Short News

ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

ಹುಚ್ಚ ವೆಂಕಟ್ ಗೆ ಉಗಿದು ಉಪ್ಪಿನಕಾಯಿ ಹಾಕಿದ ಶಿವಣ್ಣನ ಅಭಿಮಾನಿಗಳು!

ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಲು, ಅವರ ಮನೆ ಬಳಿ ಹುಚ್ಚ ವೆಂಕಟ್ ಹೋಗಿದ್ದಾರೆ. ಆದ್ರೆ, ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಿವಣ್ಣನ ಡ್ರೈವರ್ ಹಾಗೂ ಸೆಕ್ಯೂರಿಟಿ ಗಾರ್ಡ್ ಕೂಡ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಅಷ್ಟಕ್ಕೆ, ಶಿವಣ್ಣನ ಬಗ್ಗೆ ಹುಚ್ಚ ವೆಂಕಟ್ ಬಾಯಿಗೆ ಬಂದ ಹಾಗೆ ಮಾತನಾಡಿದ್ದಾರೆ. ಶಿವಣ್ಣನ ಬಗ್ಗೆ ನಾಲಿಗೆ ಬಿಗಿ ಹಿಡಿಯದೆ ಹುಚ್ಚ ವೆಂಕಟ್ ಮಾತನಾಡಿರುವ ವಿಡಿಯೋ ಬಗ್ಗೆ ಈಗ ಎಲ್ಲೆಡೆ ಅಸಮಾಧಾನ ಭುಗಿಲೆದ್ದಿದೆ. ಮನಬಂದಂತೆ ಮಾತನಾಡುವ ಹುಚ್ಚ ವೆಂಕಟ್ ಗೆ ಶಿವಣ್ಣನ ಅಭಿಮಾನಿಗಳು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಹುಚ್ಚ ವೆಂಕಟ್ ಮೂತಿಗೆ ಶಿವ'ಭಕ್ತ'ರು ಮಹಾ ಮಂಗಳಾರತಿ ಎತ್ತುತ್ತಿದ್ದಾರೆ.
ಮಾ.22ರಂದು ಸಿನಿತಾರೆಯರ ಜೊತೆ 'ರಾಜರಥ' ಸಿನಿಮಾ ನೋಡುವ ಅದೃಷ್ಟ ನಿಮ್ಮದಾಗಬೇಕಾ? ಹೀಗೆ ಮಾಡಿ...

ಮಾ.22ರಂದು ಸಿನಿತಾರೆಯರ ಜೊತೆ 'ರಾಜರಥ' ಸಿನಿಮಾ ನೋಡುವ ಅದೃಷ್ಟ ನಿಮ್ಮದಾಗಬೇಕಾ? ಹೀಗೆ ಮಾಡಿ...

'ರಂಗಿತರಂಗ' ಚಿತ್ರದ ನಂತರ ಭಂಡಾರಿ ಬ್ರದರ್ಸ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ 'ರಾಜರಥ' ಸಿನಿಮಾ ಮುಂದಿನವಾರ ರಾಜ್ಯಾದಂತ್ಯ ತೆರೆಕಾಣುತ್ತಿದೆ. ಈ ಮಧ್ಯೆ 'ಮೈರಾಜರಥ' ಎಂಬ ವಿಭಿನ್ನ ಚಾಲೆಂಜ್ ಒಂದನ್ನ ಚಿತ್ರತಂಡ ಹಮ್ಮಿಕೊಂಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲನೆ ನೀಡಿದ್ದಾರೆ. 'ಮೈರಾಜರಥ' ಚಾಲೆಂಜ್ ಗೆ ಚಾಲನೆ ನೀಡಿರುವ ಅಪ್ಪು ತಮ್ಮ ಸೈಕಲ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಿಮ್ಮ ವಾಹನದ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿ #myrajaratha ಎಂಬ ಹ್ಯಾಶ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿ. ಹೀಗೆ ಮಾಡಿದ 10 ಅದೃಷ್ಟಶಾಲಿಗಳಿಗೆ ಎರಡೆರಡು ಟಿಕೆಟ್ ಉಚಿತವಾಗಿ ನೀಡಲಾಗುತ್ತೆ.
ಟಾಲಿವುಡ್ ನ ಸ್ಟಾರ್ ನಟರ ಚಿತ್ರಕ್ಕೆ ಹಿರೋಯಿನ್ ಆದ ರಶ್ಮಿಕಾ ಮಂದಣ್ಣ

