Short News

500KM ಸೈಕಲ್ ತುಳಿದು ಬಂದ ಅಭಿಮಾನಿಯನ್ನು ಕಂಡು ಕರಗಿತು ಶಿವಣ್ಣನ ಮನ!

500KM ಸೈಕಲ್ ತುಳಿದು ಬಂದ ಅಭಿಮಾನಿಯನ್ನು ಕಂಡು ಕರಗಿತು ಶಿವಣ್ಣನ ಮನ!

ಶಿವಣ್ಣ ಅವರ ಅಪ್ಪಟ್ಟ ಅಭಿಮಾನಿ 500 ಕಿಲೋ ಮೀಟರ್ ಸೈಕಲ್ ಸವಾರಿ ಮಾಡಿದ್ದಾನೆ. ಪಕೀರಪ್ಪ ಎಂಬ ಈ ಅಭಿಮಾನಿ ಮೂಲತಃ ಬೆಳಗಾವಿಯವರು. ತಂದೆ ತಾಯಿಯ ಪ್ರೀತಿ ಇಲ್ಲದೆ ಬೆಳೆದ ಈ ಹುಡುನಿಗೆ ಶಿವಣ್ಣನ 'ಆನಂದ್' ಸಿನಿಮಾ ತುಂಬ ಹತ್ತಿರ ಆಗಿದೆಯಂತೆ. ಮೊದಲು ಈ ಚಿತ್ರ ನೋಡಿ ಇಷ್ಟ ಪಟ್ಟ ಈತ ಮುಂದೆ ಶಿವಣ್ಣನ ದೊಡ್ಡ ಅಭಿಮಾನಿ ಆಗಿದ್ದಾನೆ. ಪಿಯುಸಿ ಓದಿರುವ ಪಕೀರಪ್ಪ ತನ್ನ ಊರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದಾನೆ. ಬೆಳಗಾವಿಯಿಂದ ಬೆಂಗಳೂರಿಗೆ ಸುಮಾರು 500 ಕಿಲೋ ಮೀಟರ್ ಪ್ರಯಾಣವನ್ನು ಸೈಕಲ್ ನಲ್ಲಿ ಮಾಡಿ ಪಕೀರಪ್ಪ ಇಂದು ಶಿವಣ್ಣ ಮನೆ ತಲುಪಿದ್ದಾನೆ.
ಬನ್ನೇರುಘಟ್ಟದಲ್ಲಿ ಜಾರಿಗೆ ಬರಲಿದೆ ತಿರುಪತಿ ಮಾದರಿ ವ್ಯವಸ್ಥೆ!

ಬನ್ನೇರುಘಟ್ಟದಲ್ಲಿ ಜಾರಿಗೆ ಬರಲಿದೆ ತಿರುಪತಿ ಮಾದರಿ ವ್ಯವಸ್ಥೆ!

ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಗಂಟೆಗಟ್ಟಲೇ ಕಾಯುವ ಕುರಿತು ಹಲವು ದೂರುಗಳನ್ನು ನೀಡಿದ್ದರು. ಈಗ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ಬನ್ನೇರುಘಟ್ಟದಲ್ಲಿ ಟಿಕೆಟ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಬನ್ನೇರುಘಟ್ಟ ಉದ್ಯಾನಕ್ಕೆ ಪ್ರತಿದಿನ ಸುಮಾರು 1,500 ಪ್ರವಾಸಿಗರು ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ ಸುಮಾರು 4000 ಜನರು ಭೇಟಿ ನೀಡುತ್ತಾರೆ. ಆದರೆ, ಟಿಕೆಟ್ ಪಡೆಯಲು, ಸಫಾರಿ ಬಸ್ ಏರಲು ಅವರು ಕಾಯುವುದು ಅನಿವಾರ್ಯವಾಗಿತ್ತು. ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಕುರಿತು ಹಲವು ಬಾರಿ ದೂರು ನೀಡಿದ್ದರು. ಆದ್ದರಿಂದ, ಆಡಳಿತ ಮಂಡಳಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಮುಂದಾಗಿದೆ.
ಬಿಎಸ್ಎನ್ಎಲ್  ಆಫರ್! ತಿಂಗಳಿಗೆ 1500 ಜಿಬಿ ಡೇಟಾ ಸೌಲಭ್ಯ

