Short News

ಅಭಿಮಾನಿಗಳಿಗೆ ಶಿವನ ಅವತಾರದಲ್ಲಿ ನಟಿ ಹರಿಪ್ರಿಯಾ ವಿಶ್

ಅಭಿಮಾನಿಗಳಿಗೆ ಶಿವನ ಅವತಾರದಲ್ಲಿ ನಟಿ ಹರಿಪ್ರಿಯಾ ವಿಶ್

ಚಂದನವನದ ಮುದ್ದು ನಟಿ ಹರಿಪ್ರಿಯಾ ಸದ್ಯ ಕನ್ನಡದ ಬಹುಬೇಡಿಕೆಯ ನಟಿ. ಹರಿಪ್ರಿಯಾ, ಯಾವುದೇ ಪಾತ್ರವಿರಲಿ ಅದಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿ, ಆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಸಂಹಾರ ಚಿತ್ರದಲ್ಲಿಯೂ ಕೂಡ ಇದು ಸಾಬೀತಾಗಿದೆ. ಸಂಹಾರ ಚಿತ್ರದ ಸಕ್ಸಸ್‌ನ ಖುಷಿಯಲ್ಲಿಯರುವ ನಟಿ ಹರಿಪ್ರಿಯಾ ಇಂದು ತಮ್ಮ ಅಭಿಮಾನಿಗಳಿಗೆ ಶಿವರಾತ್ರಿಯ ಶುಭಾಷಯ ಕೋರಿದ್ದಾರೆ. ತಾವು ರುದ್ರನ ಗೆಟಪ್‌ನಲ್ಲಿರುವ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಮೈಸೂರು-ಬೆಂಗಳೂರು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ  ಚಾಲನೆ

ಮೈಸೂರು-ಬೆಂಗಳೂರು ಹಮ್‌ಸಫರ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಪ್ರಧಾನಿ ಚಾಲನೆ

ಮೈಸೂರು-ಬೆಂಗಳೂರು ವಿದ್ಯುತ್ ರೈಲು ಮಾರ್ಗ ಹಾಗೂ ಮೈಸೂರು-ರಾಜಸ್ತಾನದ ಉದಯಪುರ ನಡುವಣೆ ಪ್ಯಾಲೆಸ್ ಕ್ವೀನ್ ಹಮ್ ಸಫರ್ ನೂತನ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು. ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಮುಗಿಸಿ ಮೈಸೂರಿಗೆ ಆಗಮಿಸಿದ ಮೋದಿ ಮೈಸೂರಿನ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಈ ವೇಳೆ ಉಪಸ್ಥಿತರಿದ್ದರು.
ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ  ಕಿತ್ತಾಟ !

ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಕಿತ್ತಾಟ !

ಬಹುಕೋಟಿ ಛಾಪಾ ಕಾಗದ ಹಗರಣದ ರೂವಾರಿ ಅಬ್ದುಲ್ ಕರಿಂ ಲಾಲ್ ತೆಲಗಿ ಆಸ್ತಿಗಾಗಿ ಕುಟುಂಬಸ್ಥರ ಮಧ್ಯೆ ಗಲಾಟೆ ಆರಂಭವಾಗಿದೆ. ಬೆಳಗಾವಿಯಲ್ಲಿ  ತೆಲಗಿ ಪತ್ನಿ ಶಹೀದಾ, ಮಗಳು ಸನಾ ಮೇಲೆ ತೆಲಗಿ ಸಹೋದರ ಅಜೀಂ ತೆಲಗಿ ಹಲ್ಲೆ‌ ನಡೆಸಿದ್ದಾನೆ. ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ತೆಲಗಿ ಶಿಕ್ಷೆ ಪೂರ್ಣಗೊಳ್ಳುವ ಮುನ್ನವೇ ಸಾವನ್ನಪ್ಪಿದ್ದ. ಈತನ ಸಾವಿನ ಬಳಿಕ ಹಗರಣದಲ್ಲಿಗಳಿಸಿದ ಆಸ್ತಿಯನ್ನು ಸರ್ಕಾರಕ್ಕೆ ನೀಡಲು ಶಹೀದಾ ನಿರ್ಧರಿಸಿದ್ದರು. ಈ ಬಗ್ಗೆ ಪುಣೆ ನ್ಯಾಯಾಲಯಕ್ಕೆ ಅರ್ಜಿಯನ್ನೂ ಸಲ್ಲಿಸಿದ್ದರು. ಆದರೆ ಇದಕ್ಕೆ ಸಹೋದರನ ವಿರೋಧ ವ್ಯಕ್ತವಾಗಿದ್ದು ಶಹೀದಾ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.
ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅತ್ಯುತ್ತಮ ಸಂವಹನಾಕಾರ, ಅವರ ಭಾಷಣ ಕಲೆಗೆ ಹೋಲಿಸಬಹುದಾದ ಇನ್ನೊಬ್ಬ ರಾಜಕಾರಣಿ ಸದ್ಯಕ್ಕಂತೂ ರಾಷ್ಟ್ರ ರಾಜಕಾರಣದಲ್ಲಿ ದೂರಕ್ಕೂ ಕಾಣ ಸಿಗುತ್ತಿಲ್ಲ. ಇದ್ದರೂ ಮೋದಿ ಅವರ ಶೈಲಿಯನ್ನೇ ಅನುಕರಿಸುವವರು ಇದ್ದಾರೆ ಅಷ್ಟೆ.

ಅವರ ಭಾಷಣ ಶೈಲಿ, ಧ್ವನಿ ಏರಿಳಿತ, ಹಾವ ಭಾವ, ಪದಗಳ ಆಯ್ಕೆ, ಎಲ್ಲವೂ ಗಮನಿಸಲರ್ಹ. ಅವರ ಭಾಷಣವನ್ನು ಸಂಶೋಧಿಸಿ ಪುಟಗಟ್ಟಲೆ ಪ್ರಬಂಧ ಬರೆದ ಪತ್ರಕರ್ತರೂ ಇದ್ದಾರೆ. ಈ ಲೇಖನದಲ್ಲೂ ಇದೇ ಪ್ರಯತ್ನವನ್ನು ಮಾಡ ಹೊರಟಿದ್ದೇವೆ.