Short News

ಬಿಜೆಪಿ ಚುನಾವಣಾ ತಂತ್ರ, ಕ್ರಿಶ್ಚಿಯನ್ನರಿಗೆ ಉಚಿತ ಜೆರುಸಲೆಂ ಪ್ರವಾಸ!

ಬಿಜೆಪಿ ಚುನಾವಣಾ ತಂತ್ರ, ಕ್ರಿಶ್ಚಿಯನ್ನರಿಗೆ ಉಚಿತ ಜೆರುಸಲೆಂ ಪ್ರವಾಸ!

ಪವಿತ್ರ ಸ್ಥಳ ಹಜ್‌ ಯಾತ್ರಿಕರಿಗೆ ನೀಡುತ್ತಿದ್ದ ಸರಕಾರಿ ಅನುದಾನವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕ್ರಿಶ್ಚಿಯನ್ನರಿಗೆ ಉಚಿತ ಜೆರುಸಲೆಂ ಪ್ರವಾಸ ಮಾಡಿಸುವುದಾಗಿ ಭರವಸೆ ನೀಡಿದೆ .ಮೇಘಾಲಯ, ನಾಗಾಲ್ಯಾಂಡ್‌ ಹಾಗೂ ತ್ರಿಪುರಾದಲ್ಲಿ ಇದೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಇಲ್ಲಿ ಅಧಿಕಾರ ಪಡೆದುಕೊಳ್ಳಲು ಬಿಜೆಪ ಈ ತಂತ್ರ ಹೂಡಿದೆ ಎನ್ನಲಾಗಿದೆ. ಮೇಘಾಲಯದಲ್ಲಿ ಸುಮಾರು ಶೇ.75ರಷ್ಟು ಮತ್ತು ನಾಗಾಲ್ಯಾಂಡ್‌ನಲ್ಲಿ, ಶೇ.88ರಷ್ಟು ಕ್ರಿಶ್ಚಿಯನ್ ರಿದ್ದಾರೆ. ಇದನ್ನೇ ಬಿಜೆಪಿ ಬಂಡವಾಳವಾಗಿ ಮಾಡಿಕೊಂಡಿದೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಣ್ಸನ್ನೆ  ಬೆಡಗಿ ಪ್ರಿಯಾ ?

ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಣ್ಸನ್ನೆ ಬೆಡಗಿ ಪ್ರಿಯಾ ?

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಆದರೆ ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ. ಇದನ್ನ ಖಂಡಿಸಿರುವ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌.ಐ.ರ್ ರದ್ದುಪಡಿಸಬೇಕು ಮತ್ತು ತೆಲಂಗಾಣ, ಮಹಾರಾಷ್ಟ್ರ ಸರಕಾರಗಳು ಯಾವುದೇ ಕ್ರಮಕ್ಕೆ ಮುಂದಾಗದಂತೆ ತಡೆ ನೀಡಬೇಕು ಎಂದು ಪ್ರಿಯಾ ಪ್ರಕಾಶ್ ವಾರಿಯರ್ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಕಣ್ಸನ್ನೆ ಮಾಡಿ 'ನ್ಯಾಷನಲ್ ಕ್ರಶ್' ಆಗಿದ್ದ ಪ್ರಿಯಾಗೆ ಈಗ ಸಂಕಷ್ಟ.!

ಬರಿ ಕಣ್ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಮಲಯಾಳಂ ನಟಿ ಪ್ರಿಯಾ ವಾರಿಯರ್ ರಾತ್ರೋರಾತ್ರಿ ಸೂಪರ್ ಸ್ಟಾರ್ ಆಗಿದ್ದಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರಿಯಾ ಕಣ್ಸನ್ನೆ ಬಗ್ಗೆನೇ ಮಾತನಾಡ್ತಿದ್ದಾರೆ.

ಹೀಗೆ, ಕಳೆದ ಕೆಲ ದಿನಗಳಿಂದ ಸಾಮಾನ್ಯ ಜನರ ಹಾಟ್ ಟಾಪಿಕ್ ಆಗಿರುವ ಪ್ರಿಯಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ ಅವರಿಂದ ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಎಫ್.ಐ.ಆರ್ ದಾಖಲಾಗಿದೆ.

ಮಗನ ಗೂಂಡಾಗಿರಿ, ಸದನದಲ್ಲಿ ಕ್ಷಮೆ ಕೇಳಿದ ತಂದೆ ಹ್ಯಾರಿಸ್

ಮಗನ ಗೂಂಡಾಗಿರಿ, ಸದನದಲ್ಲಿ ಕ್ಷಮೆ ಕೇಳಿದ ತಂದೆ ಹ್ಯಾರಿಸ್

ತಮ್ಮ ಮಗ ಮೊಹಮ್ಮದ್ ನಲಪಾಡ್ ಗೂಂಡಾಗಿರಿ ಪ‍್ರಕರಣಕ್ಕೆ ಸಂಬಂಧಿಸಿ ಶಾಸಕ ಎನ್.ಎ.ಹ್ಯಾರಿಸ್ ಸದನದಲ್ಲಿ ಕ್ಷಮೆ ಕೋರಿದರು ಸದನದ ಸದಸ್ಯನಾದರೂ, ಮೊಹಮ್ಮದ್ ನಲಪಾಡ್‌ ತಂದೆಯೂ ಹೌದು, ಆತ ಮುಂದೆ ತಪ್ಪು ಮಾಡದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಕಾನೂನು ಎಲ್ಲರಿಗೂ ಸಮಾನ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಮಗನ ರಕ್ಷಣೆಗಾಗಿ ನಾನು ಸರ್ಕಾರಕ್ಕೆ ಒತ್ತಡ ಹೇರಿಲ್ಲ. ಆತ ನನಗೆ ಸಿಕ್ಕಿದ್ದರೆ ನಾನೇ ಪೊಲೀಸ್ ಠಾಣೆಗೆ ಒಪ್ಪಿಸುತ್ತಿದ್ದೆ. ಸದನ, ಸರ್ಕಾರಕ್ಕೆ ಅಪಮಾನವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಎಲ್ಲರ ಮುಂದೆ ಹೇಳಿದ್ದಾರೆ.