Short News

ಶಿವಣ್ಣನ ಫೇವರೆಟ್ ಚಿತ್ರಮಂದಿರದಲ್ಲಿ 'ಟಗರು' ಆಗಮನ

ಶಿವಣ್ಣನ ಫೇವರೆಟ್ ಚಿತ್ರಮಂದಿರದಲ್ಲಿ 'ಟಗರು' ಆಗಮನ

'ಟಗರು' ಸಿನಿಮಾ ಇದೇ ತಿಂಗಳು 23ಕ್ಕೆ ರಿಲೀಸ್ ಆಗುತ್ತಿದೆ. ಇಷ್ಟು ದಿನ ಸಿನಿಮಾಗಾಗಿ ಕಾಯುತ್ತಿದ್ದ ಶಿವಣ್ಣನ ಅಭಿಮಾನಿಗಳು ಇನ್ನೂ ಕೆಲವೇ ದಿನದಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇನ್ನು 'ಟಗರು' ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಸಂತೋಷ್ ಶಿವಣ್ಣನ ಫೇವರೆಟ್ ಚಿತ್ರಮಂದಿರ. ಅವರ ಎಷ್ಟೊ ಸಿನಿಮಾಗಳು ಅಲ್ಲಿ ನೂರು ದಿನವನ್ನು ಪೂರೈಸಿದೆ. ಇನ್ನೂ 'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ.
ಗೂಂಡಾಗಿರಿ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಪೊಲೀಸರಿಗೆ ಶರಣು

ಗೂಂಡಾಗಿರಿ ಪ್ರಕರಣ: ಶಾಸಕ ಹ್ಯಾರಿಸ್ ಪುತ್ರ ಪೊಲೀಸರಿಗೆ ಶರಣು

ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದಾನೆ. ಸತತ 37ಗಂಟೆ ನಲಪಾಡ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಫೆ.17ರಂದು ವಿದ್ವತ್ ಎಂಬಾತನ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ನಲಪಾಡ್ ಸೋಮವಾರ ಖುದ್ದು ಪೊಲೀಸರಿಗೆ ಶರಣಾಗಿದ್ದಾನೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಈ ರೀತಿ ಮಾಡಲು ಅವನಿಗೆ ಅವಕಾಶ ನೀಡಿರಲಿಲ್ಲ. ನನ್ನ ಮಗನ ಕೃತ್ಯದಿಂದಾಗಿ ನನಗೂ ನೋವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ, ಎಂದು ಶಾಸಕ ಹ್ಯಾರಿಸ್ ಹೇಳಿದ್ದರು.
BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

BSNL ನಿಂದ ಗ್ರಾಹಕರಿಗೆ ಹೊಸ ರೂ.99 ಪ್ಲಾನ್

ಇಡೀ ದೇಶದಲ್ಲಿ ಇರುವ ಎಲ್ಲಾ BSNL ಬಳಕೆದಾರರಿಗೆ ಈ ಆಫರ್ ಅನ್ನು ಲಾಂಚ್ ಮಾಡಿರುವ ರೂ.99 ಆಫರ್ ನಲ್ಲಿ 26 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಲ್ಲದೇ BSNL ಬಳಕೆದಾರರಿಗೆ ಮತ್ತೊಂದು ಆಫರ್ ಅನ್ನು ನೀಡಿದ್ದು, ರೂ.319ಕ್ಕೆ ರಿಚಾರ್ಜ್ ಮಾಡಿಸಿದರೆ 90 ದಿನಗಳ ಅವಧಿಗೆ ಸಂಪೂರ್ಣವಾಗಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.
ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೊನೆಗೂ ಪೊಲೀಸರಿಗೆ ಶರಣು

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕೊನೆಗೂ ಪೊಲೀಸರಿಗೆ ಶರಣು

ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಕಬ್ಬನ್ ಪಾರ್ಕ್ ಪೊಲೀಸರಿಗೆ ಶರಣಾಗಿದ್ದಾನೆ. ಸತತ 37 ಗಂಟೆ ನಲಪಾಡ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಫೆ.17 ರಂದು ಹಲ್ಲೆ ನಡೆಸಿ ನಾಪತ್ತೆಯಾಗಿದ್ದ ನಲಪಾಡ್ ಇಂದು ಖುದ್ದು ಪೊಲೀಸರಿಗೆ ಶರಣಾಗಿದ್ದಾನೆ. ಮೊಹಮ್ಮದ್ ನಲಪಾಡ್ ಮೇಲೆ ಐಪಿಸಿ 506 ದೂರು ದಾಖಲಿಸಲಾಗಿದೆ ಹಾಕಲಾದ ಗೂಂಡಾಗಿರಿ ಪ್ರಕರಣವು ಬೇಲೇಬಲ್ ಪ್ರಕರಣವಾಗಿದೆ.