Short News

ಮುಂದಿನ ವಾರ ನಡೆಯುತ್ತಿದೆ ಸ್ಯಾಂಡಲ್ ವುಡ್  ಸ್ಟಾರ್ ನಿರ್ದೇಶಕನ ಮದುವೆ

ಮುಂದಿನ ವಾರ ನಡೆಯುತ್ತಿದೆ ಸ್ಯಾಂಡಲ್ ವುಡ್ ಸ್ಟಾರ್ ನಿರ್ದೇಶಕನ ಮದುವೆ

ಕನ್ನಡ ಸಿನಿಮಾರಂಗದಲ್ಲಿ ರಾಮಾಚಾರಿ ಹಾಗೂ ರಾಜಕುಮಾರ ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಮದುವೆ ಇದೇ ತಿಂಗಳು ನಡೆಯುತ್ತಿದೆ. ಫೆಬ್ರವರಿ 20 ರಂದು ಬೆಂಗಳೂರಿನಲ್ಲಿ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಅವರ ಕೈ ಹಿಡಿಯಲಿದ್ದಾರೆ ಸಂತೋಷ್. ಈ ಕಲ್ಯಾಣದಲ್ಲಿ ಕನ್ನಡದ ಬಹುತೇಕ ಸ್ಟಾರ್ ಕಲಾವಿದರು ಭಾಗಿ ಆಗಲಿದ್ದಾರೆ. ರಾಜ್ ಕುಮಾರ್ ಕುಟುಂಬಸ್ಥರು , ಯಶ್, ಸುದೀಪ್, ದರ್ಶನ್ ಹೀಗೆ ಇನ್ನೂ ಅನೇಕರು ಬಂದು ಇಬ್ಬರಿಗೂ ಶುಭ ಹಾರೈಸಲಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಸುರಭಿ ಹತ್ವಾರ್ ಮತ್ತು ಸಂತೋಷ್ ಆನಂದ್ ರಾಮ್ ನಿಶ್ಚಿತಾರ್ಥ ನಡೆದಿತ್ತು.
ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ಐಡಿಯಾ ರೂ.109 ಪ್ಲಾನ್ ಜಾರಿಗೆ ತಂದಿದ್ದು, ಇದರಲ್ಲಿ ಬಳಕೆದಾರರಿಗೆ ವಾಯ್ಸ್, ಮೇಸೆಜ್ ಮತ್ತು ಡೇಟಾ ಆಫರ್ ಅನ್ನು ನೀಡುತ್ತಿದೆ ಎನ್ನಲಾಗಿದೆ. ಈ ಪ್ಲಾನ್ ನಲ್ಲಿ ಬಳಕೆದಾರರು 1 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಲಿದ್ದು, ಉಚಿತವಾಗಿ ಮೇಸೆಜ್ ಮಾಡುವ ಅವಕಾಶವು ದೊರೆಯಲಿದೆ. ಆದರೆ ಈ ಆಫರ್ ಕೇವಲ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಮಕ್ಕಳು ಊಟ ಮಾಡುವಾಗ ಹಠ ಮಾಡುವುದು ಏಕೆ? ಇಲ್ಲಿದೆ ಕಾರಣಗಳು

ಮಕ್ಕಳು ಊಟ ಮಾಡುವಾಗ ಹಠ ಮಾಡುವುದು ಏಕೆ? ಇಲ್ಲಿದೆ ಕಾರಣಗಳು

ಮಗು ಎಂಬುದೆ ಆನಂದಕ್ಕೆ ಒಂದು ಪರ್ಯಾಯ ಪದ. ಅದು ಕುಳಿತರು ಆನಂದ, ನಿಂತರು ಆನಂದ, ಓಡಾಡಿಕೊಂಡು, ಆಟವಾಡಿದರೆ ಆನಂದವೋ, ಆನಂದ. ಆದರೂ ಸಹ ಅವರ ಊಟ ತಿಂಡಿಯ ಬಗೆಗೆ ಸ್ವಲ್ಪ ಮುತುವರ್ಜಿಯನ್ನು ವಹಿಸುವುದು ಅತ್ಯಗತ್ಯ. ಇನ್ನು ಮಗುವಿಗೆ ಎದೆಹಾಲನ್ನು ಕುಡಿಸಲು ಎದೆಗಾರಿಕೆಯೇ ಇರಬೇಕು. ಕಾಲ ಕ್ರಮೇಣ ಅವರಿಗೆ ವಯಸ್ಸಾದಂತೆ ಅವರಿಗು ಆಹಾರದ ರುಚಿಯನ್ನು ಕಂಡು ಹಿಡಿಯುವ ಪ್ರವೃತ್ತಿ ಬೆಳೆಯುತ್ತದೆ. ಕೆಲವೊಮ್ಮೆ ತಕ್ಷಣ ಮಕ್ಕಳಲ್ಲಿ ತಿನ್ನುವ ಚಪಲಗಳು ಮೂಡುವುದನ್ನು ನಾವು ಗಮನಿಸಬಹುದು. ಮಕ್ಕಳಿಗೆ ಊಟ ಮಾಡಿಸುವುದು ದಿನೇ ದಿನೇ ಕಷ್ಟವಾಗುತ್ತ ಸಾಗುವುದನ್ನು ನೀವು ಗಮನಿಸಬಹುದು.

ಕೋತಿಯನ್ನು ಗಲ್ಲಿಗೇರಿಸಿದ ರೈತ, ಯಾಕೆ ಗೊತ್ತಾ ?

ಕೋತಿಯನ್ನು ಗಲ್ಲಿಗೇರಿಸಿದ ರೈತ, ಯಾಕೆ ಗೊತ್ತಾ ?

ಕೋತಿಯ ಮೇಲೆ ಕೊಪಗೊಂಡ ರೈತನೊಬ್ಬ ಕೋತಿಯನ್ನು ಗಲ್ಲಿಗೇರಿಸಿರುವ ಘಟನೆ ಮಧ್ಯ ಪ್ರದೇಶದ ಬಿತುಲ್ ಜಿಲ್ಲೆಯಲ್ಲಿ ನಡೆದಿದೆ. ಹೌದು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕೋತಿ ಹಾಳು ಮಾಡಿತು ಎಂದು ರೊಚ್ಚಿಗೆದ್ದ ರೈತ ಕೋತಿಗೆ ನೇಣು ಬಿಗಿದಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ ಬಿರ್ಜು ಓಜಾ (38) ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆತುಲ್‌ನ ಶಾಹ್ಪುರ ಪ್ರದೇಶದಲ್ಲಿ ಎರಡು ವಾರಗಳ ಹಿಂದೆ ಗಲ್ಲಿಗೇರಿಸಿದ ಸ್ಥಿತಿಯಲ್ಲಿ ಕೋತಿಯೊಂದರ ಶವ ಪತ್ತೆಯಾಗಿತ್ತು. ನಂತರ ಈ ಪ್ರಕರಣ ಬಯಲಿಗೆ ಬಂದಿದೆ.