Short News

ಮೈಸೂರಿನ ಯುವರಾಣಿಯಾಗಿ ಗುರುತು ಸಿಗದಂತಾದ ನಿವೇದಿತಾ ಗೌಡ

ಮೈಸೂರಿನ ಯುವರಾಣಿಯಾಗಿ ಗುರುತು ಸಿಗದಂತಾದ ನಿವೇದಿತಾ ಗೌಡ

ಬಿಗ್ ಬಾಸ್ ನಿವೇದಿತಾ ಗೌಡ ಇತ್ತೀಚಿಗಷ್ಟೇ ಹೊಸ ರೀತಿಯ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದು ಯುವರಾಣಿ ಲುಕ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸನ್ ಬರ್ಸ್ಟ್ ಸಂಸ್ಥೆಯ ಸಂದೀಪ್ ಎಂ ವಿ ಹಾಗೂ ಪ್ರೀತಂ ಹೊಸ್ಮನೆ ಇಬ್ಬರು ಹೊಸ ರೀತಿಯ ಲೈಫ್ ಸ್ಟೈಲ್ ಫೋಟೋ ಶೂಟ್ ಅನ್ನು ಆಗಾಗ ಮಾಡುತ್ತಿರುತ್ತಾರೆ. ಈ ಸಲ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಅರಮನೆ, ಯುವರಾಣಿ ಇಂತಹ ವಿಚಾರವಾಗಿ ಫೋಟೋ ಶೂಟ್ ಮಾಡಬೇಕು ಎಂದು ನಿರ್ಧಾರ ಮಾಡಿ ಮೈಸೂರಿನ ಲಲಿತ್ ಮಹಲ್ ನಲ್ಲಿ ನಿವೇದಿತಾ ಗೌಡ ಅವರ ಫೋಟೋ ಶೂಟ್ ಮಾಡಿದ್ದಾರೆ. ಫೋಟೋಗಳನ್ನ ನೋಡಿದರೆ ಯಾರು ಕೂಡ ನಿವೇದಿತಾ ಗೌಡ ಅವರನ್ನು ಗುರುತು ಹಿಡಿಯುವುದಿಲ್ಲ.
ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನ ಸಮಸ್ಯೆಗೆ ಕಾರಣಗಳು

ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನ ಸಮಸ್ಯೆಗೆ ಕಾರಣಗಳು

ಸಂತಾನಾಭಿವೃದ್ಧಿ, ನಿಸರ್ಗ ಈ ಜಗದ ಪ್ರತಿ ಜೀವಿಗೂ ನೀಡಿರುವ ವರದಾನವಾಗಿದ್ದು ಸಂತತಿಯನ್ನು ಮುಂದುವರೆಸಿಕೊಂಡು ಹೋಗುವ ವ್ಯವಸ್ಥೆಯಾಗಿದೆ. ಪ್ರತಿ ಜೀವಿಗೂ ನಿಸರ್ಗ ಸಂತಾನೋತ್ಪತ್ತಿಯ ಭಿನ್ನ ವಿಧಗಳನ್ನು ಒದಗಿಸಿದೆ. ಸಸ್ತನಿಗಳಲ್ಲಿ ಹೆಣ್ಣು ಜೀವಿಯ ಗರ್ಭಾಶಯದಲ್ಲಿ ಬಿಡುಗಡೆಯಾಗುವ ಅಂಡಾಣುವನ್ನು ಪುರುಷರ ವೀರ್ಯಾಣುಗಳು ಸಂಯೋಜನೆಗೊಳ್ಳುವ ಮೂಲಕ ಸಂತಾನೋತ್ಪತ್ತಿ ಮುಂದುವರೆಯುತ್ತದೆ. ನಿಸರ್ಗದ ಈ ಕ್ರಿಯೆ ಮಾನವರಿಗೂ ಅನ್ವಯವಾಗುತ್ತಿದ್ದು ಇದಕ್ಕಾಗಿ ಮಾನವರೇ ನಿರ್ಮಿಸಿಕೊಂಡ ಸಮಾಜ ವ್ಯವಸ್ಥೆಯಲ್ಲಿ ಈ ಹೊಣೆಯನ್ನು ಸಮಾನವಾಗಿ ಹೊರಲು ವಿವಾಹ ವ್ಯವಸ್ಥೆಯನ್ನೂ ಕಲ್ಪಿಸಿದೆ.

