Short News

ಉದ್ಯೋಗ ನಿರಾಕರಿಸಿದ್ದಕ್ಕೆ ತೃತೀಯ ಲಿಂಗಿಯಿಂದ ದಯಾ ಮರಣಕ್ಕೆ ಮನವಿ

ಉದ್ಯೋಗ ನಿರಾಕರಿಸಿದ್ದಕ್ಕೆ ತೃತೀಯ ಲಿಂಗಿಯಿಂದ ದಯಾ ಮರಣಕ್ಕೆ ಮನವಿ

ತೃತೀಯಲಿಂಗಿಯೊಬ್ಬರು ರಾಷ್ಟ್ರಪತಿಗಳಿಗೆ ದಯಾ ಮರಣಕ್ಕಾಗಿ ಪತ್ರ ಬರೆದಿದ್ದಾರೆ. ಅವರ ಹೆಸರು ಶಾನವಿ. ಅವರಿಗೆ ಉದ್ಯೋಗ ನೀಡಲು ಏರ್ ಇಂಡಿಯಾ ನಿರಾಕರಿಸಿದ್ದರಿಂದ ಮನ ನೊಂದ ಆವರು ದಯಾ ಮರಣಕ್ಕಾಗಿ ಕೋರಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೆ ಪತ್ರವನ್ನು ಬರೆದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ಅವರು ಎರಡೇ ವಿಭಾಗ ಇದೆ ಎನ್ನುತ್ತಾರೆ. ತೃತೀಯ- ಮಹಿಳೆ ಎಂಬ ಕ್ಯಾಟಗರಿ ನಮಗಿಲ್ಲ. ಆದರೆ ತೆರಿಗೆಯಲ್ಲಿ ನಮಗೆ ಯಾವುದಾದರೂ ವಿನಾಯಿತಿ ಇದೆಯಾ? ನಾವು ಸಹ ಪಾವತಿಸಲೇಬೇಕು, ಅಲ್ಲವಾ? ನನಗೆ ಶೈಕ್ಷಣಿಕ ಅರ್ಹತೆ ಇದೆ. ಅನುಭವ ಇದೆ. ಇನ್ನು ತಕರಾರು ಇರುವುದು ಲಿಂಗದ ವಿಚಾರವಾಗಿ" ಎಂದು ಅವರು ಹೇಳಿದ್ದಾರೆ.

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಎಪ್ರಿಲ್.23) ದಿನಭವಿಷ್ಯ

ಮೇಷ:ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ. ವೃಷಭ:ಮಕ್ಕಳ ಪ್ರಗತಿಯಿಂದ ಸಂತಸ. ಮಿಥುನ:ಪ್ರವಾಸ ಮುಂದೂಡುವುದು ಒಳಿತು. ಕಟಕ:ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು. ಸಿಂಹ:ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ. ಕನ್ಯಾ:ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ. ತುಲಾ:ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ವೃಶ್ಚಿಕ:ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ. ಧನುಸ್ಸು:ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ. ಮಕರ:ಇಚ್ಛಿಸಿದ ಕಾರ್ಯಗಳು ಕೈಗೂಡಲಿದೆ. ಕುಂಭ:ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ. ಮೀನ:ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.
ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಗುಂಡಿಕ್ಕಿ ಹತ್ಯೆ

ಶಿವಸೇನೆ ನಾಯಕ ಸಚಿನ್ ಸಾವಂತ್ ಹತ್ಯೆಯಾಗಿದ್ದಾರೆ. ಭಾನುವಾರ ರಾತ್ರಿ ಬೈಕ್ ನಲ್ಲಿ ಇಬ್ಬರು ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮುಂಬೈ ಉಪನಗರದ ಕಂಡಿವಾಲಿಯಲ್ಲಿ ಈ ಘಟನೆ ನಡೆದಿದೆ.
ಭಾನವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಗೋಕುಲ್ ನಗರ ಪ್ರದೇಶದಲ್ಲಿದ್ದ ವೇಳೆ ಸಾವಂತ್ ಮೇಲೆ ಬೈಕ್ ನಲ್ಲಿ ಬಂದ ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸಚಿನ್ ಸಾವಂತ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ: ಮತ್ತೊಮ್ಮೆ ಸೂಚನೆ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್

ಬ್ಯಾಂಕ್‌ ಖಾತೆಗೆ ಆಧಾರ್ ಜೋಡಣೆ ಮಾಡುವುದು ಕಡ್ಡಾಯ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸ್ಪಷ್ಟಡಿಸಿದೆ. ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮದ ಪ್ರಕಾರ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ವಿವಿಧ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರಂದು ಗಡುವು ನೀಡಲಾಗಿದ್ದು, ಇದನ್ನು ಸಂವಿಧಾನಾತ್ಮಕ ಪೀಠದ ತೀರ್ಪು ಬರುವವರೆಗೂ ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಮೊದಲಿಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 ರ ಗಡುವು ನೀಡಲಾಗಿತ್ತು. ಕಲ್ಯಾಣ ಯೋಜನೆಗಳಿಗೆ ಜೂನ್ 30 ರೊಳಗೆ ಆಧಾರ್ ಲಿಂಕ್ ಮಾಡಬೇಕಿದೆ.