Short News

ಶಂಕರ್ ನಾಗ್ ಫ್ಯಾನ್ ಆದ್ರಾ ಸುದೀಪ್ ?

ಶಂಕರ್ ನಾಗ್ ಫ್ಯಾನ್ ಆದ್ರಾ ಸುದೀಪ್ ?

ಕಿಚ್ಚ ಸುದೀಪ್ ಶಂಕರ್ ನಾಗ್ ಫ್ಯಾನ್ ಆದ್ರಾ? ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಈ ಸುದ್ದಿ ಕೇಳಿ ಬರಲು ಕಾರಣವೂ ಇದೆ. ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಇಂದಿನಿಂದ ಶುರುವಾಗಿದೆ .ಚಿತ್ರದ ವರ್ಕಿಂಗ್ ಸ್ಟೈಲ್ ಅನ್ನು ಸುದೀಪ್ ತಮ್ಮ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ .ಕಿಚ್ಚ ಐದು ಪೋಟೋಗಳನ್ನ ಕೊಲಾಜ್ ಮಾಡಿ ಅಪ್ಲೋಡ್ ಮಾಡಿರುವ ಫೋಟೋದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಬಳಗ ಎಂಬ ಬೋರ್ಡ್ ಇರುವ ಕಾಲೋನಿಯ ಫೋಟೋ ಕೂಡ ಇದೆ .ಈ ಫೋಟೋವನ್ನು ನೋಡಿರುವ ಅಭಿಮಾನಿಗಳು ಮತ್ತು ಗಾಂಧಿನಗರದ ಮಂದಿಗೆ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ.
ದ್ವಾದಶ ರಾಶಿಗಳ ಇಂದಿನ (ಮೇ 22) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಮೇ 22) ದಿನ ಭವಿಷ್ಯ

ಮೇಷ:ರಹಸ್ಯ ಕಾರ್ಯಾಚರಣೆ ಬಹಿರಂಗ ವಾಗುವುದು, ಸಣ್ಣ ಅಡೆತಡೆಗಳು ಬರಬಹುದು. ವೃಷಭ:ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ಮಿಥುನ:ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ. ಕಟಕ:ತಂದೆ-ತಾಯಿಯರ ವಿರೋಧ ಎದುರಿಸಬೇಕಾಗುತ್ತದೆ. ಸಿಂಹ:ಕೋಪ ಕಡಿಮೆ ಮಾಡಿ ಕೊಂಡರೆ ಬಹಳ ಉತ್ತಮ. ಕನ್ಯಾ:ರಾಜಕೀಯ ಪ್ರವೇಶ ಅನಿವಾರ್ಯವಾಗಬಹುದು. ತುಲಾ:ಕುಟುಂಬದಲ್ಲಿ ಆಸ್ತಿ ಕಲಹ ಕಂಡುಬರುವುದು. ವೃಶ್ಚಿಕ:ಆರೋಗ್ಯ ಸಮಸ್ಯೆ ಮಾನಸಿಕ ಚಿಂತೆಗೆ ಕಾರಣವಾಗಬಹುದು. ಧನುಸ್ಸು:ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸಿ. ಮಕರ: ಮನೆ ದೇವರ ಪೂಜೆ ಮಾಡಿ. ಕುಂಭ:ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ. ಮೀನ:ಮಕ್ಕಳ ವಿಚಾರದಲ್ಲಿ ಅಸಮಾಧಾನ.
ಓ ಮೈ ಗಾಡ್ ಪೆಟ್ರೋಲ್ ಬೆಲೆ ಇಷ್ಟೊಂದಾ...!?

ಓ ಮೈ ಗಾಡ್ ಪೆಟ್ರೋಲ್ ಬೆಲೆ ಇಷ್ಟೊಂದಾ...!?

ಜೂನ್ 15, 2017 ರಿಂದ ಪ್ರತಿದಿನವೂ ಇಂಧನ ದರ ಪರಿಷ್ಕರಿಸಲಾಗುತ್ತಿರುವುದರಿಂದ ಗಣನೀಯ ಬದಲಾವಣೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಮೇ 22 ರಂದು ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 78.12ರೂ! ಡಿಸೆಲ್ ದರ ಪ್ರತಿ ಲೀ.ಗೆ 69.25! ಇದು ಸಿಲಿಕಾನ್ ಸಿಟಿ ಬೆಂಗಳೂರಿಗರ ತಾಪತ್ರಯವಾದರೆ, ವಾಣಿಜ್ಯನಗರಿ ಮುಂಬೈಯ ಕತೆ ಮತ್ತಷ್ಟು ಕಷ್ಟದ್ದು. ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 83.16 ರೂ.! ಗಗನಕ್ಕೇರಿದ ಇಂಧನ ದರ ಶ್ರೀಸಾಮಾನ್ಯನಲ್ಲಿ ಆತಂಕ ಹುಟ್ಟಿಸಿದೆ. ಕಳೆದ 16 ವರ್ಷಗಳಲ್ಲಿ ನಂತರ ಇಂಧನ ದರ 2013 ರ ಸೆಪ್ಟೆಂಬರ್ ನಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಅದಾದ ನಂತರ 2018 ರ ಮೇ ತಿಂಗಳಿನಲ್ಲಿ ದಾಖಲೆಯ ಏರಿಕೆ ಕಂಡಿದೆ.
ಕ್ರೊಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಕ್ರೊಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಆಸಕ್ತ ಖರೀದಿದಾರರು ಮೊದಲು ಇದರ ಅನುಭವ ಪಡೆದು ನಂತರ ಖರೀದಿಸಲು ಅವಕಾಶವಿದ್ದು, 112 ಕ್ರೋಮಾ ಸ್ಟೋರ್ ಗಳಲ್ಲಿ ಮೇ 22ರಿಂದ ಮಾರಾಟ ನಡೆಯಲಿದೆ. ಈ ಕಂಪೆನಿಗಳು ಪ್ರತಿದಿನವೂ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡಲಿದ್ದು, ಈ ನಿಟ್ಟಿನಲ್ಲಿ HDFC ಬ್ಯಾಂಕ್, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟೆಡ್, ಮತ್ತು ಪೆಟಿಎಂ ಗಳ ಜೊತೆ ಪಾರ್ಟನರ್ಶಿಪ್ ಹೊಂದಿದೆ. ಎಸ್ ಬಿಐ ಕಾರ್ಡ್ ಬಳಸುವವರಿಗೂ ಕೂಡ 2000 ರುಪಾಯಿಯ ಕ್ಯಾಷ್ ಬ್ಯಾಕ್ ಸಿಗಲಿದೆ. ಆದರೆ ಈ ಎಲ್ಲಾ ಆಫರ್ ಗಳು ಮಾರಾಟ ಆರಂಭವಾದ ಕೇವಲ ಒಂದು ವಾರ ಮಾತ್ರ ಇರಲಿವೆಯಂತೆ.