'ಸರಿಗಮಪ' ಖ್ಯಾತಿಯ ಸುಹಾನ ಸೈಯದ್ ಸಿನಿಮಾ ಪ್ರಯಾಣ ಶುರು
ಚಲನಚಿತ್ರ
- 10 days ago
ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ಕಳೆದ ಸಂಚಿಕೆಯಲ್ಲಿ ಹಾಡಿದ್ದ ಬಹುತೇಕ ಗಾಯಕರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗ ಗಾಯಕಿ ಸುಹಾನ ಸೈಯದ್ ಅವರಿಗೆ ಸಹ ಸಿನಿಮಾದಲ್ಲಿ ಹಾಡುವ ಚಾನ್ಸ್ ಸಿಕ್ಕಿದೆ. 'ಸ್ಟೇಟ್ ಮೆಂಟ್ 8/11' ಎನ್ನುವ ಹೊಸ ಸಿನಿಮಾದಲ್ಲಿ ಹಾಡುವ ಮೂಲಕ ಸುಹಾನ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ.
'ನರನಾಡಿ ನುಡಿಯುತ್ತೆ ಹಿಂದುಸ್ತಾನ್..' ಎಂಬ ಹಾಡಿಗೆ ಸುಹಾನ ಧ್ವನಿ ನೀಡಿದ್ದಾರೆ. 'ಸ್ಟೇಟ್ ಮೆಂಟ್ 8/11' ಚಿತ್ರದ ದೇಶಭಕ್ತಿ ಗೀತೆ ಇದಾಗಿದೆ. ಇದೊಂದು ಹೊಸಬರ ಸಿನಿಮಾವಾಗಿದ್ದು, ಹೇಮಂತ್ ಸಂಗೀತ ಹಾಡಿನಲ್ಲಿದೆ.