Short News

ವಿದೇಶಕ್ಕೆ ಹಾರಲು ಸಜ್ಜಾದ ಸುದೀಪ್ ಅಂಡ್ ಟೀಂ

ವಿದೇಶಕ್ಕೆ ಹಾರಲು ಸಜ್ಜಾದ ಸುದೀಪ್ ಅಂಡ್ ಟೀಂ

ಸುದೀಪ್ ಸತ್ಯ ಹಾಗೂ ಶಿವ ನಾಗಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹೌದು ಈಗ ಸುದೀಪ್ ಅವರ 'ಕೋಟಿಗೊಬ್ಬ3' ಸಿನಿಮಾದ ಚಿತ್ರೀಕರಣಕ್ಕೆ ಸಿದ್ದತೆಗಳು ನಡೆದಿವೆ. ಇದೇ ತಿಂಗಳು ಅಂದರೆ ಜೂನ್ 17ರಿಂದ 'ಕೋಟಿಗೊಬ್ಬ 3' ಶೂಟಿಂಗ್ ಆರಂಭವಾಗುತ್ತಿದೆ ಎಂದು ಸುದೀಪ್ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸರ್ಬಿಯಾದ ಬೆಲ್ಗ್ರೇಡ್ ನಲ್ಲಿ ಸುಮಾರು 40 ದಿನಗಳ ಕಾಲ 'ಕೋಟಿಗೊಬ್ಬ 3' ಚಿತ್ರದ ಶೂಟಿಂಗ್ ನಡೆಯಲಿದೆ. ಕಿಚ್ಚನ ಜೋಡಿಯಾಗಿ ಮಾಲಿವುಡ್ ಮತ್ತು ಕಾಲಿವುಡ್ ಚಿತ್ರದಲ್ಲಿ ನಟಿಸಿರುವ ಮಡೋನ ಸೆಬಾಸ್ಟಿಯನ್ ಕಾಣಿಸಿಕೊಳ್ಳಲಿದ್ದಾರೆ. ಇದು ಮಡೋನ ಅವರ ಮೊದಲ ಕನ್ನಡ ಸಿನಿಮಾ ಆಗಿದೆ.
ಅಮೆಜಾನ್ ಪ್ರೈಂ ಬಳಕೆದಾರರಿಗೆ ಭರ್ಜರಿ ಆಫರ್

ಅಮೆಜಾನ್ ಪ್ರೈಂ ಬಳಕೆದಾರರಿಗೆ ಭರ್ಜರಿ ಆಫರ್

ಅಮೆಜಾನ್ ಇಂಡಿಯಾ ಬಳಕೆದಾರರಿಗಾಗಿ ಭರ್ಜರಿ ಆಫರ್ ನೀಡುತ್ತಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರತಿ ತಿಂಗಳ ಚಂದಾದಾರಿಕೆ ನೀಡುತ್ತಿದೆ. ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯದ ಗ್ರಾಹಕರು ಇನ್ಮುಂದೆ ಪ್ರತಿ ತಿಂಗಳಿಗೆ 129 ರೂಪಾಯಿ ನೀಡಿ, ತಿಂಗಳ ಚಂದಾದಾರರಾಗಬಹುದು. ಒಂದು ವರ್ಷಕ್ಕೆ 999 ರೂಪಾಯ ನೀಡಿ ಚಂದದಾರರಾಗಬಹುದು. ಈ ಹಿಂದೆ ಅಮೆಜಾನ್ ಕೇವಲ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ತಿಂಗಳ ಚಂದದಾರರಾಗುವ ಗ್ರಾಹಕರಿಗೆ ದಿನಾಂಕ ಮುಗಿಯಲು ಮೂರು ದಿನವಿರುವ ಮೊದಲು ಕಂಪನಿ ಮಾಹಿತಿ ನೀಡಲಿದೆ.
ಸ್ಮಾರ್ಟ್‌ಫೋನ್‌ ಸ್ಪೇಸ್ ಹೆಚ್ಚಿಸಿಕೊಳ್ಳುವುದು ಹೇಗೆ!? ಇಲ್ಲಿದೇ ಸಿಂಪಲ್ ಟಿಪ್ಸ್‌

ಸ್ಮಾರ್ಟ್‌ಫೋನ್‌ ಸ್ಪೇಸ್ ಹೆಚ್ಚಿಸಿಕೊಳ್ಳುವುದು ಹೇಗೆ!? ಇಲ್ಲಿದೇ ಸಿಂಪಲ್ ಟಿಪ್ಸ್‌

ಇಂದು ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಅಬ್ಬರವೂ ಜೋರಾಗಿದೆ. ಆದರೆ ಎಷ್ಟೆ ದೊಡ್ಡ ಸಾಮಾರ್ಥ್ಯದ ಸ್ಮಾರ್ಟ್ ಫೋನ್ ಗಳನ್ನು ಕೊಂಡರೂ ಸಹ ಅದರಲ್ಲಿ ಇರುವ ಮೆಮೊರಿಯೂ ಸಾಲುವುದಿಲ್ಲ ಎನ್ನುವ ಮಾತುಗಳನ್ನು ನಾವು ಕೇಳಬಹುದಾಗಿದೆ.ಈ ಹಿನ್ನಲೆಯಲ್ಲಿ ಇಂದಿನ ಲೇಖನದಲ್ಲಿ ನೀವು ಆಂಡ್ರಾಯ್ಡ್ ಫೋನ್ ಮತ್ತು ಐಫೋನ್ ಗಳನ್ನು ಇಂಟರ್ನಲ್ ಮೆಮೊರಿಯನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಸ್ಮಾರ್ಟ್ ಫೋನ್ ಇಂಟರ್ನಲ್ ಮೆಮೊರಿಯನ್ನು ಅಧಿಕ ಮಾಡಿಕೊಳ್ಳಬಹುದಾಗಿದೆ.

ನೇವ್ಯೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ... ಅಪ್ರೇಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ನೇವ್ಯೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ... ಅಪ್ರೇಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ

ನೇವ್ಯೆಲಿ ಲಿಗ್ನೈಟ್ ಕಾರ್ಪೋರೇಶನ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಪ್ರೇಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಜುಲೈ 4 ಕೊನೆಯ ದಿನಾಂಕ. ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜೂನ್ 25, 2018. 10 ನೇ ತರಗತಿ ಅಥವಾ 12ನೇ ತರಗತಿ ಅಥವಾ ಡಿಪ್ಲೋಮಾ ವಿದ್ಯಾಭ್ಯಾಸವಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ 3542 ರಿಂದ 8530 ರೂ. ವೇತನ ನಿಗದಿ ಪಡಿಸಲಾಗಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more