Short News

ಕೊಟ್ಟ ಮಾತು ಉಳಿಸಿಕೊಂಡ ಅಪ್ಪು, ಪ್ರಥಮ್ ಗೆ ಸಿಕ್ತು ಗಿಫ್ಟು!

ಕೊಟ್ಟ ಮಾತು ಉಳಿಸಿಕೊಂಡ ಅಪ್ಪು, ಪ್ರಥಮ್ ಗೆ ಸಿಕ್ತು ಗಿಫ್ಟು!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿರುವ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ 'ಒಳ್ಳೆ ಹುಡುಗ', 'ಬಿಗ್ ಬಾಸ್ ಕನ್ನಡ-5' ವಿನ್ನರ್ ಪ್ರಥಮ್ ಮತ್ತು ಕುಟುಂಬ ಭಾಗವಹಿಸಿದರು. ಈ ವೇಳೆ ಪುನೀತ್ ರಾಜ್ ಕುಮಾರ್ ಧರಿಸಿದ್ದ ಬಿಳಿ ಬಣ್ಣದ ಕೋಟ್ ಮೇಲೆ ಕಣ್ಹಾಕಿದರು. ಶೋ ಮುಗಿದ್ಮೇಲೆ ಈ ಕೋಟ್ ನನಗೆ ಕೊಡಿ, ಮದುವೆಗೋ, ಹನಿಮೂನ್ ಗೋ ಹಾಕಿಕೊಳ್ತೀನಿ'' ಅಂತ ಪುನೀತ್ ರಾಜ್ ಕುಮಾರ್ ಗೆ ಪ್ರಥಮ್ ಕೇಳಿದರು. ಅದಕ್ಕೆ ತಕ್ಷಣ 'ಓಕೆ' ಎಂದುಬಿಟ್ಟರು ಪುನೀತ್ ಶೂಟಿಂಗ್ ಮುಗಿದ್ಮೇಲೆ, ಕೊಟ್ಟ ಮಾತಿನಂತೆ ಪ್ರಥಮ್ ಗೆ ಪುನೀತ್ ರಾಜ್ ಕುಮಾರ್ ಕೋಟ್ ಕೊಟ್ಟಿದ್ದಾರೆ.
ಆರ್‌ಸಿಬಿ-ಸಿಎಸ್‌ಕೆ: ಅಂಕಿ ಅಂಶದಲ್ಲಿ ಯಾರು ಮುಂದೆ ಗೊತ್ತೇ?

ಆರ್‌ಸಿಬಿ-ಸಿಎಸ್‌ಕೆ: ಅಂಕಿ ಅಂಶದಲ್ಲಿ ಯಾರು ಮುಂದೆ ಗೊತ್ತೇ?

ಐದು ಪಂದ್ಯಗಳಲ್ಲಿ ಚೆನ್ನೈ ನಾಲ್ಕರಲ್ಲಿ ಗೆದ್ದು ಎರಡನೆಯ ಸ್ಥಾನದಲ್ಲಿದ್ದರೆ, ಅಷ್ಟೇ ಪಂದ್ಯಗಳನ್ನು ಆಡಿರುವ ಆರ್‌ಸಿಬಿ ಎರಡರಲ್ಲಿ ಮಾತ್ರ ಗೆದ್ದು ಆರನೇ ಸ್ಥಾನದಲ್ಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯುವ ಹೈವೋಲ್ಟೇಜ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಭಾರತ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಮತ್ತು ಹಾಲಿ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಯಾರು ಶ್ರೇಷ್ಠ ಎಂಬುದನ್ನು ಈ ಪಂದ್ಯದ ಮೂಲಕ ನಿರ್ಣಯಿಸಲು ಉಭಯ ತಂಡಗಳ ಅಭಿಮಾನಿಗಳು ಕಾತರರಾಗಿದ್ದಾರೆ. ಹಾಗೆ ನೋಡಿದರೆ ಎರಡೂ ತಂಡಗಳು ಶಕ್ತಿಯುತವಾಗಿದೆ. ಆದರೆ, ಅಂಕಿಅಂಶಗಳ ಪುಟ ತಿರುವಿಹಾಕಿದರೆ ಬಲಿಷ್ಠವಾಗಿ ಕಾಣುವುದು ಚೆನ್ನೈ ತಂಡ.
ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

