Short News

ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಅಯ್ಯಪ್ಪ

ನಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ಅಯ್ಯಪ್ಪ

ಕರ್ನಾಟಕ ರಣಜಿ ಕ್ರಿಕೆಟಿಗ ಹಾಗೂ ಬಿಗ್'ಬಾಸ್ ಖ್ಯಾತಿಯ ಎನ್.ಸಿ ಅಯ್ಯಪ್ಪ, ಗೆಳತಿ ನಟಿ ಅನು ಪೂವಮ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ವಸಂತನಗರದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಕೊಡವ ಸಂಪ್ರದಾಯದಂತೆ ನಿಶ್ಚಿತಾರ್ಥ ನೆರವೇರಿದೆ. ಕನ್ನಡದ ಕರ್ವ, ಲೈಫ್ ಸೂಪರ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವಅನು ಪೂವಮ್ಮ ಅವರನ್ನು ಕೈ ಹಿಡಿಯಲಿದ್ದು ಮುಂದಿನ ವರ್ಷ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಜೆಡಿಎಸ್‌-ಕಾಂಗ್ರೆಸ್‌ನದ್ದು ಭ್ರಷ್ಟಾಚಾರಕ್ಕಾಗಿ ಮೈತ್ರಿ: ಪ್ರಕಾಶ್ ಜಾವಡೇಕರ್‌

ಜೆಡಿಎಸ್‌-ಕಾಂಗ್ರೆಸ್‌ನದ್ದು ಭ್ರಷ್ಟಾಚಾರಕ್ಕಾಗಿ ಮೈತ್ರಿ: ಪ್ರಕಾಶ್ ಜಾವಡೇಕರ್‌

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್‌ ಅವರು ಜೆಡಿಎಸ್-ಕಾಂಗ್ರೆಸ್‌ ಮೈತ್ರಿಯ ಮೇಲೆ ಹರಿಹಾಯ್ದರು. ಈ ಮೈತ್ರಿ ಆಗಿರುವುದು ಭ್ರಷ್ಟಾಚಾರಕ್ಕಾಗಿ ಎಂದ ಪ್ರಕಾಶ ಜಾವಡೇಕರ್, ಕಾಂಗ್ರೆಸ್‌ ಮಂತ್ರಿಗಳ ಹಗರಣದ ತನಿಖೆ ಮಾಡಬಾರದೆಂಬ 'ಡೀಲ್‌' ಕುದಿರಿಸಿಕೊಂಡು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೆಂಬಲ ನೀಡಿದೆ, ಇದು ವೈಚಾರಿಕ ಮೈತ್ರಿ ಅಲ್ಲ ಎಂದು ಅವರು ಆರೋಪಿಸಿದರು.
ಬೆಂಗಳೂರು ವಿರುದ್ಧ 30 ರನ್ ಗಳ ಜಯ ಸಾಧಿಸಿದ ರಾಜಸ್ತಾನ

ಬೆಂಗಳೂರು ವಿರುದ್ಧ 30 ರನ್ ಗಳ ಜಯ ಸಾಧಿಸಿದ ರಾಜಸ್ತಾನ

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಜಸ್ಥಾನ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 165 ರನ್ ಪೇರಿಸಿ ಬೆಂಗಳೂರಿಗೆ 165 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ್ದ ಬೆಂಗಳೂರು ನಿಗದಿತ ಸಮಯದಲ್ಲಿ ಗುರಿ ಮುಟ್ಟುವಲ್ಲಿ ವಿಫಲವಾಗಿದೆ. ರಾಜಸ್ತಾನ ಬೆಂಗಳೂರು ವಿರುದ್ಧ ಬರೋಬ್ಬರಿ 30 ರನ್ ಗಳ ಜಯ ಸಾಧಿಸಿದೆ. ಆದರೆ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ಎದುರು 6 ವಿಕೆಟ್ ಸೋಲನುಭವಿಸಿತ್ತು.
ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜೀಂದರ್ ಸಿಂಗ್ ಆಯ್ಕೆ

ಹಾಕಿ ಇಂಡಿಯಾ ಅಧ್ಯಕ್ಷರಾಗಿ ರಾಜೀಂದರ್ ಸಿಂಗ್ ಆಯ್ಕೆ

ಹಾಕಿ ಇಂಡಿಯಾದ ಅಧ್ಯಕ್ಷರಾಗಿದ್ದ ಮರಿಯಮ್ಮ ಕೋಶಿ ಅವರು ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ರಾಜೀಂದರ್ ಸಿಂಗ್ ಆಯ್ಕೆಯಾಗಿದ್ದಾರೆ. ಹಿಂದೆ ಹಾಕಿ ಇಂಡಿಯಾದ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ರಾಜೀಂದರ್ ಸಿಂಗ್ ಅವರು ಹಾಕಿ ಇಂಡಿಯಾ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಿಂದೆ ಹಾಕಿ ಇಂಡಿಯಾದ ಖಜಾಂಚಿಯಾಗಿಯೂ ಕೆಲಸ ಮಾಡಿದ್ದ ರಾಜೀಂದರ್ ಹಾಕಿ ಇಂಡಿಯಾ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಜಮ್ಮು-ಕಾಶ್ಮೀರ ಹಾಕಿ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು.