Short News

'ಒಳ್ಳೆ ಹುಡುಗ' ಪ್ರಥಮ್ ಅಸಲಿ ಹೆಸರೇನು ಗೊತ್ತಾ?

'ಒಳ್ಳೆ ಹುಡುಗ' ಪ್ರಥಮ್ ಅಸಲಿ ಹೆಸರೇನು ಗೊತ್ತಾ?

'ಬಿಗ್ ಬಾಸ್' ಗೆದ್ದು ಇದೀಗ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುತ್ತಿರುವ 'ದೇವ್ರಂಥ ಮನುಷ್ಯ' ಪ್ರಥಮ್ ಅಸಲಿ ಹೆಸರೇನು ಅಂತ ನಿಮ್ಗೆ ಗೊತ್ತಾ.? 'ಒಳ್ಳೆ ಹುಡುಗ' ಅಂತ ಸ್ವಯಂ ಘೋಷಣೆ ಮಾಡಿಕೊಳ್ಳುವ ಪ್ರಥಮ್ ರವರ ನಿಜವಾದ ಹೆಸರು 'ಪುನೀತ್'.! ''ಇದು ಡವ್ವು ಬಿಡಿ'' ಅಂತ ನೀವು ಮೂಗು ಮುರಿಯಬಹುದು. ಆದ್ರೆ, ಇದೇ ಸತ್ಯ ಕಣ್ರೀ. ಹಾಗಂತ ಸ್ವತಃ ಪ್ರಥಮ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದೆ ಹೇಳಿಕೊಂಡಿದ್ದಾರೆ. ಸಾಕ್ಷಿಗೆ ಅಂತ ಅಪ್ಪುಗೆ ಪ್ರಥಮ್ ತಮ್ಮ ಆಧಾರ್ ಕಾರ್ಡ್ ಕೂಡ ತೋರಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾವಾಗುತ್ತಿರುವ 'ಫ್ಯಾಮಿಲಿ ಪವರ್' ಕಾರ್ಯಕ್ರಮದಲ್ಲಿ ಈ ವಿಚಾರ ಬಯಲಾಗಿದೆ.
ಚಿತ್ರದುರ್ಗ: ಚಳ್ಳಕೆರೆಯಲ್ಲಿ ಡಿಆರ್‌ಡಿಒ ಡ್ರೋನ್ ಪತನ

ಚಿತ್ರದುರ್ಗ: ಚಳ್ಳಕೆರೆಯಲ್ಲಿ ಡಿಆರ್‌ಡಿಒ ಡ್ರೋನ್ ಪತನ

ಚಳ್ಳಕೆರೆಯ ರಕ್ಷಣಾ ಸಂಶೋ‘ನೆ ಹಾಗೂ ಅಭಿವದ್ಧಿ ಸಂಸ್ಥೆ (ಡಿಆರ್‌ಡಿಒ)ಯ ವಲಯದಿಂದ ನಿಯಂತ್ರಣ ತಪ್ಪಿದ ಡ್ರೋಣ್ ಮಾದರಿಯ ಲಘುವಿಮಾನ ದೊರೆಯಾಗಳ ಹಟ್ಟಿ ಗ್ರಾಮದ ರಾಗಿ ಹೊಲದಲ್ಲಿ ಬಿದ್ದಿದೆ. ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದೆ. ಏಳು ಅಡಿ ಉದ್ದ ಹಾಗೂ 20 ಕೆಜಿ. ತೂಕದ ಈ ವಿಮಾನ ಬಿದ್ದದ್ದನ್ನು ರಾಗಿ ಹೊಲಕ್ಕೆ ನೀರು ಹಾಯಿಸುತ್ತಿದ್ದ ಮಹಿಳೆ ನೋಡಿದ್ದಾರೆ. ಬೆಳಗ್ಗೆ ಪರೀಕ್ಷಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ವಿಮಾನಕ್ಕೆ ಕೇಂದ್ರದ ರಾಡಾರ್‌ನ ಸಂಪರ್ಕ ಕಡಿದುಕೊಂಡಿದೆ.
ವಿಜಯನಗರದಲ್ಲಿ ವಿ.ಸೋಮಣ್ಣ v/s ಎಂ.ಕೃಷ್ಣಪ್ಪ ಕದನ!

