Short News

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾಳ ಫ್ಲೈಯಿಂಗ್ ಕಿಸ್‌ಗೆ ಹುಡುಗರು ಏನಾಗುತ್ತಾರೋ..!

ಪಡ್ಡೆ ಹುಡುಗರ ನಿದ್ದೆಗೆಡಿಸಿದ ಪ್ರಿಯಾಳ ಫ್ಲೈಯಿಂಗ್ ಕಿಸ್‌ಗೆ ಹುಡುಗರು ಏನಾಗುತ್ತಾರೋ..!

ಒರ್ ಆದಾರ್ ಲವ್ ಚಿತ್ರದ ಒಂದು ದೃಶ್ಯದ ಮೂಲಕ ನ್ಯಾಶನಲ್ ಲೆವೆಲ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗಡಿಸಿದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್ ಅಭಿನಯದ ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೊದಲ ವಿಡಿಯೋದಲ್ಲಿ ಪ್ರಿಯಾಳ ಕಣ್ಣು ಸನ್ನೆಗೆ ಮಾರು ಹೋಗಿದ್ದ ಹುಡುಗರು, ಇದೀಗ ಇವಳ ಫ್ಲೈಯಿಂಗ್ ಕಿಸ್‌ಗೆ ಏನಾಗುತ್ತಾರೋ ಗೊತ್ತಿಲ್ಲ. ಓಮರ್ ಲುಲು ನಿರ್ದೇಶನದ 'Oru Adaar Love' ಚಿತ್ರ ಮಾ. 3 ರಂದು ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ ಪ್ರಿಯಾ ಪ್ರಕಾಶ್‌ ವಾರಿಯರ್.
ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಇಂದು ಸಚಿನ್‍ಗೆ ಅವಮಾನ! ಅಭಿಮಾನಿಗಳು ಫುಲ್ ಗರಂ

ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಇಂದು ಸಚಿನ್‍ಗೆ ಅವಮಾನ! ಅಭಿಮಾನಿಗಳು ಫುಲ್ ಗರಂ

ಸಚಿನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಅವಮಾನ ಮಾಡಿದೆ ಎಂದು ಕೆಂಡಾಮಂಡಲವಾಗಿದ್ದಾರೆ. ಇಂದು ಏ.24 ಸಚಿನ್ ಮತ್ತು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇಮಿಯನ್ ಫ್ಲೆಮಿಂಗ್ ಹುಟ್ಟುಹಬ್ಬ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ 2000ಇಸ್ವಿಯಲ್ಲಿ ಪರ್ಥ್ ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಫ್ಲೆಮಿಂಗ್ ಬೌಲಿಂಗ್ ನಲ್ಲಿ ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಅಷ್ಟೇ ಅಲ್ಲದೇ ಈ ಟ್ವೀಟ್ ನಲ್ಲಿ ಫ್ಲೆಮಿಂಗ್ ಅವರಿಗೆ ಮಾತ್ರ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದೆ. ಈ ಟ್ವೀಟ್ ನೋಡಿದ ಭಾರತದ ಅಭಿಮಾನಿಗಳು ಗರಂ ಆಗಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಮೊಟ್ಟ ಮೊದಲ ಭಾರಿಗೆ ದಾದಾ ಸಾಹೇಬ್ ಪಡೆದ ವರನಟ

ಮೊಟ್ಟ ಮೊದಲ ಭಾರಿಗೆ ದಾದಾ ಸಾಹೇಬ್ ಪಡೆದ ವರನಟ

ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಭಾರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪುರಸ್ಕೃತರಾದ ನಟ ಡಾ ರಾಜ್ ಕುಮಾರ್. ಚಿತ್ರರಂಗರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಗೌರವ ಇದಾಗಿದ್ದು, 1995ರಲ್ಲಿ ಅಣ್ಣಾವ್ರು ಮುಡಿಗೇರಿಸಿಕೊಂಡರು. ಕನ್ನಡ ಚಿತ್ರರಂಗದ ದಾಖಲೆಗಳ ಪ್ರಕಾರ ಕನ್ನಡದಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ 'ಬಂಗಾರದ ಮನುಷ್ಯ'. 1972ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಸುಮಾರು 2 ವರ್ಷ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಮತ್ತು ಸುಮಾರು 5 ಸೆಂಟರ್ ಗಳಲ್ಲಿ ಒಂದು ವರ್ಷ ಕಂಡು ಸಾರ್ವಕಾಲಿಕ ದಾಖಲೆ ಮಾಡಿತ್ತು.
ಅಣ್ಣಾವ್ರ ಜನುಮದಿನ, ವಿಶೇಷ ಶುಭಕೋರಿದ ಸಿನಿತಾರೆಯರು

ಅಣ್ಣಾವ್ರ ಜನುಮದಿನ, ವಿಶೇಷ ಶುಭಕೋರಿದ ಸಿನಿತಾರೆಯರು

ಡಾ.ರಾಜ್ ಕುಮಾರ್ ಅವರು ಎಲ್ಲರಿಗೂ ದೇವರು. ಆದ್ರೆ, ರಾಜ್ ಕುಮಾರ್ ಅವರಿಗೆ ಮಾತ್ರ ಅಭಿಮಾನಿಗಳೇ ದೇವರು. ಅಭಿಮಾನಿಗಳನ್ನ ದೇವರೆಂದು ಕರೆದು ಕೋಟ್ಯಾಂತರ ಜನರ ಹೃದಯ ಸಿಂಹಾಸನದಲ್ಲಿ ರಾಜನಾಗಿ ರಾಜಣ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು  ವಿಭಿನ್ನವಾಗಿ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಅಭಿಮಾನಿಗಳು ಅಂದ್ರೆ,ಕೇವಲ ಜನಸಾಮಾನ್ಯರು ಮಾತ್ರವಲ್ಲ. ಸಿನಿಮಾ ಕಲಾವಿದರು ಕೂಡ ರಾಜ್ ಅವರ ಅಪ್ಪಟ ಅಭಿಮಾನಿಗಳು. ಅಣ್ಣಾವ್ರ ಹುಟ್ಟುಹಬ್ಬಕ್ಕೆ ಹಲವು ನಟ-ನಟಿಯರು ವಿಶ್ ಮಾಡಿದ್ದಾರೆ. ಜಗ್ಗೇಶ್, ಉಪೇಂದ್ರ, ರವಿಶಂಕರ್ ಗೌಡ, ಶಾನ್ವಿ ಶ್ರೀವಾಸ್ತವ ಸೇರಿದಂತೆ ಹಲವರು ಟ್ವಿಟ್ಟರ್ ಮೂಲಕ ವರನಟನಿಗೆ ನಮನ ಸಲ್ಲಿಸಿದ್ದಾರೆ.