Short News

ಬೆಂಗಳೂರಿನ ಐಟಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಹತಾಶೆ ಕಾರಣಗಳೇನು?

ಬೆಂಗಳೂರಿನ ಐಟಿ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಹತಾಶೆ ಕಾರಣಗಳೇನು?

  • ಕರ್ನಾಟಕದ ರಾಜಧಾನಿ, ಉದ್ಯಾನ ನಗರಗಳ ಖ್ಯಾತಿಯ ಬೆಂಗಳೂರು ದೇಶದ ಪ್ರಮುಖ ಮಹಾನಗರಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ಇದು ಭಾರತದ ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಇಲ್ಲಿನ ವಾಣಿಜ್ಯ ವಹಿವಾಟಿನಿಂದ ದೇಶದ ಜಿಡಿಪಿಗೆ ಬಹುದೊಡ್ಡ ಪ್ರಮಾಣದ ಆದಾಯ ನೀಡುತ್ತಿದೆ.
  • ಜಗತ್ತಿನಲ್ಲೇ ಹೆಸರುವಾಸಿಯಾದ ಇನ್ಫೊಸಿಸ್, ಐಬಿಎಂ, ಡೆಲಾಯಿಟ್, ಅಕ್ಸೆಂಚರ್, ಟಿಸಿಎಸ್ ಸೇರಿದಂತೆ ಇನ್ನೂ ಅನೇಕ ಐಟಿ ಹಾಗೂ ತಂತ್ರಜ್ಞಾನದ ಕಂಪನಿಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಿಂದ ಇನ್ಫಾರ್ಮೇಶನ್ ಟೆಕ್ನಾಲಜಿ ಹಾಗೂ ಐಟಿ ಸಂಬಂಧಿತ ವಲಯದಲ್ಲಿ ದೇಶ ಅಪಾರ ಅಭಿವೃದ್ಧಿ ಸಾಧಿಸಿದೆ.

ನಿದ್ದೆಗೆ ನಿಮ್ಮ ಸಮಯ ಕೊಡಿ, ತೂಕ ಇಳಿಸಿ

ನಿದ್ದೆಗೆ ನಿಮ್ಮ ಸಮಯ ಕೊಡಿ, ತೂಕ ಇಳಿಸಿ

7-8 ಗಂಟೆಯ ನಿದ್ದೆ ಪ್ರತಿ ಮನುಷ್ಯನಿಗೆ ಬೇಕೆಬೇಕು. ಈ ನಿದ್ದೆಯು ಸರಿಯಾಗಿದ್ದರೆ,ನಿಮ್ಮ ಕ್ಯಾಲೋರಿಯನ್ನು ಕರಗಿಸಲು ಇದು ಸಹಾಯ. ಯಾರು ಸರಿಯಾಗಿ ವಿರಾಮ ತೆಗೆದುಕೊಳ್ಳುತ್ತಾರೋ, ಅವರು ಶೇಕಡಾ 5 ರಷ್ಟು ಪ್ರಮಾಣದ ಹೆಚ್ಚು ಪ್ರಮಾಣದ ಶಕ್ತಿಯನ್ನು ಕರಗಿಸುವ ಸಾಮರ್ಥ್ಯವನ್ನು ವಿರಾಮ ತೆಗೆದುಕೊಳ್ಳದೇ ಇರುವವರಿಗಿಂತ ಹೊಂದಿರುತ್ತಾರೆ ಅನ್ನುವುದನ್ನು ಅಧ್ಯಯನವೊಂದು ಬಹಿರಂಗ ಪಡಿಸಿದೆ. ಸರಿಯಾಗಿ ನಿದ್ದೆ ಮಾಡುವ ವ್ಯಕ್ತಿಯು ಶೇಕಡಾ 20 ರಷ್ಟು ಕ್ಯಾಲೋರಿಯನ್ನು ಊಟದ ನಂತರ ಕರಗಿಸಲು ಸಾಧ್ಯವಿದೆ. ಆದರೆ ಅತಿಯಾಗಿ ನಿದ್ರಿಸುವವರಲ್ಲಿ ಫ್ಯಾಟ್ ಸೆಲ್ ಗಳು ಕಡಿಮೆ ಸೂಕ್ಷ್ಮ ಮತಿಗಳಾಗುತ್ತವೆ ಮತ್ತು ಚುರುಕಾಗಿ ಇರುವುದಿಲ್ಲ.
ನಿರ್ದೇಶಕ ಪ್ರೇಮ್ ಈ ಚಿತ್ರವನ್ನ ಮಾಡಲೇಬಾರದಾಗಿತ್ತಂತೆ.!

