Short News

ಮತ್ತೆ ಬರಲಿದೆ ಸೂಪರ್ ಹಿಟ್ ಚಿತ್ರ ಅಮೃತವರ್ಷಿಣಿ  ಭಾಗ -2

ಮತ್ತೆ ಬರಲಿದೆ ಸೂಪರ್ ಹಿಟ್ ಚಿತ್ರ ಅಮೃತವರ್ಷಿಣಿ ಭಾಗ -2

1997 ರಲ್ಲಿ ತೆರೆಕಂಡ ರಮೇಶ್ ಅರವಿಂದ್ ವಿಲನ್ ಆಗಿ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ ಅಮೃತವರ್ಷಿಣಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದೀಗ ಈ ಅಮೃತವರ್ಷಿಣಿ ಸಿನಿಮಾದ ಮುಂದುವರೆದ ಭಾಗ ಮತ್ತೆ ತೆರೆ ಮೇಲೆ ಬರಲಿದೆ.ಮೊದಲ ಅಮೃತವರ್ಷಿಣಿ ಸಿನಿಮಾವನ್ನು ದಿನೇಶ್ ಬಾಬು ನಿರ್ದೇಶಿಸಿದ್ದರು. ಭಾಗ 2 ಅನ್ನು ಕೂಡ ಅವರೆ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆ ಜಯಶ್ರೀ ದೇವಿ ಬಂಡವಾಳ ಹೂಡುತ್ತಿದ್ದಾರೆ. ಭಾಗ 2ರಲ್ಲಿ ರಮೇಶ್ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ.ಅಮೃತವರ್ಷಿಣಿ ಸಿನಿಮಾದಲಿ ರಮೇಶ್ ಅರವಿಂದ್, ಸುಹಾಸಿನಿ , ಶರತ್ ಬಾಬು, ಮತ್ತು ದಿವಂಗತ ನಟಿ ನಿವೇದಿತಾ ಜೈನ್ ನಟಿಸಿದ್ದರು.
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಸುಧಾರಣೆ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಗಣನೀಯ ಸುಧಾರಣೆ

ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಮಠದ ವ್ಯಾಪ್ತಿಯಲ್ಲಿರುವ ಹಳೆ ಮಠದಿಂದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಿರುವ ಸ್ಥಳಕ್ಕೆ ಸಿದ್ದಗಂಗಾ ಶ್ರೀಗಳು ಕಾಲ್ನಡಿಗೆಯಲ್ಲೇ ಬಂದಿದ್ದಾರೆ. ಈ ಹಿಂದೆ ಮೂಲ ಮಠದಿಂದ ಸಾರ್ವಜನಿಕ ದರ್ಶನ ಸ್ಥಳಕ್ಕೆ ಶ್ರೀಗಳು ಕಾರಿನಲ್ಲಿಯೇ ಹೋಗುತ್ತಿದ್ದರು. ಇದೀಗ ಯಾರ ನೆರವಿಲ್ಲದೇ ಶ್ರೀಗಳು ನಡೆದುಕೊಂಡು ಬಂದಿದ್ದಾರೆ. 111 ವರ್ಷದ ಶ್ರೀಗಳಿಗೆ ಮಠದಲ್ಲೇ ವಿಶೇಷ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ .
ಕರ್ನಾಟಕದಲ್ಲಿ ಅತ್ಯಂತ ವಾಸಯೋಗ್ಯ  ನಗರ ಮಂಗಳೂರು

ಕರ್ನಾಟಕದಲ್ಲಿ ಅತ್ಯಂತ ವಾಸಯೋಗ್ಯ ನಗರ ಮಂಗಳೂರು

ದೇಶದ ವಾಸಯೋಗ್ಯ 111 ನಗರಗಳ ಪಟ್ಟಿಯನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಬಿಡುಗಡೆಗೊಳಿಸಿದ್ದು, ಕರ್ನಾಟಕದಲ್ಲಿ ಮಂಗಳೂರು ಅತ್ಯಂತ ವಾಸಯೋಗ್ಯ ನಗರ ಎಂದು ಸಮೀಕ್ಷೆಯೊಂದು ವರದಿ ನೀಡಿದೆ. ಪ್ರಕಟಗೊಂಡಿರುವ ಪಟ್ಟಿಯಲ್ಲಿ ಮಂಗಳೂರು 41ನೇ ಸ್ಥಾನವನ್ನು ಪಡೆದುಕೊಂಡಿದೆ. ಸಚಿವಾಲಯ ಇದೇ ಮೊದಲ ಬಾರಿಗೆ ಈ ರೀತಿಯ ಶ್ರೇಯಾಂಕ ಪಟ್ಟಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳು ಒಳಗೊಂಡಿದೆ. ಮಿಕ್ಕಂತೆ ಕರ್ನಾಟಕದ ಬೆಳಗಾವಿ (52), ಹುಬ್ಬಳ್ಳಿ- ಧಾರವಾಡ(57), ಬೆಂಗಳೂರು(58) ಶಿವಮೊಗ್ಗ(67), ತುಮಕೂರು(70) ದಾವಣಗೆರೆ(83)ನೇ ಸ್ಥಾನ ಪಡೆದುಕೊಂಡಿದೆ.
ರಾಶಿಚಕ್ರದ ಪ್ರಕಾರ:  ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೆಂಬುದನ್ನು ನೋಡಿ...

ರಾಶಿಚಕ್ರದ ಪ್ರಕಾರ: ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯ ಏನೆಂಬುದನ್ನು ನೋಡಿ...

ವ್ಯಕ್ತಿಯ ಸಾಮರ್ಥ್ಯ ಎನ್ನುವುದು ಅವನ ಸ್ಥಾನವನ್ನು ಎತ್ತರದಲ್ಲಿ ಇರಿಸುತ್ತದೆ. ಆದರ ಗೌರವವನ್ನು ತಂದುಕೊಡುತ್ತದೆ. ನಾವು ಬೇರೆಯವರಲ್ಲಿರುವ ದೌರ್ಬಲ್ಯ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಮಾತನಾಡುತ್ತ ಸಮಯ ಕಳೆಯುವುದರಲ್ಲಿಯೇ ಇರುತ್ತೇವೆ. ಅದೇ ನಮ್ಮಲ್ಲಿರುವ ಸಾಮರ್ಥ್ಯ ಏನು? ದೌರ್ಬಲ್ಯ ಏನು ಎನ್ನುವುದನ್ನು ಗುರುತಿಸಿಕೊಂಡರೆ ಬಹುಬೇಗ ಸಾಧನೆಯನ್ನು ಮಾಡಬಹುದು. ಸಾಮರ್ಥ್ಯ ಹಾಗೂ ದೌರ್ಬಲ್ಯ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೆ ಇರುವ ಎರಡು ಮುಖಗಳು. ಇವು ಅವರ ರಾಶಿಚಕ್ರಕ್ಕೆ ಅನುಗುಣವಾಗಿ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more