ಭಾರತೀಯ ಚಿತ್ರರಂಗದ 'ಕಾಸ್ಟಿಂಗ್ ಕೌಚ್' ವಿವಾದದ ಕುರಿತಾಗಿ BBCವಾಹಿನಿ ಒಂದು ಡಾಕ್ಯುಮೆಂಟರಿ ಚಿತ್ರೀಕರಿಸಿದೆ. ಬಾಲಿವುಡ್ ನಲ್ಲಿ ನಟಿಯರು ಅನುಭವಿಸಿರುವ ಲೈಂಗಿಕ ಕಿರುಕುಳದ ಬಗೆಗಿನ ಡಾಕ್ಯುಮೆಂಟರಿ ಇದೇ ವಾರಾಂತ್ಯದಲ್ಲಿ BBCಯಲ್ಲಿ ಪ್ರಸಾರವಾಗಲಿದೆ. ಈ ಡಾಕ್ಯುಮೆಂಟರಿಯಲ್ಲಿ ನಟಿ ರಾಧಿಕಾ ಆಪ್ಟೆ, ಉಷಾ ಜಾದವ್ ಸೇರಿ ಹಲವು ನಟಿಯರು ಬಾಲಿವುಡ್ ನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ. ಅವರು ಎಷ್ಟು ಪ್ರಭಾವಿ ಅಂದ್ರೆ, ನನ್ನ ಮಾತುಗಳು ಯಾರ ಮೇಲೂ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನಾನು ಅವರ ವಿರುದ್ಧ ಮಾತನಾಡಿದರೆ, ನನ್ನ ವೃತ್ತಿ ಜೀವನ ಹಳ್ಳ ಹಿಡಿಯುತ್ತೆ ಎಂದು ಬಿಬಿಸಿ ವಾಹಿನಿಗೆ ರಾಧಿಕಾ ಆಪ್ಟೆ ಹೇಳಿದ್ದಾರೆ.
ಆಧಾರ್ ಆಧಾರಿತ ಇ-ಕೆವೈಸಿ ಎಂದರೇನು?

ಆಧಾರ್ ಆಧಾರಿತ ಇ-ಕೆವೈಸಿ ಎಂದರೇನು?

ಆಧಾರ್ ಸಂಖ್ಯೆ ಹೊಂದಿರುವವರು ಇ ಕೆವೈಸಿ (know your customer) ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಈ ಸಂಖ್ಯೆಯನ್ನು ನೀಡಲಾಗಿರುತ್ತದೆ. ಇದು ಬಯೋಮೆಟ್ರಿಕ್ ಆಧಾರದಲ್ಲಿ ಕೆಲಸ ಮಾಡುತ್ತದೆ. ಆಧಾರ್ ಕಾರ್ಡ್ ಮತ್ತು ವಿಳಾಸ ದೃಢೀಕರಣದಲ್ಲಿ ಲಿಂಗ, ವಿಳಾಸ, ವಯಸ್ಸು ಎಲ್ಲವೂ ಹೊಂದಾಣಿಕೆಯಾಗ ಬೇಕಾಗುತ್ತದೆ. ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದನ್ನು ಕಳುಹಿಸಿಕೊಡಲಾಗುತ್ತದೆ. ಅದರ ಮೂಲಕವೇ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ಆನ್ ಲೈನ್ ಮುಖಾಂತರ ಡೌನ್ಲೋಡ್ ಮಾಡಿಕೊಂಡ ಆಧಾರ್ ಕಾರ್ಡ್ ಗಳನ್ನು ಸಹ ಬ್ಯಾಂಕ್ ಗಳು ಸ್ವೀಕಾರ ಮಾಡುತ್ತವೆ.