Short News

ವಾಜಪೇಯಿ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ: ಏಮ್ಸ್‌ ಆಸ್ಪತ್ರೆ

ವಾಜಪೇಯಿ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ: ಏಮ್ಸ್‌ ಆಸ್ಪತ್ರೆ

ಕಿಡ್ನಿ ವೈಫಲ್ಯ, ಮೂತ್ರನಾಳ ತೊಂದರೆ ಮತ್ತು ಉಸಿರಾಟದ ತೊಂದರೆಯಿಂದ ಜೂ.11ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ(93)ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಏಮ್ಸ್‌ ಆಸ್ಪತ್ರೆ ನಿರ್ದೇಶಕ ರಣದೀಪ್‌ ಗುಲೇರಿಯಾ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಕಳೆದ 48ಗಂಟೆಗಳಲ್ಲಿ ವಾಜಪೇಯಿ ಅವರ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆಯಾಗಿದೆ. ಯೂರಿನ್‌‌ ಇನ್ಸ್‌ಪೆಕ್ಷನ್‌,ರಕ್ತದೊತ್ತಡ,ಹೃದಯ ಬಡಿತ ಎಲ್ಲವೂ ನಿಯಂತ್ರಣದಲ್ಲಿದೆ. ಮುಂದಿನ ಕೆಲ ದಿನಗಳಲ್ಲಿ ಅವರು ಸಂಪೂರ್ಣವಾಗಿ ಚೇತರಿಕೆ ಕಾಣಲಿದ್ದಾರೆಂದು ವೈದ್ಯರು ಹೇಳಿದ್ದಾರೆ.
ಕೂದಲಿಗೆ ಅಲೋವೆರಾದ ಆರೈಕೆ ಮಾಡಿ

ಕೂದಲಿಗೆ ಅಲೋವೆರಾದ ಆರೈಕೆ ಮಾಡಿ

ಲೋಳೆಸರ/ಅಲೋವೆರಾದಲ್ಲಿ ಪ್ರೋಟಿಯೋಲೈಟಿಕ್ ಕಿಣ್ವಗಳಿವೆ. ಇದು ನೆತ್ತಿಯ ಭಾಗದಲ್ಲಿ ಹಾನಿಗೊಳಗಾದ ಜೀವಕೋಶಗಳನ್ನು ಸರಿಪಡಿಸುತ್ತವೆ. ಕೋಶದ ಆರೋಗ್ಯವನ್ನು ಸುಧಾರಿಸುವುದಲ್ಲದೆ ಆರೋಗ್ಯಕರವಾದ ಕೂದಲು ಬಹುಬೇಗ ಹುಟ್ಟುವಂತೆ ಉತ್ತೇಜಿಸುತ್ತದೆ. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೇಶರಾಶಿಯು ಬಹುಬೇಗ ಮೃದು ಹಾಗೂ ರೇಷ್ಮೆಯಂತೆ ಮಾಡುವುದು. ಕೇಶರಾಶಿಯು ಈ ಬದಲಾವಣೆಯನ್ನು ಪಡೆದುಕೊಂಡರೆ ನಿಮ್ಮ ಇಷ್ಟದಂತಹ ಕೇಶವಿನ್ಯಾಸಗಳನ್ನು ಸರಾಗವಾಗಿ ಮಾಡಿಕೊಳ್ಳಬಹುದು. ಅಲೋವೆರಾ ಅನ್ವಯಿಸಿಕೊಳ್ಳುವುದರಿಂದ ಕೂದಲುದುರುವುದನ್ನು ತಡೆಯಬಹುದು. ಜೊತೆಗೆ ನೈಸರ್ಗಿಕವಾಗಿ ದಪ್ಪವಾದ ಹಾಗೂ ಅಧಿಕ ಕೂದಲು ಬೆಳೆಯುವಂತೆ ಉತ್ತೇಜಿಸುವುದು.
'ಗುಳ್ಟು' ಯಶಸ್ಸಿನ ಬಗ್ಗೆ ಮಾತನಾಡಿದ ನಟಿ ಸೋನು