ಬಿಎಸ್ಎನ್ಎಲ್ ಆಫರ್! ತಿಂಗಳಿಗೆ 1500 ಜಿಬಿ ಡೇಟಾ ಸೌಲಭ್ಯ

  • ಜಿಯೋ ಘೋಷಿಸುವ ಪ್ಲಾನ್ ಗಳಿಗೆ ಟಕ್ಕರ್ ನೀಡಲು ಇತರೆ ಟೆಲಿಕಾಂ ಕಂಪನಿಗಳು ಕೂಡ ಹಿಂದೆ ಬಿದ್ದಿಲ್ಲ. ಜಿಯೋ ಗಿಗಾ ಫೈಬರ್ ಬ್ರಾಡ್ಬ್ಯಾಂಡ್ ಪ್ಲಾನ್ ಘೋಷಣೆ ಮಾಡಿದ ನಂತರ ಇದಕ್ಕೆ ವಿರುದ್ದವಾಗಿ ಬಿಎಸ್ಎನ್ಎಲ್ ತನ್ನ ಯೋಜನೆಯಲ್ಲಿ ಬದಲಾವಣೆ ತಂದಿದೆ. ಬಿಎಸ್ಎನ್ಎಲ್ ರೂ. 5000ಗೆ 1500 ಜಿಬಿ ಡೇಟಾ ನೀಡಲಿದ್ದು, ಇದಕ್ಕೂ ಮೊದಲು 1000 ಜಿಬಿ ಡೇಟಾ ನೀಡುತ್ತಿತ್ತು. ತನ್ನ FTTH ಪ್ಲಾನ್ ನ FUP ಮಿತಿಯನ್ನು ಹೆಚ್ಚಿಸಿದೆ.
  • FTTH ULD ರೂ.4999 ಯೋಜನೆಯಡಿ ಗ್ರಾಹಕರಿಗೆ 100 ಎಂಬಿಪಿಎಸ್ ವೇಗದಲ್ಲಿ 1500 ಜಿಬಿ ಡೇಟಾ ಸಿಗಲಿದೆ.

ಒಂದು ಮಿಲಿಯನ್ ಜನರ ಪ್ರೀತಿ ಪಡೆದ 'ಅಯೋಗ್ಯ'

ಒಂದು ಮಿಲಿಯನ್ ಜನರ ಪ್ರೀತಿ ಪಡೆದ 'ಅಯೋಗ್ಯ'

ಮಂಡ್ಯ ಮಾತ್ರವಲ್ಲ ಎಲ್ಲ ಕಡೆ ಈಗ 'ಏನಮ್ಮಿ ಏನಮ್ಮಿ..' ಎಂದು ಎಲ್ಲರೂ ಹಾಡುವ ಹಾಗೆ ಆಗಿದೆ. 'ಅಯೋಗ್ಯ' ಸಿನಿಮಾದ ಮೊದಲ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಆ ಹಾಡು ಈಗ ಸೂಪರ್ ಹಿಟ್ ಆಗಿದೆ. ಸತೀಶ್ ನೀನಾಸಂ ನಟನೆಯ 'ಅಯೋಗ್ಯ' ಸಿನಿಮಾದ 'ಏನಮ್ಮಿ ಏನಮ್ಮಿ..' ಹಾಡು ಈಗ ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಹಿಟ್ಸ್ ಪಡೆದಿದೆ. ಒಂದು ವಾರದ ಹಿಂದೆ ಬಿಡುಗಡೆಯಾಗಿದ್ದ ಈ ಹಾಡನ್ನು ಎಲ್ಲರು ಕೇಳಿ ಇಷ್ಟ ಪಟ್ಟಿದ್ದಾರೆ. ಹಾಡಿನ ಅನೇಕ ಡಬ್ ಸ್ಮಾಶ್ ಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. 'ಏನಮ್ಮಿ ಏನಮ್ಮಿ..' ಹಾಡನ್ನು ನಟ ಧ್ರುವ ಸರ್ಜಾ ರಿಲೀಸ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more