಲೋವರ್ಸ್ ಅನ್ನು ಪಡೆದಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರನ್ನು ಅವರ ಅಭಿಮಾನಿಗಳು ಫಾಲೋ ಮಾಡುವುದು ಕಾಮನ್. ಆದರೆ ಕಿಚ್ಚ ಬಾಲಿವುಡ್ ಚಿತ್ರರಂಗ ನಾಲ್ಕು ಸ್ಟಾರ್ ರನ್ನು ಫಾಲೋ ಮಾಡುತ್ತಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ಸದ್ಯ ಕೇವಲ 52 ಜನರನ್ನು ಮಾತ್ರ ಫಾಲೋ ಮಾಡುತ್ತಿರುವ ಕಿಚ್ಚ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ರಿತೇಶ್ ದೆಶ್ ಮುಖ್ ಮತ್ತು ವಿವೇಕ್ ಓಬೆರಾಯ್ ಅವರನ್ನು ಫಾಲೋ ಮಾಡುತ್ತಿದ್ದಾರೆ
ನಗದು ಕೊರತೆ :  3 ಲಕ್ಷ ಕೋಟಿಗೂ ಅಧಿಕ ಹಣದ ಚಲಾವಣೆ ಸ್ಥಗಿತ!

ನಗದು ಕೊರತೆ : 3 ಲಕ್ಷ ಕೋಟಿಗೂ ಅಧಿಕ ಹಣದ ಚಲಾವಣೆ ಸ್ಥಗಿತ!

ನೋಟು ನಿಷೇಧ ಬಳಿಕ ದೇಶದಲ್ಲಿ ಎರಡನೇ ಬಾರಿಗೆ ನಗದು ಕೊರತೆ ಉಂಟಾಗಿದ್ದು, ಸುಮಾರು 3 ಲಕ್ಷ ಕೋಟಿಗೂ ಅಧಿಕ ಹಣ ಚಲಾವಣೆಯಾಗದೇ ಸ್ಥಗಿತವಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ ತೆರಿಗೆ ಸಂಬಂಧಿತ ವಿವಿಧ ಪ್ರಕರಣಗಳಲ್ಲಿ ದೊರೆತ ಸುಮಾರು 3.2ಲಕ್ಷ ಕೋಟಿ ಹಣ ಚಲಾವಣೆಯಾಗದೇ ಉಳಿದಿದೆ. ತೆರಿಗೆ ಸಂಬಂಧಿತ ಪ್ರಕರಣಗಳ ವಿಚಾರಣೆಗಳು ನ್ಯಾಯಾಲಯದಲ್ಲಿದ್ದು, ಈ ಪ್ರಕರಣಗಳು ಇತ್ಯರ್ಥವಾಗುವವರೆಗೂ ಈ ಅಪಾರ ಪ್ರಮಾಣದ ನಗದು ಬಳಕೆಗೆ ಕಾನೂನು ತೊಡಕು ಉಂಟಾಗುತ್ತಿದೆ. ಈ ಪೈಕಿ ಸುಮಾರು 2.40 ಲಕ್ಷ ಕೋಟಿ ನೇರ ತೆರಿಗೆ ಹಣ ಮತ್ತು 1.18 ಲಕ್ಷ ಕೋಟಿ ಹಣ ಪರೋಕ್ಷ ತೆರಿಗೆ ಹಣವಾಗಿದೆ
ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ವಕೀಲನಿಂದ ಲೈಂಗಿಕ ಕಿರುಕುಳ

ಮದ್ರಾಸ್ ಹೈಕೋರ್ಟ್ ವಕೀಲ ಕೆ.ಪಿ.ಪ್ರೇಮ್‌ ಅನಂತ್ ಎಂಬುವವನನ್ನು ತಿರುವನಂತಪುರದಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ. ಹಾಗೇ ಈತ 2006ರಲ್ಲಿ ತಮಿಳುನಾಡಿನ ಆರ್‌.ಕೆ.ನಗರ ಕ್ಷೇತ್ರದಿಂದ BJPಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂದು ತಿಳಿದು ಬಂದಿದೆ. ಸಾಮಾನ್ಯ ಟಿಕೆಟ್‌ ಪಡೆದಿದ್ದ ಆರೋಪಿ ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ ಪ್ರವೇಶಿಸಿದ್ದ. ‘ನಾನು ವಕೀಲ, ನನಗೆ ಬಿಜೆಪಿ ಜತೆ ಸಂಪರ್ಕ ಇದೆ' ಎಂದು ಆರೋಪಿಯು ಸಹ ಪ್ರಯಾಣಿಕರಿಗೆ ಧಮಕಿ ಹಾಕಿದ್ದರು. ನಂತರ ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ನೈಲ್ ಕಟರ್ ನುಂಗಿದ ಮಗು!

ನೈಲ್ ಕಟರ್ ನುಂಗಿದ ಮಗು!

ಚೈನಾದ ಚಂಗ್ ಚುನ್ ಎಂಬಲ್ಲಿ ಒಂದು ವರ್ಷದ ಮಗುವೊಂದು ನೈಲ್ ಕಟರ್ ನುಂಗಿದ ಘಟನೆ ನಡೆದಿದೆ. ತಾಯಿ ಉಪಯೋಗಿಸಿದ್ದ ನೈಲ್ ಕಟರ್ ಅನ್ನು ತೆಗೆದುಕೊಂಡು 16 ತಿಂಗಳ ಮಗು ಇದೊಂದು ಆಟವೆಂದು ಭಾವಿಸಿ ನೈಲ್ ಕಟರ್ ಅನ್ನು ನುಂಗಿಬಿಟ್ಟಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಹೊಟ್ಟೆಯೊಳಗೆ ಸೇರಿದ್ದ 2.4 ಇಂಚಿನ ನೈಲ್ ಕಟರ್ ನ್ನು ವೈದ್ಯರು ಎಂಡೋಸ್ಕೋಪಿ ಮೂಲಕ ಹೊರ ತೆಗೆದಿದ್ದಾರೆ. ಸದ್ಯ ಮಗು ಆರೋಗ್ಯವಾಗಿದ್ದು, ಮನೆಗೆ ವಾಪಸ್ಸಾಗಿದೆ.