Short News

ಬಹುನಿರೀಕ್ಷಿತ ಸಲ್ಮಾನ್ ಖಾನ್ ಅಭಿನಯದ ರೇಸ್‌-3 ಟ್ರೇಲರ್ ಬಿಡುಗಡೆ

ಬಹುನಿರೀಕ್ಷಿತ ಸಲ್ಮಾನ್ ಖಾನ್ ಅಭಿನಯದ ರೇಸ್‌-3 ಟ್ರೇಲರ್ ಬಿಡುಗಡೆ

ಸಲ್ಮಾನ್ ಖಾನ್ ಅಭಿನಯದ ರೇಸ್‌-3 ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಬಾಲಿವುಡ್‌‌‌ ಕೆಲವು ಖ್ಯಾತ ನಟ-ನಟಿಯರು ಅಭಿನಯಿಸಿರುವ ಸಿನಿಮಾ ಆ್ಯಕ್ಷನ್‌‌‌, ಪಂಚ್, ಫೈಟ್, ಫ್ಯಾಮಿಲಿ ಡ್ರಾಮಾ ಸೇರಿ ಎಲ್ಲಾ ಅಂಶಗಳನ್ನೂ ಹೊಂದಿದೆ. ರೇಸ್‌‌‌-1 ಹಾಗೂ ರೇಸ್-2 ಸಿನಿಮಾಗಳಲ್ಲಿ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ರೇಸ್‌‌‌-3ನಲ್ಲಿ ಸಲ್ಮಾನ್ ಖಾನ್ ಅಭಿನಯಿಸಿದ್ದಾರೆ. ಸಲ್ಲು ಜೊತೆಗೆ ಜಾಕ್ವೆಲಿನ್ ಫರ್ನಾಂಡಿಸ್‌‌‌, ಅನಿಲ್ ಕಪೂರ್‌‌, ಬಾಬ್ಬಿ ಡಿಯೋಲ್‌‌‌‌, ಡೈಸಿ ಷಾ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ.
ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ಕಾವೇರಿ ನದಿ ನೀರು ಕೇಳಿದ ರಜನೀಕಾಂತ್ ರನ್ನು ಕರ್ನಾಟಕಕ್ಕೆ ಆಹ್ವಾನಿಸಿದ ಕುಮಾರಸ್ವಾಮಿ

ನಿಯೋಜಿತ ಮುಖ್ಯಮಂತ್ರಿಯಾಗಿರುವ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿನ ಜಲಾಶಯಗಳ ಸ್ಥಿತಿಗತಿಯನ್ನು ಕಣ್ಣಾರೆ ಕಂಡು ನಿಜ ಪರಿಸ್ಥಿತಿಯನ್ನು ಅರಿತುಕೊಳ್ಳುವ ಸಲುವಾಗಿ ತಮಿಳು ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರನ್ನು ಅಹ್ವಾನಿಸಿದ್ದಾರೆ.ತಮಿಳು ನಾಡಿಗೆ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ರಜನೀಕಾಂತ್‌ ಒತ್ತಾಯಿಸಿರುವುದಕ್ಕೆ ಪ್ರತಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿಕೆ ಕರ್ನಾಟಕಕ್ಕೆ ಒಮ್ಮೆ ಭೇಟಿ ಕೊಡಿ. ಆಗ ನಿಮಗೆ ಇಲ್ಲಿನ ಸಂಪೂರ್ಣ ಚಿತ್ರಣ ಸಿಗಲಿದೆ ಎಂದಿದ್ದಾರೆ.
'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

'Rambo 2' ಸಿನಿಮಾ ಕಾಶೀನಾಥ್ ಅವರಿಗೆ ಸಮರ್ಪಣೆ

ಶರಣ್ ನಟಿಸಿರುವ 'Rambo 2' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುಗರಿಗೆ ಸಖತ್ ಖುಷಿ ಕೊಡುತ್ತದೆ. ಆದರೆ ಅದಕ್ಕೂ ಮಿಗಿಲಾಗಿ ಸಿನಿಮಾದ ಟೈಟಲ್ ಕಾರ್ಡ್ ನಲ್ಲಿಯೇ ಚಿತ್ರತಂಡ ಪ್ರೇಕ್ಷಕರ ಮುಖದಲ್ಲಿ ಸಂತಸವನ್ನು ಮೂಡಿಸುತ್ತದೆ. ಕಾರಣ 'Rambo 2' ಸಿನಿಮಾವನ್ನು ನಟ, ನಿರ್ದೇಶಕ ಕಾಶೀನಾಥ್ ಅವರಿಗೆ ಸಮರ್ಪಣೆ ಮಾಡಲಾಗಿದೆ. 'Rambo 2' ಚಿತ್ರವನ್ನು ಕಾಶೀನಾಥ್ ಅವರಿಗೆ ಡೆಡಿಕೇಟ್ ಮಾಡಲಾಗಿದೆ. ಚಿತ್ರದ ಪ್ರಾರಂಭದಲ್ಲಿ ಬರುವ ಟೈಟಲ್ ಕಾರ್ಡ್ ನಲ್ಲಿ ಕಾಶೀನಾಥ್ ಕ್ಯಾಮರಾ ಹಿಡಿದ ಫೋಟೋವೊಂದು ತೆರೆ ಮೇಲೆ ಮೂಡುತ್ತದೆ. ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೆ ಇದನ್ನು ನೋಡಿಯೇ ಖುಷಿ ಆಗುತ್ತದೆ.
ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕುಮಾರಸ್ವಾಮಿ, ಮಾಯಾವತಿ ಭೇಟಿ, ಸರ್ಕಾರದ ಕುರಿತು ಚರ್ಚೆ

ಕರ್ನಾಟಕದ ಭಾವಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ದೆಹಲಿಯಲ್ಲಿ ಇಂದು ಭೇಟಿ ಆದರು. ಜೆಡಿಎಸ್ ಪಕ್ಷವು ಬಿಎಸ್‌ಪಿ ಜೊತೆ ಚುನಾವಣಾ ಪೂರ್ವವೇ ಮೈತ್ರಿ ಮಾಡಿಕೊಂಡಿತ್ತು, ಮಾಯಾವತಿ ಅವರು ಚುನಾವಣೆ ಸಮಯದಲ್ಲಿ ಮೂರು ಬಾರಿ ರಾಜ್ಯಕ್ಕೆ ಬಂದು ಜೆಡಿಎಸ್‌ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಮಾಯಾವತಿ ಅವರನ್ನು ಭೇಟಿ ಆದ ಕುಮಾರಸ್ವಾಮಿ ಅವರು, ಸಚಿವ ಸಂಪುಟ ರಚನೆ, ಗೆದ್ದ ಏಕೈಕ ಬಿಎಸ್‌ಪಿ ಶಾಸಕನಿಗೆ ಕೊಡತಕ್ಕ ಸಚಿವ ಸ್ಥಾನ, ಸರ್ಕಾರ ರಚನೆ ಮತ್ತು ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.