Short News

ಕಾಂಗ್ರೆಸ್ ನಾಯಕರ ಆಶೀರ್ವಾದ ಪಡೆದ ಬಿ.ನಾಗೇಂದ್ರ

ಕಾಂಗ್ರೆಸ್ ನಾಯಕರ ಆಶೀರ್ವಾದ ಪಡೆದ ಬಿ.ನಾಗೇಂದ್ರ

ಎಐಸಿಸಿ ಅಧ್ಯಕ್ಷ ರಾಹುಲ್‍ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿರುವ ಕೂಡ್ಲಿಗಿ ಮೀಸಲು ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರ ಮನೆಗಳಿಗೆ ತೆರಳಿ, ಆಶೀರ್ವಾದ ಪಡೆಯುತ್ತಿದ್ದಾರೆ.

ಬಿ. ನಾಗೇಂದ್ರ ಅವರು ಕುರುಗೋಡು ಕ್ಷೇತ್ರದ ಮಾಜಿ ಶಾಸಕ, ಬಳ್ಳಾರಿ ಗ್ರಾಮೀಣ ಕ್ಷೇತ್ರದದಲ್ಲಿ ಸಾಕಷ್ಟು ಹಿಡಿತ ಹೊಂದಿರುವ ಹಿರಿಯ ಕಾಂಗ್ರೆಸ್ ಮುಖಂಡ, ಗ್ರಾನೈಟ್ ಉದ್ಯಮಿ ಎನ್. ಸೂರ್ಯನಾರಾಯಣರೆಡ್ಡಿ ಅವರನ್ನು ಭೇಟಿ ಮಾಡಿದ್ದರು.

ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!

ರೊಟೊಮ್ಯಾಕ್ ಪೆನ್ಸ್ 3,695 ಕೋಟಿ ವಂಚನೆ ಎಷ್ಟು ವ್ಯವಸ್ಥಿತವಾಗಿದೆಯೋ!

ರೊಟೊಮ್ಯಾಕ್ ಪೆನ್ಸ್ ನಿಂದ ಆಗಿರುವುದು 3,695 ಕೋಟಿ ವಂಚನೆ ಎಂದು ಸಿಬಿಐ ಲೆಕ್ಕಾಚಾರ ಹಾಕಿದೆ. ಏನಿದು ವಂಚನೆ, ಹೇಗೆ ಮಾಡಿದ್ದಾರೆ ಇಷ್ಟೊಂದು ದೊಡ್ಡ ಪ್ರಮಾಣದ ಮೋಸ ಎಂಬುದು ಕೂಡ ಆಸಕ್ತಿಕರವಾಗಿದೆ.

ರಫ್ತು ಮಾಡುವ ಸಲುವಾಗಿ ಸರಕು ಖರೀದಿಗೆ ಎಂದು ಬ್ಯಾಂಕ್ ಗಳಿಂದ ಸಾಲ ಪಡೆದಿರುವ ರೊಟೊಮ್ಯಾಕ್, ಆ ಹಣವನ್ನು ವಿದೇಶಿ ಕಂಪೆನಿಗಳಿಗೆ ವರ್ಗಾಯಿಸಿ, ಪುನಃ ಆ ಹಣವನ್ನೆ ಕಾನ್ಪುರದ ಕಂಪೆನಿಯೊಂದಕ್ಕೆ ವರ್ಗಾವಣೆ ಮಾಡಿರುವುದು ಗಮನಕ್ಕೆ ಬಂದಿದೆ.

ಅಸಲಿಗೆ ರೊಟೊಮ್ಯಾಕ್ ಕಂಪೆನಿಯಿಂದ ರಫ್ತು ಮಾಡೇ ಇಲ್ಲ. ಅಂಥ ಯಾವ ಆರ್ಡರ್ ಕೂಡ ಬಂದಿಲ್ಲ. ಬ್ಯಾಂಕ್ ನಿಂದ ಸಾಲ ಪಡೆದು ಅದನ್ನು ಬೇರೆ ವ್ಯವಹಾರಗಳಿಗೆ ಬಳಸಿರುವುದು ಕಂಡುಬಂದಿದೆ.