ವಿಜಯನಗರದಲ್ಲಿ ವಿ.ಸೋಮಣ್ಣ v/s ಎಂ.ಕೃಷ್ಣಪ್ಪ ಕದನ!

ಉತ್ತಮ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಬೆಂಗಳೂರು ನಗರದ ಪ್ರತಿಷ್ಠಿತ ಕ್ಷೇತ್ರ ವಿಜಯನಗರ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಪೈಪೋಟಿಯಿಂದ ಕ್ಷೇತ್ರ ಪ್ರತಿ ಚುನಾವಣೆಯಲ್ಲಿ ಗಮನ ಸೆಳೆಯುತ್ತದೆ. ಕ್ಷೇತ್ರದ ಹಾಲಿ ಶಾಸಕರು ವಸತಿ ಸಚಿವ ಎಂ.ಕೃಷ್ಣಪ್ಪ. ಬಿಜೆಪಿಯ ಪ್ರಭಾವಿ ನಾಯಕ ವಿ.ಸೋಮಣ್ಣ ಅವರ ತವರು ಕ್ಷೇತವಿದರು. 2013ರ ಚುನಾವಣೆಯಲ್ಲಿ ಅವರು ಕೃಷ್ಣಪ್ಪ ವಿರುದ್ಧ ಸುಮಾರು 40 ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದಾರೆ. ಈ ಬಾರಿ ಅವರು ವಿಜಯನಗರದಿಂದ ಕಣಕ್ಕಿಳಿಯುವುದಿಲ್ಲ ಎಂಬ ಸುದ್ದಿ ಹಬ್ಬಿದೆ. ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.

ಮಹಿಳಾ ಸಿಬ್ಬಂದಿಯನ್ನಷ್ಟೇ ಹೊಂದಿರುವ ದೇಶದ ಪ್ರಥಮ ರೈಲ್ವೆ ಸ್ಟೇಷನ್

ಮಹಿಳಾ ಸಿಬ್ಬಂದಿಯನ್ನಷ್ಟೇ ಹೊಂದಿರುವ ದೇಶದ ಪ್ರಥಮ ರೈಲ್ವೆ ಸ್ಟೇಷನ್

ರಾಜಸ್ಥಾನ ಜೈಪುರದ ಗಾಂಧಿನಗರ ರೈಲು ನಿಲ್ದಾಣದಲ್ಲಿ ನೀವು ಎಲ್ಲೆ ನೋಡಿದರೂ ನಿಮಗೆ ಕಾಣುವುದು ಮಹಿಳಾ ಅಧಿಕಾರಿಗಳು ಮಾತ್ರ. ಹೌದು ಈ ರೈಲ್ವೆ ಸ್ಟೇಷನ್ ನಲ್ಲಿ ಮಹಿಳಾ ಸಿಬ್ಬಂದಿಗಳನ್ನು ಬಿಟ್ಟಾರೆ ಬೇರಾವ ಪುರುಷ ಸಿಬ್ಬಂದಿಯೂ ನಿಮಗೆ ಕಾಣಸಿಗುವುದಿಲ್ಲ. ಇದು ಮಹಿಳಾ ಸಿಬ್ಬಂದಿಯನ್ನಷ್ಟೇ ಹೊಂದಿರುವ ದೇಶದ ಪ್ರಥಮ ರೈಲ್ವೆ ಸ್ಟೇಷನ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರೈಲ್ವೆ ಸಚಿವಾಲಯ ಹೆಮ್ಮೆ ವ್ಯಕ್ತಪಡಿಸಿದೆ.