Short News

ಚಿನ್ನಾಭರಣಪ್ರಿಯರೆ ಇಲ್ಲಿದೆ ನೋಡಿ, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

ಚಿನ್ನಾಭರಣಪ್ರಿಯರೆ ಇಲ್ಲಿದೆ ನೋಡಿ, ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ

  • ಭಾರತೀಯರು ಚಿನ್ನಾಭರಣಪ್ರಿಯರು. ಹೆಚ್ಚೆಚ್ಚು ಚಿನ್ನಾಭರಣ ಖರೀದಿಸಬೇಕು, ಧರಿಸಬೇಕು, ಸಂಗ್ರಹಿಸಿಡಬೇಕು ಎನ್ನುವುದು ಹೆಚ್ಚಿನವರ ಆಸೆ! ಮದುವೆ, ಹಬ್ಬ ಹರಿದಿನ, ಅಕ್ಷಯ ತೃತೀಯದಂತಹ ಪ್ರಮುಖ ಸಂದರ್ಭಗಳಲ್ಲಿ ಚಿನ್ನಾಭರಣ ಖರೀದಿಸುವುದು ವಾಡಿಕೆ.
  • ಕನ್ನಡಗುಡ್ ರಿಟರ್ನ್ಸ್.ಇನ್ (kannadagoodreturns.in) ಮೂಲಕ ಪ್ರತಿದಿನ ರಾಜ್ಯದ ಮತ್ತು ದೇಶದ ಪ್ರಮುಖ ನಗರಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ.

  • ಇಂದಿನ ಚಿನ್ನ(10gm) ಮತ್ತು ಬೆಳ್ಳಿಯ(1kg) ದರಗಳನ್ನು ಇಲ್ಲಿ ನೀಡಲಾಗಿದೆ. ಯಾವ ನಗರದಲ್ಲಿ ಎಷ್ಟೆಷ್ಟು ಏರಿಳಿತ ಕಂಡಿದೆ ನೋಡೋಣ..

ಇಂಡಿಯನ್ ಏರ್‌ಫೋರ್ಸ್ ನೇಮಕಾತಿ ... ಏರ್‌ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಏರ್‌ಫೋರ್ಸ್ ನೇಮಕಾತಿ ... ಏರ್‌ಮ್ಯಾನ್ ಹುದ್ದೆಗೆ ಅರ್ಜಿ ಆಹ್ವಾನ

ಇಂಡಿಯನ್ ಏರ್‌ಫೋರ್ಸ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಏರ್‌ಮ್ಯಾನ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಜುಲೈ 3 ರಿಂದ 24, 2018 ರ ಮಧ್ಯೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಜುಲೈ 3, 2018. ಇಂಜಿನೀಯರಿಂಗ್ ನಲ್ಲಿ ಮೂರು ವರ್ಷ ಡಿಪ್ಲೋಮಾ ಕೋರ್ಸ್ ಮಾಡಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗೆ ಸಂಬಂಧಿಸಿದಂತೆ ಸೆಪ್ಟಂಬರ್ 13 ರಿಂದ 16, 2018 ರವರೆಗೆ ಲಿಖಿತ ಪರೀಕ್ಷೆ ನಡೆಯುತ್ತದೆ.
ನಾನ್ ವೆಜ್ ಪ್ರಿಯ ಸಿದ್ದರಾಮಯ್ಯ ಈಗ ಪಕ್ಕಾ ಸಸ್ಯಹಾರಿ!

ನಾನ್ ವೆಜ್ ಪ್ರಿಯ ಸಿದ್ದರಾಮಯ್ಯ ಈಗ ಪಕ್ಕಾ ಸಸ್ಯಹಾರಿ!

ನಾಟಿ ಕೋಳಿ, ಬನ್ನೂರು ಮಟನ್ ಹಾಗು ಪಾಯ ಸೂಪ್ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಪ್ರಾಣ. ಮುಂಜಾನೆ ಅವರಿಗೆ ಪಾಯ ಸೂಪ್ ಬೇಕೇ ಬೇಕು. ಹೆಚ್ಚಾಗಿ ಮಾಂಸಾಹಾರಕ್ಕೆ ಒಲವು ತೋರುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಪ್ಪಟ ಸಸ್ಯಹಾರಿ. ಅರೆರೆ ಇದು ಹೇಗೆ ಸಾಧ್ಯ ಎಂಬ ಕುತೂಹಲವೇ? ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿ ವನದಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಈಗ ಸಸ್ಯಹಾರಿಯಾಗಿ ಬದಲಾಗಿದ್ದಾರೆ.
ಬಿಪಿಒ, ಐಟಿ ವಲಯದ ವೈಭವ ದಿನಗಳು ಮುಗಿದವು: ಎಐಸಿಟಿಇ ಅಧ್ಯಕ್ಷ

ಬಿಪಿಒ, ಐಟಿ ವಲಯದ ವೈಭವ ದಿನಗಳು ಮುಗಿದವು: ಎಐಸಿಟಿಇ ಅಧ್ಯಕ್ಷ

ಉದ್ಯೋಗದ ವಿಚಾರದಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಭವಿಷ್ಯ ಕರಾಳವಾಗಿದೆ. ದೊಡ್ಡ ಅವಕಾಶಗಳಾಗಿದ್ದ ಐಟಿ ಹಾಗೂ ಬಿಪಿಒ ವಲಯಗಳಲ್ಲಿ ಇನ್ನೂ ಭಾರೀ ನೇಮಕಾತಿಗಳು ಆಗುವ ಸಾಧ್ಯತೆಯಿಲ್ಲ ಎಂದು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ಅಧ್ಯಕ್ಷ ಅನಿಲ್ ಸಹಸ್ರಬುಧೆ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಟಿವಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬೃಹತ್ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಒಂದು ಹಂತಕ್ಕೆ ಬಂದು ನಿಂತುಬಿಟ್ಟಿವೆ. ಈಗ ಭರವಸೆ ಏನಿದ್ದರೂ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ ಬಗ್ಗೆಯೇ ಎಂದು ಹೇಳಿದ್ದಾರೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more