Short News

ಪುರಿ ಜಗನ್ನಾಥ ವಾರ್ಷಿಕ ರಥ ಯಾತ್ರೆಗೆ ಸಕಲ ಸಿದ್ಧತೆ

ಪುರಿ ಜಗನ್ನಾಥ ವಾರ್ಷಿಕ ರಥ ಯಾತ್ರೆಗೆ ಸಕಲ ಸಿದ್ಧತೆ

ಜಗನ್ನಾಥ, ಬಲರಾಮ ಹಾಗೂ ತಂಗಿ ಸುಭದ್ರಾ ದೇವರ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳಲು ಲಕ್ಷಾಂತರ ಭಕ್ತರು ಸಜ್ಜಾಗಿದ್ದಾರೆ. 9 ದಿನಗಳ ವಾರ್ಷಿಕ ಜಗನ್ನಾಥ ಯಾತ್ರೆಯು ಜುಲೈ 14ರಿಂದ ಆರಂಭಗೊಳ್ಳಲಿದೆ. ರಥಯಾತ್ರೆ ಸುಗುಮವಾಗಿ ಸಾಗಲು ಸಕಲ ರೀತಿಯಿಂದ ಪುರಿ ನಗರಿ ಸಜ್ಜಾಗಿದೆ. ದೇಗುಲದ ಸುತ್ತಾ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಗುಂಡಿಚಾ ಯಾತ್ರಾ, ಬಹುದಾ ಯಾತ್ರಾ,ಸುನಾವೇಶ, ನವಯೌವನ ದರ್ಶನ ಹಾಗೂ ನೀಲದ್ರಿಬಿಜೆ ಮೆರವಣಿಗೆಗಳು ಸಾಗಲಿವೆ. 140 ಪ್ಲಾಟೂನ್ ಪೊಲೀಸ್ ಪಡೆ, 1,000ಕ್ಕೂ ಅಧಿಕ ಅಧಿಕಾರಿಗಳನ್ನು ರಥಯಾತ್ರೆ ಭದ್ರತೆಗಾಗಿ ನಿಯೋಜಿಸಲಾಗಿದೆ.  
ಕನ್ನಡದ ಸುಮಂತ್ ಶೈಲೇಂದ್ರ ಈಗ ತೆಲುಗಿನಲ್ಲಿ ಅಬ್ಬರಿಸಲು ಫುಲ್ ತಯಾರಿ

ಕನ್ನಡದ ಸುಮಂತ್ ಶೈಲೇಂದ್ರ ಈಗ ತೆಲುಗಿನಲ್ಲಿ ಅಬ್ಬರಿಸಲು ಫುಲ್ ತಯಾರಿ

ಕನ್ನಡದ ಯುವನಟ ಸುಮಂತ್ ಶೈಲೇಂದ್ರ 'ಲೀ' ಚಿತ್ರದ ನಂತರ ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟ್ ಆಗಿದ್ದರು. ಕನ್ನಡದಲ್ಲಿ ಸೈಲೆಂಟ್ ಆಗಿರುವ ಕಾರಣ ಈಗ ಬಹಿರಂಗವಾಗಿದೆ. ಯಾಕಂದ್ರೆ,ಇಲ್ಲಿ ಸೈಲೆಂಟ್ ಆದ ಸುಮಂತ್ ಟಾಲಿವುಡ್ ನಲ್ಲಿ ಸದ್ದು ಮಾಡ್ತಿದ್ದಾರೆ. ಆಟ,ದಿಲ್ವಾಲಾ,ತಿರುಪತಿ ಎಕ್ಸ್ ಪ್ರೆಸ್,ಬೆತ್ತನಗೆರೆ,ಭಲೇಜೋಡಿ,ಲೀ ಸಿನಿಮಾಗಳ ಮೂಲಕ ತನ್ನದೇ ಬ್ರಾಂಡ್ ಹೊಂದಿರುವ ಸುಮಂತ್, ಈಗ ತೆಲುಗಿನಲ್ಲಿ 'ಬ್ರಾಂಡ್ ಬಾಬು' ಆಗಿದ್ದಾರೆ. ಈಗಾಗಲೇ 'ಬ್ರಾಂಡ್ ಬಾಬು' ಚಿತ್ರದ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು,ಸದ್ಯದಲ್ಲೇ ಟ್ರೈಲರ್ ಬರಲಿದೆ. ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಬ್ರಾಂಡ್ ಬಾಬು' ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ
ಹೊಸ 100 ರೂಪಾಯಿ ನೋಟು ಬಿಡುಗಡೆ! ವಿಶೇಷತೆಗಳೇನು ಗೊತ್ತೆ?

