Short News

ಆನಂದ್ ಸಿಂಗ್ ಕಚೇರಿಗೆ ಬೀಗ, ನೀರು- ವಿದ್ಯುತ್ ಕಟ್

ಆನಂದ್ ಸಿಂಗ್ ಕಚೇರಿಗೆ ಬೀಗ, ನೀರು- ವಿದ್ಯುತ್ ಕಟ್

ಮತಗಟ್ಟೆ ಕೇಂದ್ರಕ್ಕೆ 116 ಮೀಟರ್ ವ್ಯಾಪ್ತಿಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಆನಂದಸಿಂಗ್ ಕಚೇರಿ ಇರುವ ಕಾರಣ ಸಹಾಯಕ ಆಯುಕ್ತ ಗಾರ್ಗಿ ಜೈನ್ ಭಾನುವಾರ ಸಂಜೆ ದಾಳಿ ನಡೆಸಿ, ಕಚೇರಿಗೆ ಬೀಗ ಹಾಕಿ, ಪೊಲೀಸ್ ಭದ್ರತೆಯನ್ನು ಏರ್ಪಡಿಸಿದ್ದಾರೆ.

ಕಚೇರಿಯಲ್ಲಿದ್ದ ಪಕ್ಷದ ಬಾವುಟಗಳು, ಭಿತ್ತಿಪತ್ರಗಳು, ಕೆಲ ಬರಹಗಳು, ಚುನಾವಣೆಗೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡ ಅವರು, ಮಾದರಿ ನೀತಿ ಸಂಹಿತೆ ಅನ್ವಯ 200 ಮೀಟರ್ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆಗಳು ನಡೆಸುವಂತಿಲ್ಲ. ಆದ್ದರಿಂದ ಕಚೇರಿ ಜಪ್ತಿ ಮಾಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಿಎಸ್ ವೈ: ರಮಣ್ ಸಿಂಗ್

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಬಿಎಸ್ ವೈ: ರಮಣ್ ಸಿಂಗ್

"ಕರ್ನಾಟಕಕ್ಕೆ ಹೊಸ ನಾಯಕತ್ವದ ಅಗತ್ಯವಿದೆ" ಎಂದು ಛತ್ತೀಸ್ ಗಢಮುಖ್ಯಮಂತ್ರಿ ರಮಣ್ ಸಿಂಗ್ ಹೇಳಿದ್ದಾರೆ. ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಬಿ ಎಸ್ ಯಡಿಯೂರಪ್ಪ ಏ.19 ರಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರೊಂದಿಗಿದ್ದ ರಮಣ್ ಸಿಂಗ್ ಯಡಿಯೂರಪ್ಪನವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೈಜೀರಿಯಾದ ಸಂಸತ್​‌ಗೆ ನುಗ್ಗಿದ ಕಿಡಿಗೇಡಿಗಳು ಶಾಸಕಾಂಗದ ಅಧಿಕಾರ ದಂಡ ಕಿತ್ತು ಪರಾರಿ!!

ನೈಜೀರಿಯಾದ ಸಂಸತ್​‌ಗೆ ನುಗ್ಗಿದ ಕಿಡಿಗೇಡಿಗಳು ಶಾಸಕಾಂಗದ ಅಧಿಕಾರ ದಂಡ ಕಿತ್ತು ಪರಾರಿ!!

ಕೆಲ ರಾಷ್ಟ್ರಗಳಲ್ಲಿ ಪಾರ್ಲಿಮೆಂಟ್​ನೊಳಗೆ ಅದೇನೇನು ನಡೆಯುತ್ತವೆ ಅನ್ನೋದನ್ನ ಹೇಳೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸ್ಪಷ್ಟ ಸಾಕ್ಷಿ ನೈಜೀರಿಯಾದ ಸಂಸತ್​ನಲ್ಲಿ ನಡೆದ ಘಟನೆ. ಇಲ್ಲಿ ನಡೆಸ ಸಂಸತ್​ ಕಲಾಪದ ವೇಳೆ, ದುಷ್ಕರ್ಮಿಗಳು ಒಳಕ್ಕೆ ನುಗ್ಗಿ ದಾಂಧಲೆ ಮಾಡಿದ್ದಾರೆ. ಇಲ್ಲಿನ ಮೇಲ್ಮನೆಗೆ ನುಗ್ಗಿದ್ದ ಕಿಡಿಗೇಡಿಗಳು ಶಾಸಕಾಂಗದ ಅಧಿಕಾರ ದಂಡವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕೈಯಲ್ಲಿ ರಾಡ್​ನಂತಹ ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಬಂದಿದ್ದ ದುಷ್ಕರ್ಮಿಗಳು, ಈ ಕೃತ್ಯವೆಸಗಿದ್ದಾರೆ. ಈ ಎಲ್ಲಾ ಘಟನೆ ಕ್ಯಾಮಾರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚನ ಮೂಡಿಸಿದೆ.
ನಿರುದ್ಯೋಗ ಮುಕ್ತ ಜಯನಗರಕ್ಕೆ ಸೌಮ್ಯ ರೆಡ್ಡಿ ಸಂಕಲ್ಪ

ನಿರುದ್ಯೋಗ ಮುಕ್ತ ಜಯನಗರಕ್ಕೆ ಸೌಮ್ಯ ರೆಡ್ಡಿ ಸಂಕಲ್ಪ

ಜಯನಗರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರು 'ನಿರುದ್ಯೋಗ ಮುಕ್ತ ಜಯನಗರ' ಎಂಬ ಅಭಿಯಾನದಡಿ ಯುವಕ ಯುವತಿಯರಿಗಾಗಿ ನೆರವು ನೀಡುತ್ತಿರುವ, ಉದ್ಯೋಗ ಯೋಜನೆ ಕುರಿತಂತೆ ಸಾಕ್ಷ್ಯಚಿತ್ರದ ಮೂಲಕ ಭರದಿಂದ ಪ್ರಚಾರ ನಡೆಸಿದ್ದಾರೆ. ಮೂರು ನಿಮಿಷ 40 ಸೆಕೆಂಡುಗಳ ಸಾಕ್ಷ್ಯಚಿತ್ರದಲ್ಲಿ ಎಲಿವೇಟ್ ಲೈಫ್ ಎನ್ನುವ ಸಂಸ್ಥೆ ನಿರುದ್ಯೋಗಿ ಯುವಕರಿಗಾಗಿ ರೂಪಿಸಿರುವ ಹಲವಾರು ತರಬೇತಿ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿರುವ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಎಲೆವೇಟ್ ಲೈಫ್ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದಿದ್ದಾರೆ.