Short News

ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ನಟಿ ಶ್ರದ್ಧಾ ಶ್ರೀನಾಥ್

ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ನಟಿ ಶ್ರದ್ಧಾ ಶ್ರೀನಾಥ್

ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಂಡ ಬಳಿಕ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಟಿಗ್ಮಾಂಶು ದುಲಿಯಾ ನಿರ್ದೇಶನದ "ಮಿಲನ್ ಟಾಕೀಸ್" ಎಂಬ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್ ಗೆ ನಾಯಕಿಯಾಗಲಿದ್ದಾರೆ. ಈಗಾಗಲೇ ಶ್ರದ್ಧಾ ಈ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದು, ಮಾರ್ಚ್ ನಿಂದ ಶೂಟಿಂಗ್ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ಶ್ರದ್ಧಾ ದಕ್ಷಿಣದ ಎಲ್ಲಾ ಚಿತ್ರರಂಗಗಳೂ ಒಂದೇ ರೀತಿ. ಆದರೆ ಬಾಲಿವುಡ್ ಮಾತ್ರ ವಿಭಿನ್ನ, ನಿರ್ದೇಶಕರೊಬ್ಬರು ನನ್ನ ಹೆಸರು ಶಿಫಾರಸು ಮಾಡಿದ್ದರು, ನಾನು ಆಡಿಶನ್ ಗೆ ಹೋಗಿ ಬಂದೆ, ಕೂಡಲೇ ನನಗೆ ಆವಕಾಶ ಕೊಟ್ಟರು ಎಂದಿದ್ದಾರೆ.
ಮಂಗಳೂರಲ್ಲಿ ಯುಟಿ ಖಾದರ್ ವಿರುದ್ಧ ತೊಡೆ ತಟ್ಟಿದ ಅಶ್ರಫ್

ಮಂಗಳೂರಲ್ಲಿ ಯುಟಿ ಖಾದರ್ ವಿರುದ್ಧ ತೊಡೆ ತಟ್ಟಿದ ಅಶ್ರಫ್

ಅತ್ಯಂತ ಕುತೂಹಲ ಕೆರಳಿಸಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೊನೆಗೂ ಮಾಜಿ ಮೇಯರ್ ಆಶ್ರಫ್ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದ ಕೆ. ಅಶ್ರಫ್ ಮಂಗಳೂರಿನ ತಾಲೂಕು ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಇತ್ತೀಚೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಮಾಜಿ ಮೇಯರ್ ಕೆ.ಅಶ್ರಫ್, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು.ಟಿ ಖಾದರ್ ವಿರುದ್ಧ ತೊಡೆ ತಟ್ಟಿದ್ದಾರೆ.

ಪುರುಷರ ಗರ್ಭನಿರೋಧಕ ಮಾತ್ರೆ

ಪುರುಷರ ಗರ್ಭನಿರೋಧಕ ಮಾತ್ರೆ

ಪುರುಷರ ಗರ್ಭನಿರೋಧಕ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ. ಯಾವುದೇ ಅಡ್ದಪರಿಣಾಮಗಳಿಲ್ಲದೇ ವೀರ್ಯಾಣು ಚಟುವಟಿಕೆ ನಿಯಂತ್ರಿಸುವ ಮಾತ್ರೆಯ ಪರೀಕ್ಷೆ ಯಶಸ್ವಿಯಾಗಿದೆ. ಎಪೊಸ್ಸ್ ಎನ್ನುವ ಸಂಯುಕ್ತವು ವೀರ್ಯದ ಪ್ರೋಟೀನ್ ನ್ನು ಕಟ್ಟಿಹಾಕಿ, ಹಾರ್ಮೋನ್ ಗೆ ಯಾವುದೇ ತೊಂದರೆಯಾಗದಂತೆ ತೀವ್ರತೆ ಕಡಿಮೆ ಮಾಡುವುದು. ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಎಪೊಸ್ಸ್ ನ್ನು ಪುರುಷರ ಗರ್ಭನಿರೋಧಕವಾಗಿ ಮಾಡಲಾಗುತ್ತಿದೆ. ಯೂನಿವರ್ಸಿಟಿ ಆಫ್ ನಾರ್ತ್ ಕರೊಲಿನಾ ಪ್ರಕಟಿಸಿರುವಂತಹ ಸಂಶೋಧನಾ ವರದಿಯಲ್ಲಿ ಇದನ್ನು ಹೇಳಲಾಗಿದೆ.
ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಹೇಗೆ?

ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ನಿಯಂತ್ರಿಸುವುದು ಹೇಗೆ?

ಪ್ರತಿನಿತ್ಯ ನಾವು ಸವೆಸುವ ಅತ್ಯಂತ ಒತ್ತಡದ ಜೀವನಕ್ಕೆ ಪ್ರತಿಯಾಗಿ ನಮ್ಮ ದೇಹವು ಕಟ್ಟುತ್ತಿರುವ ಸುಂಕವೆಂದರೆ ಅದು ಕೆಟ್ಟ ಆರೋಗ್ಯ. ಇಂದಿನ ವ್ಯಸ್ತ ಹಾಗೂ ಒತ್ತಡದಲ್ಲಿ ಪ್ರತಿಯೊಬ್ಬರು ಯಾವುದಾದರೂ ಒಂದು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಡಯಾಬಿಟಿಸ್, ಬೊಜ್ಜು ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ತುಂಬಾ ಸಣ್ಣ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ. ಕಚೇರಿಯಲ್ಲಿ ಕೇವಲ ಕುರ್ಚಿ ಬಿಸಿಮಾಡುವುದನ್ನು ಬಿಟ್ಟರೆ ಬೇರೇನೂ ಮಾಡದಂತಹ ಜಡಜೀವನವು ಇದಕ್ಕೆ ಕಾರಣವಾಗಿದೆ. ಮಕ್ಕಳು ಮತ್ತು ವಯಸ್ಕರು ಸ್ವಲ್ಪ ಸಮಯ ತೆಗೆದುಕೊಂಡು ಹೊರಗಡೆ ಆಟವಾಡಬೇಕು ಅಥವಾ ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.