Short News

ಮದುವೆ ತಯಾರಿಯಲ್ಲಿ ಸಂತೋಷ್ ಆನಂದ್ ರಾಮ್

ಮದುವೆ ತಯಾರಿಯಲ್ಲಿ ಸಂತೋಷ್ ಆನಂದ್ ರಾಮ್

ಕನ್ನಡ ಸಿನಿಮಾರಂಗದಲ್ಲಿ ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮದುವೆಗೆ ಸಿದ್ದತೆ ಶುರುವಾಗಿದೆ.

ಕಳೆದ ವರ್ಷದ ಅಂತ್ಯದಲ್ಲಿ ಸುರಭಿ ಹತ್ವಾರ್ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂತೋಷ್ ಇದೇ ತಿಂಗಳು ಮಧುಮಗನಾಗಿ ಹಸೆಮಣೆ ಮೇಲೆ ಕೂರಲಿದ್ದಾರೆ. ಇಬ್ಬರು ಮನೆಯವರು ನಿಶ್ಚಯ ಮಾಡಿರುವಂತೆ ಸಂಪ್ರದಾಯಬದ್ದವಾಗಿ ಮದುವೆ ಸಮಾರಂಭ ನಡೆಯಲಿದೆ.

ಸಂತೋಷ್ -ಸುರಭಿ ಮದುವೆ ಎಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ ಆಗಿರುತ್ತಾರೆ.  

ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!

ಅಂತರ್ಜಾಲದಲ್ಲಿ ಯಾವುದೇ ಪೋಟೊ ಕದ್ದರೆ ಹುಷಾರ್!

ವಾಟರ್ ಮಾರ್ಕ್ ಹಾಕಿ ಫೋಟೊ ಕಳ್ಳತನಕ್ಕೆ ನಿಯಂತ್ರಣ ಹೇರಬಹುದಾದರೂ ವಾಟರ್‌ ಮಾರ್ಕ್ ಅನ್ನು ಸಹ ತೆಗೆಯುವ ತಂತ್ರಜ್ಞಾನಗಳು ಇವೆ. ನಾವು ಕ್ಲಿಕ್ಕಿಸಿದ ಫೋಟೊಗಳನ್ನು ಇನ್ಯಾರಾದರೂ ಕದ್ದು ಬಳಕೆ ಮಾಡಿದ್ದರೆ ಆ ವಿಷಯವನ್ನು ಆ ತಕ್ಷಣವೇ ನಮ್ಮ ಗಮನಕ್ಕೆ ತಂದು, ಪರಿಹಾರವನ್ನು ಸಹ ಒದಗಿಸುವ ವೆಬ್‌ಸೈಟ್ ಒಂದಿದೆ. ಅದುವೇ www.pixsy.com ವೆಬ್‍ಸೈಟ್‌ನಲ್ಲಿ ಹೆಸರು ನೋಂದಾಯಿಸಿದ ಮೇಲೆ ಲಾಗಿನ್ ಆಗಿ. ನಮ್ಮ ಫೋಟೊವನ್ನು ಬೇರೆ ಯಾರಾದರೂ ಬಳಸಿದ್ದಾರೆಯೇ ಎಂದು ತಿಳಿಯಲು ಆ ಫೋಟೊವನ್ನು ಪಿಕ್ಸಿಯಲ್ಲಿ ಅಪ್‍ಲೋಡ್ ಮಾಡಿ. ಆಗ ಫೋಟೊ ಬೇರೆ ಕಡೆ ಬಳಕೆಯಾಗಿದೆಯೇ ಎಂಬುದು ತಿಳಿಯಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3: ಮಾರಾಟದಲ್ಲಿ ಜಿಯೋ-ಏರ್ಟೆಲ್ ಸ್ಪರ್ಧೆ!

ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3: ಮಾರಾಟದಲ್ಲಿ ಜಿಯೋ-ಏರ್ಟೆಲ್ ಸ್ಪರ್ಧೆ!

ಜಿಯೋ ಮತ್ತು ಏರ್ ಟೆಲ್ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವನ್ನು ನಡೆಸುತ್ತಿರುವ ಮಾದರಿಯಲ್ಲಿಯೇ, ಆಪಲ್ ವಾಚ್ ಸಿರೀಸ್ 3 (GPS + ಸೆಲ್ಯೂಲರ್) ಯನ್ನು ಬಿಡುಗಡೆ ಮಾಡಲು ಸಹ ಸ್ಪರ್ಧೇಯನ್ನು ನಡೆಸುತ್ತಿವೆ. ಮೇ 4ನೇ ತಾರೀಖಿನಿಂದ ಮಾರುಕಟ್ಟೆಯಲ್ಲಿ ಇದು ಲಭ್ಯವಿರಲಿದ್ದು, ಜಿಯೋ .ಕಾಮ್, ರಿಲಯನ್ಸ್ ಡಿಜಿಟಲ್, ಜಿಯೋ ಸ್ಟೋರ್ ಮತ್ತು ಏರ್ಟೆಲ್ ವೆಬ್ ಸೈಟ್ ಗಳಲ್ಲಿ ಮಾರಾಟವಾಗಲಿದೆ. ಇದಲ್ಲದೇ ಮೇ 11 ರಿಂದ ಸಾಮಾನ್ಯ ಆಫ್ ಲೈನ್ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್ ವಾಚ್ ಲಭ್ಯವಿರಲಿದೆ. ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಆಪಲ್ ವಾಚ್ ಸಿರೀಸ್ 3 ಸಾಕಷ್ಟು ಬೇಡಿಕೆಯನ್ನು ಸೃಷ್ಠಿಸಿಕೊಂಡಿದೆ.
ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL, ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಿ

ರೂ.13,999ಕ್ಕೆ ಸ್ಮಾರ್ಟ್‌TV ಕೊಟ್ಟ TCL, ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಿ

ವಿಶ್ವದ 3ನೇ ಅತೀ ದೊಡ್ಡ ಟಿವಿ ಬ್ರಾಂಡ್ ಆಗಿರುವ TCLಕಂಪನಿಯೂ ಭಾರತದಲ್ಲಿ ಹಲವು ಟಿವಿಗಳನ್ನು ಮಾರಾಟ ಮಾಡುತ್ತಿದ್ದು,ಸದ್ಯ ಭಾರತೀಯ ಮಾರುಕಟ್ಟೆಗೆ ತನ್ನ ಮೊದಲ ಸ್ಮಾರ್ಟ್TVಯನ್ನು ಪರಿಚಯಿಸಿದೆ. TCLಕಂಪನಿಯೂ ಭಾರತೀಯ ಮಾರುಕಟ್ಟೆಯಲ್ಲಿ iFFALCONಸರಣಿಯಲ್ಲಿ ಮೂರು ಸ್ಮಾರ್ಟ್‌TVಗಳನ್ನು ಲಾಂಚ್ ಮಾಡಿದೆ. iFFALCON,iFFALCON F2 ಮತ್ತು iFFALCON 55K2A ಸ್ಮಾರ್ಟ್‌TVಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಬಳಕೆದಾರರಿಗೆ ಹೊಸ ಅನುಭವನ್ನು ನೀಡಲಿವೆ, ಇದರಲ್ಲಿ HD ರೆಡಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, ಮೋಷನ್ ಸೆನ್ಸಾರ್ ಸೇರಿದಂತೆ ವಿವಿಧ ಆಯ್ಕೆಗಳನ್ನು ನೀಡಲಾಗಿದೆ. ಬಿಲ್ಟ್ ಇನ್ WiFi ಸಹ ಇದರಲ್ಲಿದೆ.