Short News

ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಹಿಂದೆ ಬಿದ್ದ ಮಿಲಿಯನ್ ಗಟ್ಟಲೆ ಹುಡುಗ್ರು!

ನ್ಯಾಷನಲ್ ಕ್ರಶ್ ಪ್ರಿಯಾ ವಾರಿಯರ್ ಹಿಂದೆ ಬಿದ್ದ ಮಿಲಿಯನ್ ಗಟ್ಟಲೆ ಹುಡುಗ್ರು!

ಪ್ರಿಯಾ ವಾರಿಯರ್ ಈಗ ನ್ಯಾಷನಲ್ ಕ್ರಶ್ ಆಗಿರುವ ನಾಯಕಿ. 96 ಸಾವಿರ ಫಾಲೋವರ್ಸ್ ಗಳನ್ನ ಹೊಂದಿದ್ದ ಪ್ರಿಯಾ ಅವರ ಈಗಿನ ಅಭಿಮಾನಿಗಳ ಸಂಖ್ಯೆ 1.7 ಮಿಲಿಯನ್. ಒಂದೇ ದಿನಕ್ಕೆ ಇಷ್ಟು ಫ್ಯಾನ್ಸ್ ಗಳನ್ನ ಸಂಪಾದನೆ ಮಾಡಿದ್ದಾರೆ. ಪ್ರಿಯಾ 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಆ ಚಿತ್ರದ ಹಾಡಿನ ದೃಶ್ಯವೇ ಈಗ ಸಖತ್ ಫೇಮಸ್ ಆಗುತ್ತಿರುವುದು. ವಿಶೇಷ ಎಂದರೆ 'ಒರು ಅಡಾರ್ ಲವ್' ಚಿತ್ರದ ಮ್ಯೂಸಿಕ್ ಗಿಂತಲೂ ಪ್ರಿಯಾ ಅಭಿನಯಕ್ಕೆ ಧನುಷ್ ಅವರ ಥ್ರೀ ಸಿನಿಮಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸೇರಿಸಲಾಗಿದೆ ಅದನ್ನೇ ಜನರು ಹೆಚ್ಚು ಇಷ್ಟ ಪಟ್ಟಿದ್ದು.
ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಇಂದಿನ (ಏಪ್ರಿಲ್ 23)  ದರ ನೋಡಿ..

ಮತ್ತೆ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ, ಇಂದಿನ (ಏಪ್ರಿಲ್ 23) ದರ ನೋಡಿ..

ದೆಹಲಿ: ಪೆಟ್ರೋಲ್: 74.50 / ಲೀಟರ್, ಡೀಸೆಲ್: 65.75 / ಲೀಟರ್. ಕೊಲ್ಕತ್ತಾ: ಪೆಟ್ರೋಲ್: 77.20 / ಲೀಟರ್ , ಡೀಸೆಲ್: 68.45 / ಲೀಟರ್. ಮುಂಬೈ: ಪೆಟ್ರೋಲ್: 82.35/ ಲೀಟರ್ , ಡೀಸೆಲ್: 70.01 / ಲೀಟರ್. ಚೆನ್ನೈ: ಪೆಟ್ರೋಲ್: 77.29 / ಲೀಟರ್ , ಡೀಸೆಲ್: 69.37 / ಲೀಟರ್. ಬೆಂಗಳೂರು: ಪೆಟ್ರೋಲ್: 75.68 / ಲೀಟರ್, ಡೀಸೆಲ್: 66.86 / ಲೀಟರ್. ಹೈದರಾಬಾದ್: ಪೆಟ್ರೋಲ್: 78.89/ ಲೀಟರ್, ಡೀಸೆಲ್: 71.43 / ಲೀಟರ್.
ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ಮೇಷ:ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ. ವೃಷಭ:ಮಕ್ಕಳ ಪ್ರಗತಿಯಿಂದ ಸಂತಸ. ಮಿಥುನ:ಪ್ರವಾಸ ಮುಂದೂಡುವುದು ಒಳಿತು. ಕಟಕ:ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು. ಸಿಂಹ:ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ. ಕನ್ಯಾ:ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ. ತುಲಾ:ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವೃಶ್ಚಿಕ:ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ. ಧನುಸ್ಸು:ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ. ಮಕರ:ಇಚ್ಛಿಸಿದ ಕಾರ್ಯಗಳು ಕೈಗೂಡಲಿದೆ. ಕುಂಭ:ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ. ಮೀನ:ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.
ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಹತ್ಯೆಯಾಗಿದ್ದಾರೆ. ಭಾನುವಾರ ರಾತ್ರಿ ಬೈಕ್ ನಲ್ಲಿ ಇಬ್ಬರು ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಂಬೈ ಉಪನಗರದ ಕಂಡಿವಾಲಿಯಲ್ಲಿ ಈ ಘಟನೆ ನಡೆದಿದೆ.
ಭಾನವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಗೋಕುಲ್ ನಗರ ಪ್ರದೇಶದಲ್ಲಿದ್ದ ವೇಳೆ ಸಾವಂತ್ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಸಾವಂತ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.