Short News

ಪ್ರತಿ ಕಂಪನಿಯು ಉದ್ಯೋಗಿಗಳಿಗೆ ಈ 11 ಸೌಲಭ್ಯಗಳನ್ನು ಒದಗಿಸಬೇಕು...

ಪ್ರತಿ ಕಂಪನಿಯು ಉದ್ಯೋಗಿಗಳಿಗೆ ಈ 11 ಸೌಲಭ್ಯಗಳನ್ನು ಒದಗಿಸಬೇಕು...

  • ಪ್ರತಿಯಬ್ಬರಿಗೂ ಉನ್ನತಮಟ್ಟದ ಪ್ರಸಿದ್ದ ಕಂಪನಿಗಳಲ್ಲಿ ಉದ್ಯೋಗ ಪಡೆಯಬೇಕು ಎಂಬ ಕನಸಿರುತ್ತದೆ. ಅದೇನೆ ಇರಲಿ ಯಾವುದೇ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಂಡರೂ ಆ ಕಂಪನಿಗಳು ತನ್ನ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ.
  • ಸಾಮಾನ್ಯವಾಗಿ ಕಂಪನಿಯ ಸೌಲಭ್ಯ, ಪಾಲಿಸಿ, ಷರತ್ತು ಮತ್ತು ಪ್ರೋಗ್ರಾಂಗಳ ಬಗ್ಗೆ ಆಯಾ ಕಂಪನಿಯ ಎಚ್ಆರ್(HR)ಗಳು ವಿವರಣೆ ನೀಡುತ್ತಾರೆ. ಒಂದು ವೇಳೆ ಕಂಪನಿಯ ಸೌಲಭ್ಯ ಪಾಲಿಸಿಗಳ ಬಗ್ಗೆ ವಿವರಣೆ ನೀಡದಿದ್ದಲ್ಲಿ ನಿಮ್ಮ ಎಚ್ಆರ್(HR)ಗಳಿಂದ ಮಾಹಿತಿ ಪಡೆಯಲು ಮರೆಯಬೇಡಿ.

ಚಾಣಾಕ್ಯನ ಪ್ರಕಾರ ನಿಮ್ಮನ್ನು ಎಂದಿಗೂ ಕೈಬಿಡದ ಆರು ಸಂಬಂಧಿಕರು ಯಾರು?

ಚಾಣಾಕ್ಯನ ಪ್ರಕಾರ ನಿಮ್ಮನ್ನು ಎಂದಿಗೂ ಕೈಬಿಡದ ಆರು ಸಂಬಂಧಿಕರು ಯಾರು?

ಚಾಣಾಕ್ಯ ನೀತಿಯನ್ನು ವೇದಗಳ ಸಮಯದಲ್ಲಿ ಚೆನ್ನಾಗಿಯೇ ವಿವರಿಸಲಾಗಿದೆ. ಚಾಣಾಕ್ಯ ಹೇಳಿರುವ ಮಾತುಗಳು ನಮ್ಮ ಇಂದಿನ ಜೀವನಕ್ಕೆ ಹೆಚ್ಚು ಪೂರಕವಾಗಿದ್ದು ಇವುಗಳನ್ನು ಅರಿತುಕೊಂಡು ನಾವು ಜೀವನವನ್ನು ನಡೆಸಿದಲ್ಲಿ ನಮಗೆ ಯಶಸ್ಸು, ಸಮಾಧಾನ, ಶಾಂತಿ ದೊರೆಯುತ್ತದೆ. ಇಂದಿನ ಲೇಖನದಲ್ಲಿ ಚಾಣಾಕ್ಯ ಹೇಳಿರುವ ಆರು ಜೀವನ ಸಂಬಂಧಿಗಳ ಬಗ್ಗೆ ತಿಳಿಸುತ್ತಿದ್ದೇವೆ. ನೀವು ಜೀವನದ ಈ ರಹಸ್ಯಗಳನ್ನು ಪಾಲಿಸಿಕೊಂಡು ಬಂದಲ್ಲಿ ಅವುಗಳು ನಿಮ್ಮ ಜೀವನವನ್ನು ಸಂರಕ್ಷಿಸುವುದು ಖಂಡಿತ ಎಂದಾಗಿದೆ. ಚಾಣಾಕ್ಯ ಇದನ್ನು ಆರು ಸಂಬಂಧಿಕರು ಎಂದು ಕರೆದಿದ್ದು ನೀವು ಎಲ್ಲಿಹೋದರೂ ನಿಮ್ಮ ಯಾವುದೇ ಸಂಕಷ್ಟದಲ್ಲಿ ಇವುಗಳು ಕೈಬಿಡುವುದಿಲ್ಲ.

ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ತೀವ್ರಗೊಂಡ ಕಡಲ ಕೊರೆತ

ರಾಜ್ಯದ ಕರಾವಳಿಯಲ್ಲಿ ವರುಣ ಮತ್ತೆ ಅಬ್ಬರಿಸಲು ಆರಂಭಿಸಿದ್ದಾನೆ. ಕಳೆದ 2 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗದಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ ಗೊಂಡಿದೆ. ಇನ್ನೊಂದೆಡೆ ಕಡಲ ರೌದ್ರ ನರ್ತನಕ್ಕೆ ಮಂಗಳೂರು ಹೊರವಲಯದ ಕಡಲ ತಡಿಯಲ್ಲಿ ಭಾರೀ ಕಡಲ ಕೊರೆತವಾಗುತ್ತಿದೆ. ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ಕಡಬದ ಹೊಸ್ಮಠ ಸೇತುವೆ ಸತತ ಎಂಟನೇ ದಿನವೂ ಮುಳುಗಡೆಯಾಗುತ್ತಿದ್ದು, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗುವ ಭಕ್ತರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
"135 ಕೋಟಿ ಜನರಿರುವ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ": ಬಜ್ಜಿ ಟ್ವೀಟ್ ಫುಲ್ ವೈರಲ್

"135 ಕೋಟಿ ಜನರಿರುವ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ": ಬಜ್ಜಿ ಟ್ವೀಟ್ ಫುಲ್ ವೈರಲ್

ಭಾನುವಾರ ನಡೆದ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿದೆ. ಫೈನಲ್ ಪಂದ್ಯಕ್ಕೂ ಮುನ್ನ ಕ್ರಿಕೆಟರ್ ಹರ್ಭಜನ್ ಸಿಂಗ್ ಮಾಡಿರುವ ಟ್ವೀಟ್ ಈಗ ವ್ಯಾಪಕ ವೈರಲ್ ಆಗಿದೆ. 50 ಲಕ್ಷ ಜನಸಂಖ್ಯೆಯಿರುವ ಸಣ್ಣ ದೇಶ ಕ್ರೊಯೇಷಿಯಾ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನಾಡಿದೆ. ಆದ್ರೆ 135 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಲ್ಲಿ, ಜನರು ಹಿಂದೂ-ಮುಸ್ಲಿಂ ಆಟವಾಡ್ತಿದ್ದಾರೆ. ನಮ್ಮ ಆಲೋಚನೆ ಬದಲಾದ್ರೆ ದೇಶ ಬದಲಾಗುತ್ತದೆ ಎಂದು ಹರ್ಭಜನ್ ಟ್ವಿಟ್ ಮಾಡಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more