Short News

ಬೆಂಗಳೂರು: ಶೀಘ್ರವೇ 85  ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರು: ಶೀಘ್ರವೇ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ

ಬೆಂಗಳೂರಿನಲ್ಲಿ ಪಾರ್ಕಿಂಗ್ ಮಾಫಿಯಾಕ್ಕೆ ಕಡಿವಾಣ ಹಾಕಲು ಬಿಬಿಎಂಪಿಯು ೮೫ ರಸ್ತೆಗಳಲ್ಲಿ ಸ್ಮಾರ್ಟ್ ವಾಹನ ನಿಲುಗಡೆ ವ್ಯವಸ್ಥೆ ಜಾರಿಗೆ ತರುತ್ತಿದೆ.

ಅದರ ಅನುಷ್ಠಾನಕ್ಕೆ ಗುತ್ತಿಗೆದಾರರನ್ನು ಗುರುತಿಸಲಾಗಿದೆ. ಶೀಘ್ರ ಕಾರ್ಯಾದೇಶ ನೀಡಲಾಗುತ್ತಿದ್ದು, ಮೂರು ತಿಂಗಳಿನಲ್ಲಿ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ನಗರದ ವಾಹನ ದಟ್ಟಣೆ, ಪರಿಸರ ಹಾನಿ ವಾಹನ ನಿಲುಗಡೆ ಸಮಸ್ಯೆ ನಿವಾರಣೆಗೆ ರಸ್ತೆ ಬದಿ ವಾಹನ ನಿಲುಗಡೆ ವ್ಯವಸ್ಥೆಗೆ ಬಿಬಿಎಂಪಿ ಮುಂದಾಗಿದೆ. ಅದಕ್ಕಾಗಿ ಸರ್ಕಾರದ ನಿರ್ದೇಶನದಂತೆ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಜಾರಿಗೊಳಿಸುತ್ತಿದೆ.

ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಠೇವಣಿಗೆ ನೀಡಲಾಗುತ್ತಿದ್ದ ಶೇ 8.65ರಷ್ಟು ಬಡ್ಡಿದರವನ್ನು 2017-18 ಸಾಲಿನಂತೆ ಶೇ 8.55ಕ್ಕೆ ಇಳಿಕೆ ಮಾಡಲಾಗಿದೆ. ಈ ಬದಲಾವಣೆ ಕೋಟ್ಯಂತರ ಚಂದಾದಾರರ ಮೇಲೆ ಪರಿಣಾಮ ಬೀರಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO)ಯ ಕೇಂದ್ರ ಟ್ರಸ್ಟಿಗಳು(CBT) ಬಡ್ಡಿದರ ಇಳಿಕೆ ಬಗ್ಗೆ ಬುಧವಾರ(ಫೆಬ್ರವರಿ 21) ನಿರ್ಣಯ ಕೈಗೊಂಡಿದ್ದಾರೆ ಎಂದು ಟ್ರೇಡ್ ಯೂನಿಯನ್ ಕಾಂಗ್ರೆಸ್ ಪ್ರಕಟಿಸಿದೆ. ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ.
ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ: ಸುಪ್ರೀಂ ಆದೇಶ

ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ: ಸುಪ್ರೀಂ ಆದೇಶ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಪಕ್ಷವನ್ನು ಮುನ್ನಡೆಸುವಂತಿಲ್ಲ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಪ್ರಧಾನಿ ಹುದ್ದೆಯಿಂದ ನವಾಜ್ ಷರೀಫ್ ಕೆಳಗಿಳಿಯಬೇಕು ಎಂಬ ಆದೇಶ ಹೊರಬಿದ್ದ 6 ತಿಂಗಳಲ್ಲೇ ನವಾಜ್ ಷರೀಫ್ ತಮ್ಮ ಪಕ್ಷದ ನೇತೃತ್ವವನ್ನೂ ವಹಿಸುವಂತಿಲ್ಲ ಎಂದು ಸುಪ್ರೀಂ ಆದೇಶಿಸಿದೆ. ಪ್ರಧಾನಿ ಹುದ್ದೆಯಿಂದ ಷರೀಪ್ ಕೆಳಗಿಳಿದ ತಕ್ಷಣ ಮುಸ್ಲಿಂ ಲೀಗ್-ನವಾಜ್ ಪಕ್ಷ ಷರೀಫ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲೇ ಮುಂದುವರೆಯುವುದಕ್ಕೆ ಯಾವುದೇ ತೊಡಕಾಗದಂತೆ ಕಾನೂನು ಮಾರ್ಪಾಡು ಮಾಡಿತ್ತು.
ವಿದ್ವತ್ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ  ರಾಜ್ ಫ್ಯಾಮಿಲಿ

ವಿದ್ವತ್ ಮೇಲೆ ಹಲ್ಲೆ, ನ್ಯಾಯಕ್ಕಾಗಿ ಅಭಿಯಾನ ಆರಂಭಿಸಿದ ರಾಜ್ ಫ್ಯಾಮಿಲಿ

ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿರುವ ವಿದ್ವತ್ ಸಹಾಯಕ್ಕಾಗಿ ಡಾ ರಾಜ್ ಕುಮಾರ್ ಕುಟುಂಬಸ್ಥರು ಮುಂದಾಗಿದ್ದಾರೆ. ವಿದ್ವತ್ ಮೇಲೆ ಹಲ್ಲೆ ಆಗಿರುವುದನ್ನು ತಿಳಿದ ತಕ್ಷಣವೇ ಆಸ್ಪತ್ರೆಗೆ ದೌಡಾಯಿಸಿದ ಗುರು ರಾಜ್ ಕುಮಾರ್ ಮೇಲೆಯೂ ಹಲ್ಲೆ ಮಾಡಲು ಹಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಪ್ರಯತ್ನಿಸಿದ್ದರು.ಗುರು ರಾಜ್ ಕುಮಾರ್ ಅವರ ಸ್ನೇಹಿತ ವಿದ್ವತ್ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾನೂನಿನ ಮೂಲಕ ವಿದ್ವತ್ ಗೆ ನ್ಯಾಯ ಸಿಗಬೇಕೆಂದು ಹ್ಯಾಷ್ ಟ್ಯಾಗ್ ಹಾಕಿ 'ಜಸ್ಟಿಸ್ ಫಾರ್ ವಿದ್ವತ್' ಎಂದು ಗುರು ರಾಜ್ ಕುಮಾರ್ ಫೇಸ್ ಬುಕ್ ಅಭಿಯಾನ ಪ್ರಾರಂಭ ಮಾಡಿದ್ದಾರೆ.