Short News

ಅರ್ಜುನ್ ಗೌಡ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿದ್ರು ಪ್ರಿಯಾಂಕಾ ತಿಮ್ಮೇಶ್

ಅರ್ಜುನ್ ಗೌಡ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿದ್ರು ಪ್ರಿಯಾಂಕಾ ತಿಮ್ಮೇಶ್

'ಪಟಾಕಿ' ಚಿತ್ರದಲ್ಲಿ ಗಣೇಶ್ ಜೊತೆಗೆ ನಟಿಸಿದ್ದ ನಟಿ ಪ್ರಿಯಾಂಕಾ ತಿಮ್ಮೇಶ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ತೆರೆಹಂಚಿಕೊಳ್ಳಲು ಸಿದ್ದವಾಗಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ 'ಅರ್ಜುನ್ ಗೌಡ' ಚಿತ್ರದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಇದೀಗ ಅದೇ ಚಿತ್ರಕ್ಕೆ ನಾಯಕಿ ಆಗಿ ಪ್ರಿಯಾಂಕಾ ತಿಮ್ಮೇಶ್ ಆಯ್ಕೆ ಆಗಿದ್ದಾರೆ. ಹೇಳಿ ಕೇಳಿ 'ಅರ್ಜುನ್ ಗೌಡ' ಕೋಟಿ ರಾಮು ನಿರ್ಮಾಣದ ಚಿತ್ರ. ಈ ನಡುವೆ 'ಅರ್ಜುನ್ ಗೌಡ' ಚಿತ್ರಕ್ಕೂ ಅವಕಾಶ ಸಿಕ್ಕಿರುವುದಕ್ಕೆ ಪ್ರಿಯಾಂಕಾ ಫುಲ್ ಖುಷಿಯಾಗಿದ್ದಾರೆ.
ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸುವ ಮನೆಮದ್ದುಗಳು

ಕಿಡ್ನಿ ಕಲ್ಲಿನ ಸಮಸ್ಯೆಯನ್ನು ಶಾಶ್ವತವಾಗಿ ಗುಣಪಡಿಸುವ ಮನೆಮದ್ದುಗಳು

ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಕಲ್ಲುಗಳನ್ನು ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಮೂತ್ರದಲ್ಲಿ ಹೊರಹೋಗುವ ಈ ಕಲ್ಲುಗಳ ನೋವು ಯಮಯಾತನೆಗೆ ಸಮಯನಾಗಿರುತ್ತದೆ. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ. ನೀವು ನಿತ್ಯವೂ ಸೇವಿಸುವ ಆಹಾರದಲ್ಲಿ ನೀರಿನಂಶ ಎಷ್ಟಿದೆ ಎಂಬುದನ್ನು ಗಮನಿಸಿಕೊಳ್ಳಿ.

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಟ್ರಜೊರ್ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಕಿಯಾ ಎಸ್‌ಪಿ ಕಾನ್ಸೆಪ್ಟ್..

ಭಾರತೀಯ ವಾಹನ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ನೂತನ ಕಿಯಾ ಮೋಟಾರ್ಸ್ ಎಸ್‌ಯುವಿ ಎಸ್‌ಪಿ ಕಾನ್ಸೆಪ್ಟ್ ಆವೃತ್ತಿಯು ಹೊಸ ಭರವಸೆ ಹುಟ್ಟುಹಾಕಿದ್ದು, ಟ್ರಜೊರ್ ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ. ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ ಎಂಬ ಮಹತ್ವದ ಮಾಹಿತಿ ಲಭ್ಯವಾಗಿದೆ.

ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಗೆ ಸೇರಲಿದೆ 5 ಹೊಸ ವೈಶಿಷ್ಟ್ಯಗಳು

ಇನ್ನು ಕೆಲವೇ ದಿನದಲ್ಲಿ ವಾಟ್ಸ್ ಆಪ್ ಗೆ ಸೇರಲಿದೆ 5 ಹೊಸ ವೈಶಿಷ್ಟ್ಯಗಳು

ಇತ್ತೀಚೆಗೆ ನಡೆದ ಫೇಸ್ ಬುಕ್ ನ ವಾರ್ಷಿಕ ಅಭಿವರ್ಧಕ ಸಮ್ಮೇಳನ ಎಫ್ 8 ನಲ್ಲಿ ವಾಟ್ಸ್ ಆಪ್ ಗೆ ಇನ್ನಷ್ಟು ವೈಶಿಷ್ಟ್ಯಗಳು ಸೇರುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಲಾಗಿದೆ. ಇದು ಕೆಲವು ಫೇಸ್ ಬುಕ್ ನ ವ್ಯವಹಾರಿಕ ಆಪ್ ಗಳನ್ನೂ ಕೂಡ ಒಳಗೊಂಡಿರಲಿದೆ. European General Data Protection Regulation (GDPR) ಕಾನೂನಿಗೂ ಪ್ರತಿಕ್ರಿಯಿಸಿರುವ ವಾಟ್ಸ್ ಆಪ್, ಯಾವೆಲ್ಲ ವಯಕ್ತಿಕ ಮಾಹಿತಿಗಳನ್ನು ಬಳಕೆದಾರನಿಂದ ಪಡೆಯಲಾಗಿದೆ ಎಂಬ ಬಗೆಗಿನ ಸಂಪೂರ್ಣ ವಿವರವನ್ನು ಬಳಕೆದಾರನೂ ತಿಳಿಯುವಂತೆ ಮಾಡಲಾಗಿದೆ. ಇಲ್ಲಿದೆ ನೋಡಿ ಪ್ರಮುಖ 5 ವೈಶಿಷ್ಟ್ಯಗಳ ವಿವರ..

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more