Short News

ಪುನಿತ್ ಚಿತ್ರಕ್ಕೆ ಪ್ರಿಯಾಂಕ ಜ್ವಾಲಕರ್‌ ಬದಲು ರಚಿತಾ ನಾಯಕಿ

ಪುನಿತ್ ಚಿತ್ರಕ್ಕೆ ಪ್ರಿಯಾಂಕ ಜ್ವಾಲಕರ್‌ ಬದಲು ರಚಿತಾ ನಾಯಕಿ

ಪುನೀತ್‌ ರಾಜಕುಮಾರ್‌ ಅವರ ಹೊಸ ಚಿತ್ರ ಮೊನ್ನೆಯಷ್ಟೇ ಸೆಟ್ಟೇರಿದ್ದು ಸದ್ಯ ಚಿತ್ರೀಕರಣದಲ್ಲಿದೆ. ಈ ಚಿತ್ರಕ್ಕೆ ತೆಲುಗಿನ ಪ್ರಿಯಾಂಕಾ ಜ್ವಾಲಕರ್‌ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೀಗ ಚಿತ್ರದ ನಾಯಕಿ ಬದಲಾಗಿದ್ದಾರೆ. ಪ್ರಿಯಾಂಕಾ ಜಾಗಕ್ಕೆ ರಚಿತಾ ರಾಮ್‌ ಬಂದಿದ್ದಾರೆ. ಡೇಟ್ಸ್‌ ಸಮಸ್ಯೆಯಿಂದಾಗಿ ಪ್ರಿಯಾಂಕಾ ಅವರನ್ನು ಕೈ ಬಿಡಬೇಕಾಗಿ ಬಂದಿದೆ ಎಂದು ನಿರ್ದೇಶಕ ಪವನ್‌ ಒಡೆಯರ್‌ ತಿಳಿಸಿದ್ದಾರೆ. ರಚಿತ ಈ ಹಿಂದೆ ಪುನಿತ್ ಜತೆ ಚಕ್ರವ್ಯೂಹ ಚಿತ್ರದಲ್ಲಿ ನಟಿಸಿದ್ದರು.
ಎನ್‌ಇಇಟಿ ಯುಜಿ 2018... ಪರೀಕ್ಷೆ ಬಗ್ಗೆಗಿನ ಇಂಟ್ರಸ್ಟಿಂಗ್ ಮಾಹಿತಿ

ಎನ್‌ಇಇಟಿ ಯುಜಿ 2018... ಪರೀಕ್ಷೆ ಬಗ್ಗೆಗಿನ ಇಂಟ್ರಸ್ಟಿಂಗ್ ಮಾಹಿತಿ

ಎನ್‌ಇಇಟಿ ಯುಜಿ 2018 ಪರೀಕ್ಷೆಗೆ ನೀವು ಸಿದ್ಧತೆ ಮಾಡಿಕೊಳ್ಳುತ್ತಿದ್ದೀರಾ.. ಹಾಗಿದ್ರೆ ಯಾವುದೆಲ್ಲಾ ಪ್ರಮುಖ ಟಾಪಿಕ್ ಅನ್ನೋ ಮಾಹಿತಿ ಇಲ್ಲಿದೆ. ಆಫ್‌ ಲೈನ್‌ ಮೂಲಕ ಪರೀಕ್ಷೆ ನಡೆಯಲಿದ್ದು, ಭಾರತದಾದ್ಯಂತ ಪ್ರಮುಖ ನಗರಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. ಒಂದು ಬೇಜಾರಿನ ಸಂಗತಿ ಅಂದ್ರೆ ಈ ಪರೀಕ್ಷೆಯಲ್ಲಿ ನೆಗಟೀವ್ ಅಂಕಗಳಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ ಮಾರ್ಕ್ ಕಳೆಯಲಾಗುತ್ತದೆ. ಪರೀಕ್ಷೆ ಮೇ 6.2018ರಂದು ನಡೆಯಲಿದೆ. ಬೋರ್ಡ್ ಪರೀಕ್ಷೆ ಮುಗಿದ ಬಳಿಕ ಈ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕಾಗಿದೆ ವಿಜ್ಞಾನ ಸಬ್‌ಜೆಕ್ಟ್ ಬಗ್ಗೆ ವಿದ್ಯಾರ್ಥಿಗಳು ಅತೀ ಹೆಚ್ಚು ಸ್ಟಡಿ ಮಾಡುವ ಅವಶ್ಯಕತೆಯಿದೆ.
ಈ ಬಾರಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಇಲ್ಲ