ಐ20 ಫೇಸ್‌ಲಿಫ್ಟ್ v/s ಮಾರುತಿ ಬಲೆನೊ.. ಇವುಗಳಲ್ಲಿ ಯಾವುದು ಬೆಸ್ಟ್?

ಐ20 ಫೇಸ್‌ಲಿಫ್ಟ್ v/s ಮಾರುತಿ ಬಲೆನೊ.. ಇವುಗಳಲ್ಲಿ ಯಾವುದು ಬೆಸ್ಟ್?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿನ ಕಾರುಗಳ ಮಾರಾಟ ಪ್ರಕ್ರಿಯೆ ಜೋರಾಗಿಯೇ ನಡೆದಿದ್ದು, ಅದರಲ್ಲೂ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಗೆ ವಿಶೇಷ ಬೇಡಿಕೆಯಿದೆ. ಹೀಗಾಗಿ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಹ್ಯುಂಡೈ ಐ20 ಫೇಸ್‌ಲಿಫ್ಟ್ ಹಾಗೂ ಮಾರುತಿ ಸುಜುಕಿ ಬಲೆನೊ ಕಾರುಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದ್ದು, ಗ್ರಾಹಕರ ಆಯ್ಕೆ ಯಾವುದು ಸೂಕ್ತ ಎನ್ನುವ ವಿವರಣೆ ಇಲ್ಲಿದೆ. ಜೊತೆಗೆ ಹ್ಯಾಚ್‌ಬ್ಯಾಕ್ ಪ್ರಿಯರ ಹಾಟ್ ಫೇವರಿಟ್ ಎನಿಸಿರುವ ಐ20 ಫೇಸ್‌ಲಿಫ್ಟ್ ಮತ್ತು ಬಲೆನೊ ಬೆಲೆ, ತಾಂತ್ರಿಕ ಅಂಶಗಳು, ವಿನ್ಯಾಸಗಳು, ಗ್ರಾಹಕ ಸ್ನೇಹಿ ಕಾರಿನ ಸೌಲಭ್ಯಗಳ ಬಗೆಗೆ ಇಲ್ಲಿ ಚರ್ಚಿಸಲಾಗಿದೆ.

60 ಮೀ. ಓಟದಲ್ಲಿ ವಿಶ್ವ ದಾಖಲೆ ಬರೆದ ಕೋಲ್ಮನ್

60 ಮೀ. ಓಟದಲ್ಲಿ ವಿಶ್ವ ದಾಖಲೆ ಬರೆದ ಕೋಲ್ಮನ್

ಅಮೆರಿಕದ "ರೈಸಿಂಗ್‌ ಸ್ಟಾರ್‌' ಕ್ರಿಸ್ಟಿಯನ್‌ ಕೋಲ್ಮನ್‌ ಅಲುಕರ್ಕ್‌ನಲ್ಲಿ ನಡೆದ ಯುಎಸ್‌ ಚಾಂಪಿಯನ್‌ಶಿಪ್‌ನ ಒಳಾಂಗಣ ಕ್ರೀಡಾಂಗಣದ 60 ಮೀ. ಓಟವನ್ನು 6.34 ಸೆಕೆಂಡ್‌ಗಳಲ್ಲಿ ಮುಗಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. 60 ಮೀ. ವೇಗದ ಓಟದ ಸ್ಪರ್ಧೆಯಲ್ಲಿ 1998ರಲ್ಲಿ ಅಮೆರಿಕದ ಮೌರಿಸ್‌ ಗ್ರೀನ್‌ 6.39 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. 21ರ ಹರೆಯದ ಕೋಲ್ಮನ್‌ ಹಳೆ ದಾಖಲೆಗಿಂತ 0.05 ಸೆಕೆಂಡ್‌ ವೇಗವಾಗಿ ಓಟ ಮುಗಿಸಿದರು. 6.40 ಸೆಕೆಂಡ್‌ನ‌ಲ್ಲಿ ಗುರಿ ತಲುಪಿದ ರೋನಿ ಬೇಕರ್‌ ದ್ವಿತೀಯ ಸ್ಥಾನ ಗಳಿಸಿದರು.