ಟಾಲಿವುಡ್ ನ ಸ್ಟಾರ್ ನಟರ ಚಿತ್ರಕ್ಕೆ ಹಿರೋಯಿನ್ ಆದ ರಶ್ಮಿಕಾ ಮಂದಣ್ಣ

ಟಾಲಿವುಡ್‌ನಲ್ಲಿಯೂ ಫೇಮಸ್ ಆಗುತ್ತಿರುವ ಸ್ಯಾಂಡಲ್‌ವುಡ್‌ ನಟಿ ರಶ್ಮಿಕಾ ಮಂದಣ್ಣ ತೆಲುಗಿನ ಚಲೋ ಚಿತ್ರದ ಬಳಿಕ ಅಲ್ಲಿ ತನ್ನ ಜನಪ್ರೀಯತೆ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಚಲೋ ಸಕ್ಸಸ್ ಬಳಿಕ ಟಾಲಿವುಡ್‌ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ್ ಹಾಗೂ ನ್ಯಾಚುರಲ್ ಸ್ಟಾರ್ ನಾನಿ ಅವರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತೆಲುಗಿನ ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದು, ಚಿತ್ರದ ಹೆಸರು ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಯುಗಾದಿಯಂದು ನಡೆಯಿತು 'ಪೈಲ್ವಾನ್' ಮುಹೂರ್ತ, ಚಿತ್ರಕ್ಕೆ ಕ್ಲಾಪ್ ಮಾಡಿದ ಕಿಚ್ಚನ ಪತ್ನಿ ಪ್ರಿಯಾ

ಯುಗಾದಿಯಂದು ನಡೆಯಿತು 'ಪೈಲ್ವಾನ್' ಮುಹೂರ್ತ, ಚಿತ್ರಕ್ಕೆ ಕ್ಲಾಪ್ ಮಾಡಿದ ಕಿಚ್ಚನ ಪತ್ನಿ ಪ್ರಿಯಾ

'ಹೆಬ್ಬುಲಿ' ಬಳಿಕ ಕಿಚ್ಚ ಸುದೀಪ್ ಹಾಗೂ ಕೃಷ್ಣ ಒಂದಾಗಿರುವುದು 'ಪೈಲ್ವಾನ್'ಗಾಗಿ.  ಬೆಂಗಳೂರಿನ ಹನುಮಂತನಗರದಲ್ಲಿರುವ ಶ್ರೀರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ 'ಪೈಲ್ವಾನ್' ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. 'ಪೈಲ್ವಾನ್' ಚಿತ್ರದ ಮುಹೂರ್ತದ ಶಾಟ್ ಗೆ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಕ್ಲಾಪ್ ಮಾಡಿದರು. ನಿರ್ಮಾಪಕಿ ಸ್ವಪ್ನ ಕೃಷ್ಣ ಕ್ಯಾಮರಾ ಸ್ವಿಚ್ ಆನ್ ಮಾಡಿದರು. 'ಪೈಲ್ವಾನ್' ಚಿತ್ರದ ಮುಹೂರ್ತ ನಿನ್ನೆ ಮುಗಿದಿದೆ. ಆದ್ರೆ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಿನಲ್ಲಿ. ಸಿನಿಮಾದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿರುವ ಸುದೀಪ್, ಬಾಕ್ಸಿಂಗ್ ಟ್ರೇನಿಂಗ್ ಪಡೆದುಕೊಳ್ಳುತ್ತಿದ್ದಾರೆ.