Short News

ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?

ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?

ಸಿಟ್ರನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಲವಾದ ಹಿಡಿತವನ್ನು ಸಾಧಿಸಲು ಎದುರುನೋಡುತ್ತಿದೆ. ಹಿಂದೆ ಸಿಟ್ರನ್ ಸಿ-3 ಹ್ಯಾಚ್ ಬ್ಯಾಕ್ ಮತ್ತು ಸಿ-3 ಏರ್‌ಕ್ರಾಸ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಿ, ಈಗ ಹೊಸ ಹ್ಯಾಚ್‌ಬ್ಯಾಕ್‌ ಕೂಪೆಯನ್ನು ಪರಿಚಯಿಸುವ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯಲು ಸಜ್ಜಾಗಿಬಿಟ್ಟಿದೆ.
ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್‌ಫೋನ್‌ಗಳಂತೆ ಅಗ್ಗದ ಬೆಲೆ

ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್‌ಫೋನ್‌ಗಳಂತೆ ಅಗ್ಗದ ಬೆಲೆ

ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಶಿಯೋಮಿ (Xiaomi) ಕಡಿಮೆ ಬೆಲೆಯಲ್ಲಿ ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಮಾಡೆಲ್‌ಗಳನ್ನು ತರುವ ಮೂಲಕ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಜನಪ್ರಿಯಗೊಳಿಸಿದೆ. ಇದೀಗ ಈ ಜನಪ್ರಿಯ ಕಂಪನಿ ಶಿಯೋಮಿ (Xiaomi) ತನ್ನ ಮೊದಲ ಎಲೆಕ್ಟ್ರಿಕ್ ಕಾರು ಶಿಯೋಮಿ SU7 (Xiaomi SU7) ಅನ್ನು ಬಿಡುಗಡೆಗೊಳಿಸಿದೆ.
ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್‌ಗೆ ಫಿದಾ ಆಗ್ತೀರ!

ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಇಂಟೀರಿಯರ್‌ಗೆ ಫಿದಾ ಆಗ್ತೀರ!

ವಂದೇ ಭಾರತ್ ಸ್ಲೀಪರ್ ಕೋಚ್‌ಗಳ ಮೇಲೆ ಭಾರತೀಯ ರೈಲ್ವೆಯು ಕೆಲಸ ಮಾಡುತ್ತಿದೆ. ರಾತ್ರಿ ಪ್ರಯಾಣಕ್ಕಾಗಿ ಪ್ರೀಮಿಯಂ ಸೇವೆ ಒದಗಿಸಲು ಇವುಗಳನ್ನು ನಿರ್ಮಿಸಲಾಗುತ್ತಿದೆ. ಸದ್ಯ ಈ ಸ್ಲೀಪರ್ ಕೋಚ್‌ಗಳ ಮೂಲ ಮಾದರಿಯನ್ನು BEML ತೈಯಾರಿಸುತ್ತಿದ್ದು, ಶೀಘ್ರದಲ್ಲೇ ಪ್ರಾಯೋಗಿಕವಾಗಿ ಹೊರತರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಎಲೆಕ್ಟ್ರಿಕ್‌ ಲೋಕಕ್ಕೆ ಎಸ್‌ಯುವಿ  ದೈತ್ಯನ ಎಂಟ್ರಿ

ಎಲೆಕ್ಟ್ರಿಕ್‌ ಲೋಕಕ್ಕೆ ಎಸ್‌ಯುವಿ ದೈತ್ಯನ ಎಂಟ್ರಿ

ಪ್ರಸಿದ್ದ ಐಷಾರಾಮಿ ಎಸ್‌ಯುವಿ ಕಾರು ನಿರ್ಮಾಣ ಕಂಪನಿ ರೇಂಜ್‌ ರೋವರ್‌ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಭಾರತೀಯ ಸೆಲೆಬ್ರಿಟಿಗಳಿಗಂತೂ ರೇಂಜ್‌ ರೋವರ್‌ನ ಯಾವುದಾದರೂ ಒಂದು ಎಸ್‌ಯುವಿ ತನ್ನ ಕಾರು ಕಲೆಕ್ಷನ್‌ನಲ್ಲಿ ಇಲ್ಲದೇ ಇದ್ದರೆ ಅದು ಅಪೂರ್ಣವೇ ಎನ್ನಬಹುದು. ಇದೀಗ ಎಸ್‌ಯುವಿ ಪ್ರೀಯರಿಗೆ ರೇಂಜ್‌ ರೋವರ್‌ ಹೊಸ ಸುದ್ದಿಯನ್ನು ತಂದಿದೆ.