ಈ ಬಾರಿ ದ್ವಿತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್‌ ಇಲ್ಲ

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಯಾವುದೇ ಗ್ರೇಸ್ ಮಾರ್ಕ್ಸ್‌ ನೀಡುವುದಿಲ್ಲ, ಭೌತಶಾಸ್ತ್ರ ವಿಷಯದ 5 ಅಂಕಗಳ ಬಗ್ಗೆ ಮಾತ್ರ ಮುಂದಿನ ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಸ್ಪಷ್ಟಪಡಿಸಿದರು.ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಪ್ರಶ್ನೆಗಳ ಬಗ್ಗೆ ಗೊಂದಲ ಇದ್ದ ಕಾರಣ ಆ ಪ್ರಶ್ನೆಗಳಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಬೇಕೆಂದು ಒತ್ತಾಯ ವಿದ್ಯಾರ್ಥಿ ಹಾಗೂ ಪೋಷಕರಿಂದ ಕೇಳಿಬಂದಿತ್ತು, ಆದರೆ ಒತ್ತಾಯವನ್ನು ನಿರ್ಲಕ್ಷ್ಯ ಮಾಡಿರುವ ಶಿಕ್ಷಣ ಸಚಿವರು ಯಾವುದೇ ಗ್ರೇಸ್ ಮಾರ್ಕ್ಸ್‌ ನೀಡಲಾಗದು ಎಂದಿದ್ದಾರೆ.
9 ಗುಂಡು ತಿಂದು, 2 ತಿಂಗಳ ಕೋಮಾದಿಂದ ಎದ್ದು ಬಂದಿದ್ದ ಚೇತನ್ ಕುಮಾರ್(ಚಿರತೆ) ಮತ್ತೆ ಕರ್ತವ್ಯಕ್ಕೆ!

9 ಗುಂಡು ತಿಂದು, 2 ತಿಂಗಳ ಕೋಮಾದಿಂದ ಎದ್ದು ಬಂದಿದ್ದ ಚೇತನ್ ಕುಮಾರ್(ಚಿರತೆ) ಮತ್ತೆ ಕರ್ತವ್ಯಕ್ಕೆ!

ಜಮ್ಮು ಮತ್ತು ಕಾಶ್ಮೀರದ ಬಂಡಿಪೊರದಲ್ಲಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ 9 ಗುಂಡು ತಿಂದು ಎರಡು ತಿಂಗಳು ಕೋಮಾಗೆ ಜಾರಿದ ಸಿಆರ್‌ಫಿಎಫ್ ಕಮಾಂಡಿಗ್ ಆಫೀಸರ್ 45 ವರ್ಷದ ಚೇತನ್ ಕುಮಾರ್(ಚಿರತೆ) ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಉಗ್ರರೊಂದಿಗಿನ ಗುಂಡಿನ ಕಾದಾಟದ ವೇಳೆ ಅವರ ಎದೆಗೆ ಒಂಬತ್ತು ಗುಂಡುಗಳು ಹೊಕ್ಕಿದ್ದವು. ಸರಿ ಸುಮಾರು ಎರಡು ತಿಂಗಳು ಅವರು ಕೋಮಾದಲ್ಲಿದ್ದ ಅವರು ಬಳಿಕ ಅದರಿಂದ ಹೊರ ಬಂದು ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸಿದ್ದರು. ಸುದೀರ್ಘ ಚಿಕಿತ್ಸೆ ಬಳಿಕ ಸುಧಾರಿಸಿಕೊಂಡಿದ್ದ ಚೇತನ್ ಕುಮಾರ್ ಅವರು ಕೆಲಸಕ್ಕೆ ಮತ್ತೆ ಹಾಜರಾಗಿದ್ದಾರೆ.