Short News

ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಬೆದರಿಕೆ: ದೂರು ಕೊಟ್ಟ Rapid ರಶ್ಮಿ

ಸೋಷಿಯಲ್ ಮೀಡಿಯಾದಲ್ಲಿ ಅತ್ಯಾಚಾರ ಬೆದರಿಕೆ: ದೂರು ಕೊಟ್ಟ Rapid ರಶ್ಮಿ

ಕೆಲವು ದಿನಗಳ ಹಿಂದೆಯಷ್ಟೇ 'ರಾಜರಥ' ಚಿತ್ರದ ನಾಯಕ ನಿರೂಪ್ ಭಂಡಾರಿ,ನಿರ್ದೇಶಕ ಅನೂಪ್ ಭಂಡಾರಿಗೆ 'ಡ್ಯಾಶಿಂಗ್ ಪ್ರಶ್ನೆ' ಕೇಳಿ Rapid ರಶ್ಮಿ ವಿವಾದಕ್ಕೆ ಗ್ರಾಸವಾಗಿದ್ದರು. ಇದೀಗ Rapid ರಶ್ಮಿಗೆ ಕೆಲವರು ನಿಂದಿಸಿದ್ದಾರೆ. ಕಿಡಿಗೇಡಿಗಳು ಅತ್ಯಾಚಾರದ ಬೆದರಿಕೆಯನ್ನೂ ಹಾಕಿದ್ದಾರೆ. ''ನಿನ್ನ ರೇಟ್ ಎಷ್ಟು?'' ಎಂದು ಕೇಳುವುದರ ಜೊತೆಗೆ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಕೆಲವರು Rapid ರಶ್ಮಿಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಾರೆ. ಅಶ್ಲೀಲ ಪದಗಳನ್ನು ಉಪಯೋಗಿಸಿ Rapid ರಶ್ಮಿಗೆ ಕಿರುಕುಳ ಕೊಟ್ಟಿದ್ದಾರೆ ಕೆಲ ಕಿಡಿಗೇಡಿಗಳು. ಅತ್ಯಾಚಾರದ ಬೆದರಿಕೆಯೂ ಬಂದ ಮೇಲೆ ಮಹಿಳಾ ಆಯೋಗದ ಮೆಟ್ಟಿಲು ಹತ್ತಿದ್ದಾರೆ.
100 ಮುಗ್ಗರಿಸಿದ ಮುಂಬಯಿ ಶೇರು ಪೇಟೆ

100 ಮುಗ್ಗರಿಸಿದ ಮುಂಬಯಿ ಶೇರು ಪೇಟೆ

ಇಂದು ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 100 ಅಂಕ ಮುಗ್ಗರಿಸಿದೆ. ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್‌ 74.78 ಅಂಕ ನಷ್ಟದೊಂದಿಗೆ 34,541.86 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.20 ಅಂಕ ನಷ್ಟದೊಂದಿಗೆ10,586.20 ಅಂಕ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಬೆಳಗ್ಗಿನ ವಹಿವಾಟಿನಲ್ಲಿ ಟಿಸಿಎಸ್‌, ಭಾರ್ತಿ ಏರ್‌ಟೆಲ್‌, ರಿಲಯನ್ಸ್‌, ಇನ್‌ಫೋಸಿಸ್‌, ಎಸ್‌ ಬ್ಯಾಂಕ್‌ ಶೇರುಗಳು ಹೆಚ್ಚು ವಹಿವಾಟಿಗೊಳಪಟ್ಟಿವೆ.
ತಿಂಡಿ ಕದ್ದಿದ್ದಕ್ಕೆ 50 ವರ್ಷ ಜೈಲು !

ತಿಂಡಿ ಕದ್ದಿದ್ದಕ್ಕೆ 50 ವರ್ಷ ಜೈಲು !

ಅಮೆರಿಕದ ಟೆಕ್ಸಾಸ್ ನಲ್ಲಿ 53 ವರ್ಷದ ಗಿಲ್ಬರ್ಟೋ ಎಸ್ಕಾಮಿಲ್ಲಾ ಎಂಬಾತ 1.2(8 ಕೋಟಿ ಮೌಲ್ಯ) ಮಿಲಿಯನ್ ಡಾಲರ್ ಮೌಲ್ಯದ ಪಜಿತಾಸ್ ಎಂಬ ತಿಂಡಿಯನ್ನು ಕಳವು ಮಾಡಿದ್ದು, ಅವನಿಗೆ ಕೋರ್ಟ್ 50 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೆಮರೊನ್ ಕೌಂಟಿ ಬಾಲಾಪರಾಧಿಗಳ ಕೇಂದ್ರದಿಂದ ಫಜೀತಾ ಎಂಬ ತಿನಿಸುಗಳನ್ನು ತರಿಸಿಕೊಂಡು ಅದನ್ನು ತನ್ನ ಗ್ರಾಹಕರಿಗೆ ಗಿಲ್ಬರ್ಟೋ ಮಾರಾಟ ಮಾಡುತ್ತಿದ್ದ. ಈ ರೀತಿ ದೊಡ್ಡ ಹಗರಣವನ್ನೇ ಮಾಡಿದ್ದಾನೆ. ಒಮ್ಮೆ ಆತ ಮೆಡಿಕಲ್ ಚೆಕಪ್ ಗಾಗಿ ಹೋಗಿದ್ದಾಗ ಕಳವು ಮಾಡಿದ್ದ ರಾಶಿಗಟ್ಟಲೆ ಫಜೀತಾಸ್ ಬಂದಿತ್ತು. ಅದರ ಮೂಲ ಕೆದಕಿದಾಗ ಹಗರಣ ಬೆಳಕಿಗೆ ಬಂತು. ಬಳಿಕ ಗಿಲ್ಬರ್ಟೋ ನನ್ನು ಬಂಧಿಸಲಾಗಿತ್ತು.
ನಕಲಿ ಜಾತಿ ಪ್ರಮಾಣಪತ್ರ: ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಅಸಿಂಧು

ನಕಲಿ ಜಾತಿ ಪ್ರಮಾಣಪತ್ರ: ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಅಸಿಂಧು

ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಕೋಲಾರ ಜಿಲ್ಲೆ, ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ಜಾತಿ ಪ್ರಮಾಣ ಪತ್ರ ನಕಲಿ ಎಂದಿರುವ ನ್ಯಾಯಾಲಯ ಅವರ ಪ್ರಮಾಣಪತ್ರವನ್ನು ರದ್ದುಗೊಳಿಸಿದೆ. ಜೊತೆಗೆ ಶಾಸಕತ್ವವನ್ನೂ ಅಸಿಂಧುಗೊಳಿಸಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೆಯಲ್ಲಿ ತಾವು ಬುಡಗ ಜಂಗಮ (ಎಸ್‌ಸಿ) ಜಾತಿಗೆ ಸೇರಿದವರು ಎಂದು ಹೇಳಿ ಅವರು ಜಾತಿ ಪ್ರಮಾಣ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು.