ನಟಿ-ನಿರ್ಮಾಪಕನ ನಡುವಿನ 'ಕಾಸ್ಟಿಂಗ್ ಕೌಚ್' ಸಂಭಾಷಣೆ ಲೀಕ್ ಮಾಡಿದ ವರ್ಮಾ
ಚಲನಚಿತ್ರ
- 5 days ago
ತೆಲುಗು ನಟಿ ಶ್ರೀರೆಡ್ಡಿಗೆ ಸಾಥ್ ನೀಡಿರುವ ರಾಮ್ ಗೋಪಾಲ್ ವರ್ಮಾ, ಇಂಡಸ್ಟ್ರಿಯ ದೊಡ್ಡ ನಿರ್ಮಾಪಕನೊಬ್ಬನ ಕರಾಳ ಮುಖವನ್ನ ಬಯಲು ಮಾಡಿದ್ದಾರೆ. ಟಿವಿ ಸಂದರ್ಶನದಲ್ಲಿ ಕಾಸ್ಟಿಮಗ್ ಕೌಚ್ ಬಗ್ಗೆ ಮಾನಾಡಿದ ರಾಮ್ ಗೋಪಾಲ್ ವರ್ಮಾ, ನನ್ನ ಎದುರಿಗೆ ನನಗೆ ಗೊತ್ತಿರುವ ನಿರ್ಮಾಪಕನೊಬ್ಬ ಯುವತಿಗೆ ಮಂಚಕ್ಕೆ ಆಫರ್ ಮಾಡಿದ್ದ'' ಎಂದು ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಆ ನಟಿ ಹಾಗೂ ನಿರ್ಮಾಪಕನ ಮಧ್ಯೆ ನಡೆದ ಸಂಭಾಷಣೆಯನ್ನ ಬಹಿರಂಗಪಡಿಸಿದ್ದಾರೆ. ಆದ್ರೆ, ಆ ನಟಿ ಯಾರು.? ಮತ್ತು ಆ ನಿರ್ಮಾಪಕ ಯಾರು ಎಂಬುದನ್ನ ವರ್ಮಾ ಗೌಪ್ಯವಾಗಿಟ್ಟಿದ್ದಾರೆ.