ನಿರ್ದೇಶಕ ಪ್ರೇಮ್ ಈ ಚಿತ್ರವನ್ನ ಮಾಡಲೇಬಾರದಾಗಿತ್ತಂತೆ.!

'ಕರಿಯ','ಎಕ್ಸ್ ಕ್ಯೂಸ್ ಮಿ' ಮತ್ತು 'ಜೋಗಿ' ಚಿತ್ರಗಳನ್ನು ನಿರ್ದೇಶಿಸಿ,ಯಶಸ್ವಿಯಾಗಿ, 'ಹ್ಯಾಟ್ರಿಕ್ ಡೈರೆಕ್ಟರ್' ಎಂಬ ಹಣೆಪಟ್ಟಿ ಪಡೆದ ಪ್ರೇಮ್ ಬಳಿಕ 'ಪ್ರೀತಿ ಏಕೆ ಭೂಮಿ ಮೇಲಿದೆ?'ಎಂದು ಪ್ರಶ್ನಿಸುವ ಮೂಲಕ ನಾಯಕ ನಟರಾದರು. ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದ 'ಪ್ರೀತಿ ಏಕೆ ಭೂಮಿ ಮೇಲಿದೆ?' ಸಿನಿಮಾ ಬಿಡುಗಡೆ ಆದ್ಮೇಲೆ ಮಕಾಡೆ ಮಲಗಿತು.ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟಿದ್ದ ಪ್ರೇಮ್, ನಾಯಕನಾದ್ಮೇಲೆ ಮೊದಲ ಸೋಲು ಕಂಡರು. ಹೀಗಾಗಿ, 'ಪ್ರೀತಿ ಏಕೆ ಭೂಮಿ ಮೇಲಿದೆ.?' ಸಿನಿಮಾ ಮಾಡಲೇಬಾರದಿತ್ತು ಎಂದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಸಾಧು ಕೋಕಿಲ ಜೊತೆಗೆ ನಟಿಸಿದ ಕಾನ್ಸ್ ಟೇಬಲ್ ಸರೋಜ

ಸಾಧು ಕೋಕಿಲ ಜೊತೆಗೆ ನಟಿಸಿದ ಕಾನ್ಸ್ ಟೇಬಲ್ ಸರೋಜ

'ಟಗರು' ಸಿನಿಮಾದಿಂದ ದೊಡ್ಡ ಜನಪ್ರಿಯತೆ ಗಳಿಸಿದ ಕಾನ್ಸ್ ಟೇಬಲ್ ಸರೋಜ ಆ ನಂತರ ಕೆಲ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸದ್ಯ ಹಾಸ್ಯ ನಟ ಸಾಧು ಕೋಕಿಲ ಜೊತೆಗೆ ಕಾನ್ಸ್ ಟೇಬಲ್ ಸರೋಜ ಖ್ಯಾತಿಯ ನಟಿ ತ್ರಿವೇಣಿ ನಟಿಸುತ್ತಿದ್ದಾರೆ. ಅರ್ಜುನ್ ರಾವ್ ನಟನೆಯ 'ತಾಯಿಗೆ ತಕ್ಕ ಮಗ' ಸಿನಿಮಾ ಈಗಾಗಲೇ ಅನೇಕ ವಿಚಾರಳಿಗೆ ಸುದ್ದಿ ಮಾಡಿದೆ. ಈಗ ಸಿನಿಮಾದ ಮತ್ತೊಂದು ವಿಷಯ ಹೊರಬಂದಿದೆ. ಸಿನಿಮಾದಲ್ಲಿ ನಟಿ ತ್ರಿವೇಣಿ ಸಹ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಜೊತೆಗೆ ಹಾಸ್ಯ ಸನ್ನಿವೇಶಗಳಲ್ಲಿ ತ್ರಿವೇಣಿ ನಟಿಸಿದ್ದಾರೆ.'ತಾಯಿಗೆ ತಕ್ಕ ಮಗ' ಅಜಯ್ ರಾವ್ ಅವರ 25ನೇ ಸಿನಿಮಾವಾಗಿದೆ.