Short News

ಬಾಲಿವುಡ್ ನಿರ್ದೇಶಕನ ಜೊತೆ ಕಾಣಿಸಿಕೊಂಡ 'ಮುಗುಳುನಗೆ' ಬೆಡಗಿ

ಬಾಲಿವುಡ್ ನಿರ್ದೇಶಕನ ಜೊತೆ ಕಾಣಿಸಿಕೊಂಡ 'ಮುಗುಳುನಗೆ' ಬೆಡಗಿ

'ಮುಗುಳುನಗೆ' ನಂತರ ಯಾವುದೇ ಸಿನಿಮಾ ಒಪ್ಪಿಕೊಳ್ಳದ ನಿಖಿತಾ ನಾರಾಯಣ್ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ಪ್ರಕಾಶ್ ಝಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ ನಟಿ ನಿಖಿತಾ. ಇತ್ತೀಚಿಗಷ್ಟೆ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಾಶ್ ಝಾ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿರುವ ನಿಖಿತಾ ಅದರ ಜೊತೆಯಲ್ಲಿ ನಿರ್ದೇಶಕರನ್ನ ಬೇಟಿ ಮಾಡಿದ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ. ಸದ್ಯ ಫೋಟೋ ನೋಡಿರುವ ಅಭಿಮಾನಿಗಳು ಬಿಟೌನ್ ನಲ್ಲಿ ಅಭಿನಯ ಮಾಡುತ್ತೀರಾ ಎನ್ನುವ ಪ್ರಶ್ನೆಗಳನ್ನು ಕೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

ಬೆಂಗಳೂರಿನಲ್ಲಿ ಕೆಲಸ ಮಾಡಲು ಅತ್ಯುತ್ತಮವಾಗಿರುವ 10 ಕಂಪನಿಗಳು

  • ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಹೆಮ್ಮೆಯ ಬೆಂಗಳೂರು, ಪ್ರಮುಖ ಸ್ಟಾರ್ಟ್ಅಪ್ ಹಬ್ ಆಗಿಯೂ ಗುರುತಿಸಿಕೊಂಡಿದೆ. ಬೃಹತ್ ಹಾಗೂ ಸಣ್ಣ ಕಂಪನಿಗಳು, ಸಾವಿರಾರು ಸಂಖ್ಯೆಯ ಉದ್ಯಮಗಳು ದೇಶದ ಎಲ್ಲೆಡೆಯಿಂದ ಬರುವ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿವೆ. ಏರೋನಾಟಿಕ್ಸ್, ಅಟೋಮೊಬೈಲ್ ಬಿಡಿಭಾಗಗಳ ತಯಾರಿಕೆ, ಬಯೊಟೆಕ್ನಾಲಜಿ, ಎಲೆಕ್ಟ್ರಾನಿಕ್ ಮಶೀನ್ ಟೂಲ್ಸ್, ಬಾಹ್ಯಾಕಾಶ ಸಂಶೋಧನೆ, ವೈಜ್ಞಾನಿಕ ಅನ್ವೇಷಣೆ, ಹಾಗೂ ರೇಷ್ಮೆ ಉದ್ಯಮ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.

ಇಂದಿನ (ಜೂ.23) ಪೆಟ್ರೋಲ್ ಮತ್ತು ಡಿಸೇಲ್ ಬೆಲೆ

ಇಂದಿನ (ಜೂ.23) ಪೆಟ್ರೋಲ್ ಮತ್ತು ಡಿಸೇಲ್ ಬೆಲೆ

ದೆಹಲಿ: ಪೆಟ್ರೋಲ್: 75.93 / ಲೀಟರ್, ಡೀಸೆಲ್: 67.61 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 78.61 / ಲೀಟರ್ , ಡೀಸೆಲ್: 70.16 / ಲೀಟರ್. ಮುಂಬೈ: ಪೆಟ್ರೋಲ್: 83.61 / ಲೀಟರ್ , ಡೀಸೆಲ್: 71.87 / ಲೀಟರ್. ಚೆನ್ನೈ: ಪೆಟ್ರೋಲ್: 78.80 / ಲೀಟರ್ , ಡೀಸೆಲ್: 71.36 / ಲೀಟರ್. ಬೆಂಗಳೂರು: ಪೆಟ್ರೋಲ್: 77.16 / ಲೀಟರ್, ಡೀಸೆಲ್: 68.62 / ಲೀಟರ್. ಹೈದರಾಬಾದ್: ಪೆಟ್ರೋಲ್: 80.43 / ಲೀಟರ್, ಡೀಸೆಲ್: 73.67 / ಲೀಟರ್.73.49
ಅಂಬಾನಿ ಅವರ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

ಅಂಬಾನಿ ಅವರ ಕೆಲಸದವರ ಸಂಬಳ ಕೇಳಿದರೆ ನೀವೂ ಕೂಡ ಶಾಕ್ ಆಗುವಿರಿ!

ಮುಖೇಶ್ ಅಂಬಾನಿ ತನ್ನ ಕೆಲಸಗಾರರಿಗೆ ಸಂಬಳ ನೀಡುವ ವಿಷಯ ಬಂದಾಗ ಹಿಂದೇಟು ಹಾಕುವುದಿಲ್ಲ.ಹಾಗಾಗಿ ಅವರು, ಈ ಮನೆಯ ನಿರ್ವಹಣೆ ಮಾಡುವ 600 ಕೆಲಸಗಾರರಿಗೆ ಸಂಬಳ ನೀಡಲು ಉದಾರ ಮನಸ್ಸು ತೋರುತ್ತಾರೆ.ವರದಿಯ ಪ್ರಕಾರ ಇಲ್ಲಿನ ಸಿಬ್ಬಂದಿ ಮೊದಲು ಪ್ರಾಥಮಿಕವಾಗಿ 6000 ರೂಪಾಯಿ ನೀಡಲಾಗುತ್ತಿತ್ತು ಮತ್ತು ಈಗ 2 ಲಕ್ಷ ತಿಂಗಳ ಸಂಬಳವನ್ನು ಅವರು ಪಡೆಯುತ್ತಿದ್ದಾರಂತೆ..! ಇದರಲ್ಲಿ ವಿದ್ಯಾಭ್ಯಾಸ ಭತ್ಯೆ, ಲೈಫ್ ಇನ್ಸುರೆನ್ಸ್ ಗಳು ಕೂಡ
ಸೇರಿರುತ್ತದೆ. ಅವರಲ್ಲಿ ಇಬ್ಬರು ಕೆಲಸಗಾರರ ಮಕ್ಕಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರಂತೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more