Short News

'ಪಿಯಾ ತೂ ಅಬ್‌ ತೋ ಆಜಾ' ಎಂದು ಸಖತ್ ಸ್ಟೆಪ್ಸ್ ಹಾಕಿದ ಖುಷ್ಬೂ

'ಪಿಯಾ ತೂ ಅಬ್‌ ತೋ ಆಜಾ' ಎಂದು ಸಖತ್ ಸ್ಟೆಪ್ಸ್ ಹಾಕಿದ ಖುಷ್ಬೂ

ಭಾನುವಾರ ಬಹುಬಾಷಾ ನಟಿ ಖುಷ್ಪೂ ತನ್ನ ಗೆಳತಿ, ತಮಿಳು ನಟಿ ಸುಕನ್ಯಾ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ವೀಕೆಂಡ್‌‌‌‌‌‌‌‌ ಮಸ್ತಿ ಮಾಡಲು ಖುಷ್ಬೂ, ಸುಕನ್ಯಾ, ಕಾಮಿಡಿ ನಟ ಮನೋಬಲ ಹಾಗೂ ಇನ್ನಿತರ ಕಾಲಿವುಡ್ ಸೆಲಬ್ರಿಟಿಗಳು ಚೆನ್ನೈನ ಸವೇರಾ ಹೋಟೆಲ್‌‌ನಲ್ಲಿ ಸೇರಿದ್ದಾರೆ. ಈ ವೇಳೆ ಹಿನ್ನೆಲೆಯಲ್ಲಿ ಬರುತ್ತಿದ್ದ ಬಾಲಿವುಡ್‌‌ ಫೇಮಸ್ ಗೀತೆ ' ಪಿಯಾ ತೂ ಅಬ್‌ ತೋ ಆಜಾ' ಹಾಡಿಗೆ ಖುಷ್ಬೂ ಡ್ಯಾನ್ಸ್ ಮಾಡಲು ಆರಂಭಿಸಿದ್ದಾರೆ.
ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ  ಕಿತ್ತಾಟ !

ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಕಿತ್ತಾಟ !

ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಗಲಾಟೆ ಆರಂಭವಾಗಿದೆ. ಬೆಳಗಾವಿಯಲ್ಲಿ  ತೆಲಗಿ ಪತ್ನಿ ಶಹೀದಾ, ಮಗಳು ಸನಾ ಮೇಲೆ ತೆಲಗಿ ಸಹೋದರ ಅಜೀಂ ತೆಲಗಿ ಹಲ್ಲೆ‌ ನಡೆಸಿದ್ದಾನೆ. ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ತೆಲಗಿ ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಸಾವನ್ನಪ್ಪಿದ್ದ. ಈತನ ಸಾವಿನ ಬಳಿಕ ಹಗರಣದಲ್ಲಿಗಳಿಸಿದ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಶಹೀದಾ ನಿರ್ಧರಿಸಿದ್ದರು. ಈ ಬಗ್ಗೆ ಪುಣೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಇದಕ್ಕೆ ಸಹೋದರನ ವಿರೋಧ ವ್ಯಕ್ತವಾಗಿದ್ದು ಶಹೀದಾ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.
ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಕ್ರಿಕೆಟ್​ನ ಪ್ರತಿಷ್ಠಿತ ವೆಬ್​ಸೈಟ್​ ಇಎಸ್​ಪಿಎನ್​ ಅತ್ಯುತ್ತಮ ಪ್ರದರ್ಶನ ತೋರಿರುವ ಆಟಗಾರರಿಗೆ ಕ್ರಿಕ್​ಇನ್ಫೋ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು,2017ರ ಪ್ರಶಸ್ತಿಗಳಿಸಿರುವವರ ಪಟ್ಟಿಯನ್ನು ಪ್ರಕಟಿಸಿದೆ. ಭಾರತದ 3ಜನ ಈ ಪ್ರಶಸ್ತಿಗೆ ಆಯ್ಜೆಯಾಗಿದ್ದು,ಯಜುವೀಂದ್ರ್​ ಚಹಲ್​ ಅತ್ಯುತ್ತಮ ಟಿ20 ಬೌಲರ್, ಕುಲ್​ದೀಪ್​ ಯಾದವ್​ ಡೆಬ್ಯು ಕ್ರಿಕೆಟರ್​ ಆಗಿ ಹೊರಹೊಮ್ಮಿದ್ದಾರೆ. ಇನ್ನು ವರ್ಷದ ಬ್ಯಾಟಿಂಗ್​ ಪರ್ಫಾರ್ಮರ್​ ಆಗಿ ಹರ್ಮನ್​ಪ್ರೀತ್​ ಕೌರ್​ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 12 ಪ್ರಶಸ್ತಿಗಳಲ್ಲಿ 3 ಜನ ಭಾರತೀಯರಿದ್ದು, ಅತಿ ಹೆಚ್ಚು ಪ್ರಶಸ್ತಿ ಪಡೆದ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅತ್ಯುತ್ತಮ ಸಂವಹನಾಕಾರ, ಅವರ ಭಾಷಣ ಕಲೆಗೆ ಹೋಲಿಸಬಹುದಾದ ಇನ್ನೊಬ್ಬ ರಾಜಕಾರಣಿ ಸದ್ಯಕ್ಕಂತೂ ರಾಷ್ಟ್ರ ರಾಜಕಾರಣದಲ್ಲಿ ದೂರಕ್ಕೂ ಕಾಣ ಸಿಗುತ್ತಿಲ್ಲ. ಇದ್ದರೂ ಮೋದಿ ಅವರ ಶೈಲಿಯನ್ನೇ ಅನುಕರಿಸುವವರು ಇದ್ದಾರೆ ಅಷ್ಟೆ.

ಅವರ ಭಾಷಣ ಶೈಲಿ, ಧ್ವನಿ ಏರಿಳಿತ, ಹಾವ ಭಾವ, ಪದಗಳ ಆಯ್ಕೆ, ಎಲ್ಲವೂ ಗಮನಿಸಲರ್ಹ. ಅವರ ಭಾಷಣವನ್ನು ಸಂಶೋಧಿಸಿ ಪುಟಗಟ್ಟಲೆ ಪ್ರಬಂಧ ಬರೆದ ಪತ್ರಕರ್ತರೂ ಇದ್ದಾರೆ. ಈ ಲೇಖನದಲ್ಲೂ ಇದೇ ಪ್ರಯತ್ನವನ್ನು ಮಾಡ ಹೊರಟಿದ್ದೇವೆ.