Short News

ಈ ವಾರ ತೆರೆಕಂಡ ಎಲ್ಲಾ 6 ಚಿತ್ರಗಳ ವಿಮರ್ಶೆ ಇಲ್ಲಿದೆ

ಈ ವಾರ ತೆರೆಕಂಡ ಎಲ್ಲಾ 6 ಚಿತ್ರಗಳ ವಿಮರ್ಶೆ ಇಲ್ಲಿದೆ

ಈ ವಾರ ಒಟ್ಟು ಏಳು ಚಿತ್ರಗಳು ಬಿಡುಗಡೆಯಾಗಿವೆ. ಯಾವ ಚಿತ್ರವನ್ನ ನೋಡ್ಬೇಕೋ ಯಾವ ಚಿತ್ರವನ್ನ ಬಿಡ್ಬೇಕೋ ಎನ್ನೋದು ಚಿತ್ರಪ್ರೇಮಿಗಳಿಗೆ ಗೊಂದಲವಾಗಿದೆ. ಇನ್ನು ರಿವ್ಯೂ ಬಂದ್ಮೇಲೆ ನೋಡ್ಕೊಂಡು ಯಾವ ಚಿತ್ರ ಚೆನ್ನಾಗಿದೆಯೋ ಆ ಸಿನಿಮಾ ನೋಡೋಣ ಅಂತಿದ್ದವರು ಈ ಸ್ಟೋರಿ ಓದಿ. ಯಾಕಂದ್ರೆ, ಈ ವಾರ ರಿಲೀಸ್ ಆದ ಆರು ಚಿತ್ರಗಳ ವಿಮರ್ಶೆ ಒಂದೇ ಕಡೆ ಸಿಗಲಿದೆ. ಹಾರರ್, ಸಸ್ಪೆನ್ಸ್, ಮಾಸ್, ಫುಲ್ ಕಾಮಿಡಿ, ಸೇರಿದಂತೆ ಎಲ್ಲ ಬಗೆಯ ಚಿತ್ರಗಳು ಚಿತ್ರಮಂದಿರಕ್ಕೆ ಬಂದಿದೆ. ಕರಾಳ ರಾತ್ರಿ, ಹಸಿರು ರಿಬ್ಬನ್, ಟ್ರಂಕ್, ಅಥರ್ವ, ಎಂಎಂಸಿಎಚ್ ಹಾಗೂ ಡಬ್ಬಲ್ ಇಂಜಿನ್ ಚಿತ್ರಗಳ ವಿಮರ್ಶೆ ಇಲ್ಲಿದೆ.

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಇಂಟರ್‌ನೆಟ್‌ ಇಲ್ಲದೆಯೂ ಗೂಗಲ್ ಮ್ಯಾಪ್ ಬಳಸಿ..! ಹೇಗೆ ಗೊತ್ತಾ..?

ಈಗಿನ ಜಮಾನದಲ್ಲಿ ಯಾವುದೋ ವಿಳಾಸ ಹುಡುಕಿಕೊಂಡು ಹೋಗಬೇಕು ಅಂದ್ರೆ ಗೂಗಲ್ ಮ್ಯಾಪ್ ನಷ್ಟು ಸಹಾಯವನ್ನು ಮನುಷ್ಯರೂ ಮಾಡುವುದಿಲ್ಲ. ಭಾಷೆ ಬರದ ಊರಲ್ಲಂತೂ ಗೂಗಲ್ ಮ್ಯಾಪ್ ನಿಜಕ್ಕೂ ಅತ್ಯುತ್ತಮ ದಾರಿತೋರುಗ. ಹಾಗಾಗಿ ದಾರಿ ತಪ್ಪಿ ಎಲ್ಲಿಗೋ ಹೋಗಿ ಊರೆಲ್ಲ ಸುತ್ತಾಡಿ ತಲುಪಬೇಕಾದ ವಿಳಾಸವನ್ನು ತಲುಪದೇ ಇರುವಂತಹ ಪ್ರಮೇಯ ಈಗ ಉಧ್ಭವವಾಗೋದು ಬಹಳ ಕಡಿಮೆ. ಬಲಕ್ಕೆ ತಿರುಗಿ, ಎಡಕ್ಕೆ ತಿರುಗಿ, ಇಂತಿಷ್ಟು ದೂರದಲ್ಲಿ ಬಲ ತಿರುವು ಇದೆ, ಎಡ ತಿರುವು ಇದೆ, ನಿಮ್ಮ ವಿಳಾಸಕ್ಕೆ ಹೋಗಲು ನೀವು ಬಲಕ್ಕೆ ಹೋಗಬೇಕು ಅಥವಾ ಎಡಕ್ಕೆ ಹೋಗಬೇಕು ಹೀಗೆ ಪ್ರತಿ ಕ್ಷಣವೂ ದಾರಿಯ ಮಾರ್ಗದರ್ಶನವನ್ನು ನೀಡುತ್ತಾ ಸಾಗುತ್ತದೆ ಗೂಗಲ್ ಮ್ಯಾಪ್.

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್‌ಐಆರ್

ಬಿಜೆಪಿ ಶಾಸಕ ಗೋವಿಂದ ಕಾರಜೋಳ ಪುತ್ರನ ವಿರುದ್ಧ ಎಫ್‌ಐಆರ್

ಶಾಸಕ ಹ್ಯಾರಿಸ್ ಮಗನ ಪ್ರಕರಣದ ನಂತರ ಈಗ ಬಿಜೆಪಿ ಶಾಸಕ ಗೋವಿಂದ ಕಾರಜೋಳಮಗ ತನ್ನ ಗೂಂಡಾಗಿರಿಯಿಂದ ಸುದ್ದಿಯಲ್ಲಿದ್ದಾನೆ. ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪುತ್ರ ಅರುಣ್ ಕಾರಜೋಳ ಪೊಲೀಸ್ ಪೇದೆಯೊಬ್ಬನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದುಆತನ ವಿರುದ್ಧ ಬಾಗಲಕೋಟೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅರುಣ್ ಕಾರಜೋಳ ಅವರು ನಿನ್ನೆ ರಾತ್ರಿ ನೋಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದ್ದರು. ಅದನ್ನು ತೆಗೆಯುವಂತೆ ಸಂಚಾರಿ ಪೊಲೀಸ್ ಕಾನ್ಸ್ಟೇಬಲ್ ಮಲ್ಲೇಶ್ ಲಮಾಣಿ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಅರುಣ್ ಮಲ್ಲೇಶ್‌ ಅನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಕೆಆರ್‌ಎಸ್, ಬೃಂದಾನವನಕ್ಕೆ ಪ್ರವಾಸಿಗರ ಭೇಟಿ ನಿಷೇಧ

ಕೆಆರ್‌ಎಸ್, ಬೃಂದಾನವನಕ್ಕೆ ಪ್ರವಾಸಿಗರ ಭೇಟಿ ನಿಷೇಧ

ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಕೆಆರ್‌ಎಸ್ ಮತ್ತು ವೃಂದಾವನಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೆಆರ್‌ಎಸ್ ಜಲಾಶಯವಿದೆ. ಗರಿಷ್ಠ 124 ಅಡಿ ಎತ್ತರದ ಜಲಾಶಯದಲ್ಲಿ ಸದ್ಯ, 123 ಅಡಿ ನೀರಿನ ಸಂಗ್ರಹವಿದೆ. 65,777 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. ಕೆಆರ್‌ಎಸ್‌ನಿಂದ 30 ಗೇಟ್‌ಗಳ ಮೂಲಕ 71,583 ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more