ವಿಂಬಲ್ಡನ್ ಗೆದ್ದು  13ನೇ ಗ್ರ್ಯಾಂಡ್‌ ಸ್ಲಾಮ್‌ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಕೊವಿಚ್

ವಿಂಬಲ್ಡನ್ ಗೆದ್ದು 13ನೇ ಗ್ರ್ಯಾಂಡ್‌ ಸ್ಲಾಮ್‌ಪ್ರಶಸ್ತಿ ಮುಡಿಗೇರಿಸಿಕೊಂಡ ಜೋಕೊವಿಚ್

ಭಾನುವಾರ ನಡೆದ ವಿಂಬಲ್ಡನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಕೆವಿನ್ ಆ್ಯಂಡರ್ಸನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ನೊವಾಕ್ ಜೋಕೊವಿಚ್ ಪ್ರತಿಷ್ಠಿತ 4ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಸರ್ಬಿಯನ್ ನ ಜೋಕೊವಿಚ್ ಅವರು ಸೌತಾಫ್ರಿಕಾ ಆಟಗಾರ ಕೆವಿನ್ ವಿರುದ್ಧ 6-2, 6-2, 6-7(7-3)ಅಂತರದ ಗೆಲುವು ದಾಖಲಿಸಿದರು. ವಿಶ್ವ ನಂ.10ನೇ ಆಟಗಾರ ನೊವಾಕ್ ಈವರೆಗೆ 12ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ದಿದ್ದು, ಈ ಗೆಲುವಿನೊಂದಿಗೆ 13ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ತನ್ನಾದಿಸಿಕೊಂಡರು. ಸೆಮಿಫೈನಲ್ ನಲ್ಲಿ ಜೋಕೊವಿಚ್ ರಫೆಲ್ ನಡಾಲ್ ರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
ವಿಶ್ವಕಪ್  ಫುಟ್ಬಾಲ್ : ಸುಳ್ಳಾಯ್ತು ಕರಡಿ ಭವಿಷ್ಯ , ಗೆದ್ದಿತು ಫ್ರಾನ್ಸ್

ವಿಶ್ವಕಪ್ ಫುಟ್ಬಾಲ್ : ಸುಳ್ಳಾಯ್ತು ಕರಡಿ ಭವಿಷ್ಯ , ಗೆದ್ದಿತು ಫ್ರಾನ್ಸ್

2018 ರ ಫುಟ್ಬಾಲ್ ವಿಶ್ವಕಪ್ ಫೈನಲ್ಸ್ ನಲ್ಲಿ ಫ್ರಾನ್ಸ್ ವಿರುದ್ಧ ಕ್ರೊವೇಷಿಯಾ ಗೆದ್ದು ಚಾಂಪಿಯನ್ ಆಗಲಿದೆ ಎಂಬ ಕರಡಿ ಭವಿಷ್ಯ ಸುಳ್ಳಾಗಿದೆ. 4-2 ರಿಂದ ಗೆದ್ದ ಫ್ರಾನ್ಸ್ 2018 ರ ಫುಟ್ಬಾಲ್ ಚಾಂಪಿಯನ್ ಆಗಿದೆ. ಕ್ರಾಸ್ನೊಯಾರ್ಸ್ಕ್ ನ ರಾಯ್ವ್ ರುಚೆ ಝೂ ನಲ್ಲಿರುವ ಕರಡಿ ಕ್ರೊವೇಷಿಯಾ ಚಾಂಪಿಯನ್ಸ್ ಪಟ್ಟ ಪಡೆದು ಇತಿಹಾಸ ನಿರ್ಮಿಸಲಿದೆ ಎಂದ ಭವಿಷ್ಯ ಹುಸಿಯಾಗಿದೆ. ಫ್ರಾನ್ಸ್ ಹಾಗೂ ಕ್ರೊವೇಷಿಯಾದ ಧ್ವಜವುಳ್ಳ ಎರಡು ಕಲ್ಲಂಗಡಿ ಹಣ್ಣುಗಳನ್ನು ಕರಡಿ ಮುಂದಿಡಲಾಗಿತ್ತು. ಕರಡಿ ಕ್ರೊವೇಷಿಯಾದ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡಿತ್ತು. ಹೀಗಾಗಿ ಕ್ರೊವೇಷಿಯಾ ಗೆಲ್ಲಲಿದೆ ಎಂದು ಅಂದುಕೊಳ್ಳಲಾಗಿತ್ತು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more