Short News

ಹೈದರಾಬಾದ್‌ : ಆಸ್ಪತ್ರೆ ಸಿಬ್ಬಂದಿ ಕಣ್ಣು ತೇವಗೊಳಿಸಿದ ಬಾಲಕ

ಹೈದರಾಬಾದ್‌ : ಆಸ್ಪತ್ರೆ ಸಿಬ್ಬಂದಿ ಕಣ್ಣು ತೇವಗೊಳಿಸಿದ ಬಾಲಕ

ಹೈದರಾಬಾದ್‌ನಲ್ಲಿ ಹೆತ್ತಮ್ಮ ಸಾವನ್ನಪ್ಪಿದ್ದಾಳೆ ಎಂಬುವುದನ್ನು ಅರಿಯದ ಬಾಲಕನೋರ್ವ ಆಕೆಯ ಮೃತದೇಹದ ಪಕ್ಕವೇ ನಿದ್ರೆಗೆ ಜಾರಿದ್ದಾನೆ. ನಗರದ ಉಸ್ಮಾನಿಯಾ ಜನರಲ್‌ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. 36 ವರ್ಷದ ಸಮೀನಾ ಸುಲ್ತಾನ್‌ ಎಂಬ ಮಹಿಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದು, ಇದನ್ನು ತಿಳಿಯದ ಐದು ವರ್ಷದ ಮಗ ತಾಯಿಯ ಬೆಡ್‌ ಮೇಲೆ ತಾನು ಮಲಗಿದ್ದಾನೆ. ಆಸ್ಪತ್ರೆಯ ಸಿಬ್ಬಂದಿ, ಹೆಲ್ಪಿಂಗ್ ಹ್ಯಾಂಡ್‌‌ ಫೌಂಡೇಷನ್‌ ನೆರವಿನಿಂದ ಆಧಾರ್‌ ಕಾರ್ಡ್‌ ಸಹಾಯದ ಮೇಲೆ ಸಮೀನಾ ಸಂಬಂಧಿಕರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಮೀನಾ ಸಂಬಂಧಿಕರಿದ್ದು, ಅವರಿಗೆ ಬಾಲಕನನ್ನು ಒಪ್ಪಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳೊಂದಿಗೆ ಶಾ ಸಂವಾದ

ಕಾಲೇಜು ವಿದ್ಯಾರ್ಥಿಗಳೊಂದಿಗೆ ಶಾ ಸಂವಾದ

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಭೇಟಿ ಹಾಗೂ ಕುಲ್ಕುಂದ ನವಶಕ್ತಿ ಸಮಾವೇಶದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ತೂರಿಗೆ ಆಗಮಿಸಿ, ಇಲ್ಲಿನ ಸ್ವಾಮಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾಲೇಜಿಗೆ ಬಂದ ಅಮಿತ್ ಶಾರನ್ನು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಪುಷ್ವಗುಚ್ಚ ನೀಡಿ ಬರಮಾಡಿಕೊಂಡರು. ನವ ಭಾರತ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯದ ಕುರಿತು ಇದೇ ಸಂದರ್ಭದಲ್ಲಿ ಅಮಿತ್ ಶಾ ಮಾತನಾಡಿದರು.

ಭಾರತದ 'ಚಂದ್ರಯಾನ-2' ಯೋಜನೆ ವೆಚ್ಚ ಒಂದು ಹಾಲಿವುಡ್ ಸಿನಿಮಾಗಿಂತ ಕಡಿಮೆ!!

ಭಾರತದ 'ಚಂದ್ರಯಾನ-2' ಯೋಜನೆ ವೆಚ್ಚ ಒಂದು ಹಾಲಿವುಡ್ ಸಿನಿಮಾಗಿಂತ ಕಡಿಮೆ!!

ಚಂದ್ರನ ನೆಲದಲ್ಲಿ ಸುಗಮವಾಗಿ ಇಳಿಯಬಲ್ಲ ಚಂದ್ರಯಾನ-2 ಯೋಜನೆ ಮತ್ತು ರೋವರ್‌ ನಡಿಗೆಯನ್ನು ಇಸ್ರೋ ಕೈಗೊಳ್ಳಲಿದ್ದು, ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಶುರುವಾಗುತ್ತಿರುವ ಭಾರತ 'ಚಂದ್ರಯಾನ-2' ಯೋಜನೆ ಒಂದು ಹಾಲಿವುಡ್ ಸಿನಿಮಾಗಿಂತಲೂ ಕಡಿಮೆ ವೆಚ್ಚದ ಬಜೆಟ್ ಆಗಿರಲಿದೆ.!!

ನಾಸಾದ ಅಪೋಲೋ ಮತ್ತು ರಷ್ಯಾದ ಲೂನಾ ಮಿಷನ್‌ಗಳಲ್ಲಿ ರೋವರ್‌ಗಳು ಚಂದ್ರನ ಸಮಭಾಜಕ ಪ್ರದೇಶದಲ್ಲಿ ಇಳಿದಿದ್ದವು. ಆದರೆ ಇಸ್ರೋ ತನ್ನ ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಸಲು ಯೋಚಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಅವರು ಮಾಧ್ಯಮಗಳಿಗೆ ತಿಳಸಿದ್ದಾರೆ.!!

ಜಿಯೋ ವಿರುದ್ಧ ಬೆಸ್ಟ್ ಆಫರ್ ಕೊಟ್ಟ ಏರ್ ಟೆಲ್

ಜಿಯೋ ವಿರುದ್ಧ ಬೆಸ್ಟ್ ಆಫರ್ ಕೊಟ್ಟ ಏರ್ ಟೆಲ್

ಏರ್ ಟೆಲ್ ಬಳಕೆದಾರರು ಈ ಪ್ಲಾನ್ ಅನ್ನು ಮೈ ಏರ್ ಟೆಲ್ ಆಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ. ಒಂದು ದಿನದಕ್ಕಾಗಿ ಅಗತ್ಯವಾಗಿ ಯಾವುದಾದರು ಸೇವೆ ಬೇಕಾಗಿದ್ದಲ್ಲಿ ಈ ಪ್ಲಾನ್ ಅನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಏರ್ ಟೆಲ್ ಅನ್ ಲಿಮಿಟೆಡ್ ಕರೆ ಮತ್ತು ಉಚಿರ ರೋಮಿಂಗ್ ಕರೆಗಳು ಮತ್ತು 100SMS ಮತ್ತು 200 MB 3G/4G ಡೇಟಾವನ್ನು ಒಂದು ದಿನದ ವ್ಯಾಲಿಡಿಟಿಗೆ ರೂ.19ಕ್ಕೆ ನೀಡುತ್ತಿದೆ. ಇದೇ ಮಾದರಿಯಲ್ಲಿ ಜಿಯೋ, 20 SMS, 0.15GB ಡೇಟಾವನ್ನು ಮಾತ್ರವೇ ನೀಡುತ್ತಿದೆ.