Short News

ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು

ರಾಕಿಂಗ್ ಸ್ಟಾರ್ ಹತ್ಯೆಗೆ ಸಂಚು ಅನ್ನೋದು ಸುಳ್ಳು

ಕುಖ್ಯಾತ ರೌಡಿ ಸೈಕಲ್ ರವಿಗೂ ಸ್ಯಾಂಡಲ್ ವುಡ್ ಗೂ ಸಂಬಂಧವಿದೆ ಎನ್ನುವ ವದಂತಿಗಳು ಕೆಲವು ದಿನಗಳಿಂದ ಕೇಳಿಬರುತ್ತಿವೆ. ಅದಷ್ಟೇ ಅಲ್ಲದೆ ರಾಕಿಂಗ್ ಸ್ಟಾರ್ ನಟ ಯಶ್ ಹತ್ಯೆಗೆ ಎರಡು ವರ್ಷಗಳ ಹಿಂದೆಯೇ ಸಂಚು ನಡೆದಿತ್ತು ಎನ್ನುವ ಸುದ್ದಿ ಜೋರಾಗಿದೆ. ಆದರೆ ಇವೆಲ್ಲವೂ ಸುಳ್ಳು ವದಂತಿ ಎನ್ನುವುದನ್ನು ಹಿರಿಯ ಪೋಲೀಸ್ ಅಧಿಕಾರಿ ಸತೀಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಯಶ್ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನುವ ಸುದ್ದಿ ಆಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಯಾಕೆಂದರೆ ಎರಡು ವರೆ ವರ್ಷದ ಹಿಂದೆಯೂ ಯಶ್ ಅವರ ಮೇಲೆ ಹಲ್ಲೆ ಆಗಿದೆ ಎನ್ನುವ ಸುದ್ದಿಗಳು ಕೇಳಿ ಬಂದಿತ್ತು.
ಮುಕ್ತ ಪ್ರದೇಶದಲ್ಲಿ ಸ್ಥಾನ ಮಾಡುವುದೆಂದರೆ ಈ ನಟಿಗೆ ತುಂಬಾ ಇಷ್ಟವಂತೆ...!

ಮುಕ್ತ ಪ್ರದೇಶದಲ್ಲಿ ಸ್ಥಾನ ಮಾಡುವುದೆಂದರೆ ಈ ನಟಿಗೆ ತುಂಬಾ ಇಷ್ಟವಂತೆ...!

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಗೆ ಬಾತ್ ರೂಂ ಒಳಗೆ ಸ್ನಾನ ಮಾಡುವುದಿಲ್ಲವಂತೆ. ಮುಕ್ತ ಪ್ರದೇಶದಲ್ಲಿ ಸ್ನಾನ ಮಾಡುವುದೆಂದರೆ ಆಕೆಗೆ ಬಲು ಇಷ್ಟವಂತೆ. ಇದಕ್ಕಾಗಿ ಟೆರೆಸ್ ಮೇಲೆ ಬಾತ್ ಟಬ್ ಇಟ್ಟುಕೊಂಡಿರುವ ಸುಶ್ಮಿತಾ ಆಕಾಶ ನೋಡ್ತಾ ಸ್ನಾನ ಮಾಡುತ್ತಾಳಂತೆ. ಹೀಗೆ ಸ್ನಾನ ಮಾಡುವುದರ ಮಜವೇ ಬೇರೆ ಎನ್ನುತ್ತಾಳೆ ಈಕೆ. ಸುಶ್ಮಿತಾಗೆ ಹಾವುಗಳೆಂದ್ರೂ ಪಂಚಪ್ರಾಣ. ಅದಕ್ಕಾಗಿ ಮನೆಯಲ್ಲಿ ಹೆಬ್ಬಾವು ಸಾಕಿದ್ದಾಳೆ ಬೆಡಗಿ.
ಕತ್ತಲಲ್ಲಿದ್ದ ಮಂಡ್ಯದ 40 ಮನೆಗಳಿಗೆ ಬೆಳಕಾದ  ಬಾಲಿವುಡ್ ನಟಿ ಆಲಿಯಾ ಭಟ್

ಕತ್ತಲಲ್ಲಿದ್ದ ಮಂಡ್ಯದ 40 ಮನೆಗಳಿಗೆ ಬೆಳಕಾದ ಬಾಲಿವುಡ್ ನಟಿ ಆಲಿಯಾ ಭಟ್

ನಟಿ ಅಲಿಯಾ ಭಟ್ ಮಂಡ್ಯದ ಕಿಕ್ಕೇರಿ ಗ್ರಾಮಕ್ಕೆ ಬೆಳಕು ನೀಡಿದ್ದಾರೆ. ಬೆಂಗಳೂರಿನ ಎ.ಆರ್.ಓ.ಎಚ್‍.ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಯ ಮನೆಗಳಿಗೆ ಸೋಲಾರ್ ಲೈಟ್ ಅನ್ನು ಒದಗಿಸುತ್ತಿದೆ. ಈ ಸಂಸ್ಥೆ ಇತ್ತೀಚೆಗಷ್ಟೆ 'ಲಿಟರ್ ಆಫ್ ಲೈಟ್' ಎಂಬ ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಅಲಿಯಾ ಚಾರಿಟಿ ನೀಡಿದ್ದರು. 'ಮಿ ವಾರ್ಡ್ ರೋಬ್ ಈಸ್ ಸು ವಾರ್ಡ್ ರೋಬ್' ಕಾರ್ಯಕ್ರಮದಲ್ಲಿ ಆಲಿಯಾ ಭಟ್ ತಮ್ಮ ಡಿಸೈನರ್ ಬಟ್ಟೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು. ಇದರಿಂದ ಬಂದ ಹಣವನ್ನು ಚಾರಿಟಿಗೆ ನೀಡಿದ್ದಾರೆ. ಇದರಿಂದ 40ಕುಟುಂಬಗಳಿಗೆ ಬೆಳಕು ಸಿಕ್ಕಿದೆ.
ನನ್ನ ಲೀಡ್ ಕಂಡು ಪ್ರಧಾನಿಯೇ ನಡುಗಿದ್ದರು: ಸಚಿವ ಜಿಟಿ ದೇವೇಗೌಡ

ನನ್ನ ಲೀಡ್ ಕಂಡು ಪ್ರಧಾನಿಯೇ ನಡುಗಿದ್ದರು: ಸಚಿವ ಜಿಟಿ ದೇವೇಗೌಡ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 36,042ಅಂತರದ ಲೀಡ್ ಪಡೆದಿದ್ದು ಇದನ್ನು ಕಂಡು ಪ್ರಧಾನಿ ಮೋದಿಯೇ ನಡುಗಿ ಹೋಗಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಲಿಂಗದೇವರ ಕೊಪ್ಪಲಿನಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಸೊಸೈಟಿಯಲ್ಲಿ ಅಕ್ಕಿ ತೂಕ ಮಾಡಿಕೊಂಡಿದ್ದ ನನ್ನನ್ನು ಈ ಸ್ಥಾನದಲ್ಲಿ ನಿಲ್ಲಿಸಿದ್ದೀರಿ ನಿಮ್ಮ ಪಾದ ಪೂಜೆ ಮಾಡಿ ನಾನು ಋಣ ತೀರಿಸಬೇಕಾಗಿದೆ ಎಂದು ಮತದಾರರಿಗೆ,ಕಾರ್ಯಕರ್ತರಿಗೆ ಸ್ವಕ್ಷೇತ್ರದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more