Short News

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಉಗ್ರ ದಾಳಿ ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಉಗ್ರ ದಾಳಿ ಓರ್ವ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಸುಂಜವಾನ್ ಸೇನಾ ಕ್ಯಾಂಪ್ ಮೇಲಿನ ಉಗ್ರ ದಾಳಿ ಬೆನ್ನಲೇ ಜಮ್ಮುವಿನಲ್ಲಿ ಮತ್ತೊಂದು ಉಗ್ರ ದಾಳಿ ನಡೆದಿದೆ. ಜಮ್ಮುವಿನಲ್ಲಿ ಕರಣ್‌ ನಗರದ ಕಟ್ಟಡವೊಂದರಲ್ಲಿ ಅವಿತು ಕುಳಿತು ಲಷ್ಕರ್ ಇ ತೊಯ್ಹಾ ಉಗ್ರ ಸಂಘಟನೆಯ ಇಬ್ಬರು ಉಗ್ರಗಾಮಿಗಳು ಸೇನಾಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರಸ್ತುತ ಕಟ್ಟಡವನ್ನು ಸೇನಾಪಡೆಗಳು ಸುತ್ತುವರೆದಿದ್ದು, ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದಲ್ಲಿರುವ ಕಟ್ಟಡದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಸಿಆರ್‌ಪಿಎಫ್‌ ಯೋಧ ಮುಜಾಹಿದ್‌ ಖಾನ್‌ ಹುತಾತ್ಮರಾಗಿದ್ದಾರೆ.
ಮಂಗಳ ಗ್ರಹದ ಶಿಲಾಪದರದಲ್ಲಿ ನೀರಿನ ಅಂಶ ಪತ್ತೆ?

ಮಂಗಳ ಗ್ರಹದ ಶಿಲಾಪದರದಲ್ಲಿ ನೀರಿನ ಅಂಶ ಪತ್ತೆ?

ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಯು ಮಂಗಳ ಗ್ರಹದಲ್ಲಿ ಶಿಲಾಪದರವನ್ನು ಪತ್ತೆ ಮಾಡಿದ್ದು, ಇದು ಭೂಮಿಯ ಕೆಲವು ಪರ್ವತಗಳ ಇಳಿಜಾರಿನಲ್ಲಿ ಕಂಡುಬರುವ ಶಿಲಾಪದರವನ್ನೇ ಹೋಲುತ್ತಿದೆ. ತೇವದಿಂದ ಕೂಡಿದ ಮಣ್ಣು ನಿರಂತರವಾಗಿ ಘನೀಕರಣಕ್ಕೆ ಒಳಗಾದಾಗ ಶಿಲಾಪದರಗಳು ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನವರಿ 2004ರಂದು ಕೆಂಪು ಗ್ರಹಕ್ಕೆ ಅಡಿಯಿಟ್ಟ ರೋವರ್ ನೌಕೆಯು 5 ಸಾವಿರ ‘ಮಂಗಳ ದಿನ'ಗಳನ್ನು ಪೂರೈಸಿದ್ದು, ಸದ್ಯ ‘ಪರ್ಸೀವರೆನ್ಸ್ ವ್ಯಾಲಿ' ಎಂಬ ಜಾಗದಲ್ಲಿ ಈಗ ಕಾರ್ಯಾಚರಣೆ ನಡೆಸುತ್ತಿದೆ. ಇದು ಸುತ್ತಾಡಿದ ಎಲ್ಲ ಜಾಗಗಳನ್ನು ಗಮನಿಸಿದಾಗ ಈ ಜಾಗ ಅತ್ಯಂತ ವಿಭಿನ್ನವಾಗಿ ಕಂಡುಬಂದಿದೆ.
ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿರುವ ಅತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಗಾಯಾಳುವಾಗಿದ್ದು, ಸರಣಿಯಿಂದ ಹೊರ ನಡೆದಿದ್ದಾರೆ. ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 28 ರನ್ ಅಂತರದಿಂದ ಸೋಲು ಕಂಡಿತು. ಸೆಂಚೂರಿಯನ್ ನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಡಿ'ವಿಲಿಯರ್ಸ್ ಅವರು ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.
ಸ್ಟಾರ್ ನಟನನ್ನ 'ಪೋರ್ನ್ ನಟ' ಎಂದ RGV

ಸ್ಟಾರ್ ನಟನನ್ನ 'ಪೋರ್ನ್ ನಟ' ಎಂದ RGV

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದಕ್ಷಿಣ ಭಾರತದ ಖ್ಯಾತ ನಟನೊಬ್ಬನನ್ನ ಪೋರ್ನ್ ನಟ ಎಂದು ಹೇಳುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ''ನಾನು ಪವನ್ ಕಲ್ಯಾಣ್ ಅವರನ್ನು ಪೋರ್ನ್‌ನಷ್ಟೇ ಇಷ್ಟಪಡುತ್ತೇನೆ. ಆದ್ದರಿಂದ ನನ್ನ ಪ್ರಕಾರ ಅವರು ಪೋರ್ನ್ ಕಲ್ಯಾಣ್. ಇದು ನಿಜವಾದ ಜಿಎಸ್ ಟಿ'' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ನಲ್ಲಿ ''ಯಾಕಂದ್ರೆ 'ಪವನ್' ಹಾಗೂ 'ಪೋರ್ನ್' ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿವೆ. ಹೀಗಾಗಿ, ಪೋರ್ನ್ ಕಲ್ಯಾಣ್ ಅನ್ನೋದು ಅಂತಿಮ ಬ್ರ್ಯಾಂಡ್. ನನಗೆ ಪವನ್ ಮತ್ತು ಪೋರ್ನ್ ಸಮಾನಾಗಿ ಇಷ್ಟವಾಗುತ್ತೆ'' ಎಂದು ಎಂದು ವರ್ಮಾ ಟ್ವೀಟ್ ಮಾಡಿದ್ದಾರೆ.