'ಗುಳ್ಟು' ಯಶಸ್ಸಿನ ಬಗ್ಗೆ ಮಾತನಾಡಿದ ನಟಿ ಸೋನು

ಈ ವರ್ಷ ಕನ್ನಡದಲ್ಲಿ ಸಕ್ಸಸ್ ಕಂಡ ಸಿನಿಮಾಗಳು ಕೆಲವೇ ಕೆಲವು. ಅವುಗಳಲ್ಲಿ 'ಗುಳ್ಟು' ಕೂಡ ಒಂದು. ಸಾಮಾಜಿಕ ಜಾಲತಾಣದ ಸುತ್ತ ಸಾಗುವ ಕಥೆ ಇದ್ದ ಈ ಸಿನಿಮಾ ನೋಡುಗರಿಗೆ ಹೊಸ ಅನುಭವ ಕೊಟ್ಟಿತ್ತು. ಅದೇ ಕಾರಣಕ್ಕೆ ಸಿನಿಮಾ 50 ದಿನ ಪ್ರದರ್ಶನ ಕಂಡಿತು. ಹೊಸ ಚಿತ್ರತಂಡದ ಹೊಸ ಪ್ರಯತ್ನವನ್ನು ಕನ್ನಡಿಗರು ಸಹ ಮೆಚ್ಚಿಕೊಂಡಿದ್ದರು. 'ಗುಳ್ಟು' ಸಿನಿಮಾದ ಯಶಸ್ವಿನ ಬಗ್ಗೆ ಈಗ ಚಿತ್ರದ ನಾಯಕಿ ಸೋನು ಗೌಡ ಮಾತನಾಡಿದ್ದಾರೆ. ಈ ಸಿನಿಮಾ ಬಹಳ ದಿನಗಳ ನಂತರ ಸೋನುಗೆ ಸಕ್ಸಸ್ ನೀಡಿದ್ದು, ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಅಮೆಜಾನ್ ಪ್ರೈಂ ಬಳಕೆದಾರರಿಗೆ ಭರ್ಜರಿ ಆಫರ್

ಅಮೆಜಾನ್ ಪ್ರೈಂ ಬಳಕೆದಾರರಿಗೆ ಭರ್ಜರಿ ಆಫರ್

ಅಮೆಜಾನ್ ಇಂಡಿಯಾ ಬಳಕೆದಾರರಿಗಾಗಿ ಭರ್ಜರಿ ಆಫರ್ ನೀಡುತ್ತಿದೆ. ಅಮೆಜಾನ್ ಪ್ರೈಂ ಅಡಿಯಲ್ಲಿ ಭಾರತೀಯ ಮಾರುಕಟ್ಟೆಗೆ ಪ್ರತಿ ತಿಂಗಳ ಚಂದಾದಾರಿಕೆ ನೀಡುತ್ತಿದೆ. ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯದ ಗ್ರಾಹಕರು ಇನ್ಮುಂದೆ ಪ್ರತಿ ತಿಂಗಳಿಗೆ 129 ರೂಪಾಯಿ ನೀಡಿ, ತಿಂಗಳ ಚಂದಾದಾರರಾಗಬಹುದು. ಒಂದು ವರ್ಷಕ್ಕೆ 999 ರೂಪಾಯ ನೀಡಿ ಚಂದದಾರರಾಗಬಹುದು. ಈ ಹಿಂದೆ ಅಮೆಜಾನ್ ಕೇವಲ ವರ್ಷದ ಚಂದಾದಾರತ್ವ ಮಾತ್ರ ನೀಡುತ್ತಿತ್ತು. ತಿಂಗಳ ಚಂದದಾರರಾಗುವ ಗ್ರಾಹಕರಿಗೆ ದಿನಾಂಕ ಮುಗಿಯಲು ಮೂರು ದಿನವಿರುವ ಮೊದಲು ಕಂಪನಿ ಮಾಹಿತಿ ನೀಡಲಿದೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more