ಹೊಸ 100 ರೂಪಾಯಿ ನೋಟು ಬಿಡುಗಡೆ! ವಿಶೇಷತೆಗಳೇನು ಗೊತ್ತೆ?

  • ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗುರುವಾರ ಹೊಸ 100 ರೂಪಾಯಿ ಮುಖಬೆಲೆಯ ನೋಟನ್ನು ಬಿಡುಗಡೆ ಮಾಡಿದೆ.
  • ನೇರಳೆ ಬಣ್ಣದ ನೋಟುಗಳು ಅತೀ ಶೀಘ್ರದಲ್ಲೇ ನಿಮ್ಮ ಕೈಗೆ ಸೇರಲಿವೆ ಎಂದು ಆರ್ಬಿಐ ತಿಳಿಸಿದೆ. ಮಹಾತ್ಮಗಾಂಧಿ ಹೊಸ ಸರಣಿಯ ರೂ. 100 ನೋಟಿನ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಅದರಲ್ಲಿನ ವಿಶೇಷ ಲಕ್ಷಣಗಳೇನು ಎಂಬುದು ಹಲವರ ಕುತೂಹಲ ಆಗಿರಬಹುದು..!
  • ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಹೊಸ ನೋಟುಗಳು ಕೆನ್ನೇರಳೆ ಬಣ್ಣದಲ್ಲಿ ಮುದ್ರಣವಾಗುತ್ತಿವೆ. ಮಹಾತ್ಮಾ ಗಾಂಧಿಯಿರುವ ಹೊಸ ಸರಣಿಯ ನೋಟುಗಳಲ್ಲಿ ಆರ್ಬಿಐ ಗವರ್ನರ್ ಡಾ. ಉರ್ಜಿತ್ ಪಟೇಲ್ ಅವರ ಸಹಿ ಇರಲಿದೆ.
ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ  ಕೊಟ್ಟ ಭರವಸೆ ಈಡೇರಿಸದ ಮೋದಿ-ಶಾ: ಟಿಡಿಪಿ ಆರೋಪ

ಎನ್ ಡಿಎ ಸರ್ಕಾರ ರಚನೆಯಾಗಿ 4 ವರ್ಷಗಳೇ ಕಳೆದರೂ ಕೊಟ್ಟ ಭರವಸೆ ಈಡೇರಿಸದ ಮೋದಿ-ಶಾ: ಟಿಡಿಪಿ ಆರೋಪ

ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಸುಳ್ಳು ಭರವಸೆಗಳನ್ನು ನೀಡಿ ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಟಿಡಿಪಿ ಗಂಭೀರ ಆರೋಪ ಮಾಡಿದೆ. ಸಂಸತ್ ಕಲಾಪದಲ್ಲಿ ಅವಿಶ್ವಾಸ ನಿರ್ಣಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಅವರು, ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಆಂಧ್ರ ಹಳೆಯ ಹೆಸರಾದರೂ ಅದು ಹೊಸ ರಾಜ್ಯ, ತೆಲಂಗಾಣ ಹೊಸ ಹೆಸರಾದರೂ ಅದು ಹಳೆಯ ರಾಜ್ಯ. ಇದು ಕೇಂದ್ರಕ್ಕೆ ಸ್ಪಷ್ಟವಾಗಿ ತಿಳಿದಿದೆ. ಆದರೂ ಆರ್ಥಿಕವಾಗಿ ತೆಲಂಗಾಣವನ್ನು ಬೆಂಬಲಿಸಿದೆ. ಎನ್ ಡಿಎ ಸರ್ಕಾರ ರಚನೆಯಾಗಿ 4ವರ್ಷ ಕಳೆದರೂ ಕೊಟ್ಟ ಭರವಸೆ ಈಡೇರಿಸಿಲ್ಲ ಎಂದರು.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more