ಭಾರತೀಯ ಮುಸ್ಲಿಮರಿಂದ ರಾಮಮಂದಿರ ದ್ವಂಸವಾಗಿಲ್ಲ, ಮತ್ತೆ ರಾಮಮಂದಿರ ನಿರ್ಮಾಣ ನಮ್ಮ ಜವಾಬ್ದಾರಿ: ಮೋಹನ್ ಭಾಗವತ್
ಭಾರತ
- 9 days ago
ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣವಾಗದೇ ಹೋದರೆ, ಭಾರತೀಯ ಸಂಸ್ಕೃತಿಯ ಮೂಲ ಕಡಿದು ಹೋಗುತ್ತದೆ. ಹೊರಗಿನಿಂದ ಭಾರತದೊಳಗೆ ಪ್ರವೇಶ ಮಾಡಿದ್ದ ಮುಸ್ಲಿಮರು ರಾಮ ದೇಗಲುವನ್ನು ಧ್ವಂಸಗೊಳಿಸಿದ್ದರು. ಹೊರತು ಭಾರತದ ಮುಸ್ಲಿಮರಿಂದ ಈ ಕೃತ್ಯವಾಗಿಲ್ಲ. ಇದೀಗ ಮತ್ತೆ ಆ ಸ್ಥಳದಲ್ಲಿ ದೇವಾಲಯ ನಿರ್ಮಾಣ ಮಾಡುವುದು ಜನರ ಜವಾಬ್ದಾರಿಯಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಅಯೋಧ್ಯೆ ರಾಮ ಮಂದಿರವನ್ನು ಮುಸ್ಲಿಂಮರು ಕೆಡವಿದರೆಂದು ಮಸೀದಿ ಕೆಡುವ ಕೆಲಸವನ್ನು ಭಾರತೀಯರು ಎಂದಿಗೂ ಮಾಡುವುದಿಲ್ಲ. ಮತ್ತೆ ಅದೇ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.