Short News

ಕದಿರೇಶ್ ಹತ್ಯೆ: ಜಮೀರ್ ಅಹಮದ್ ಪಾತ್ರದ ಬಗ್ಗೆ ತನಿಖೆಗೆ ಒತ್ತಾಯ

ಕದಿರೇಶ್ ಹತ್ಯೆ: ಜಮೀರ್ ಅಹಮದ್ ಪಾತ್ರದ ಬಗ್ಗೆ ತನಿಖೆಗೆ ಒತ್ತಾಯ

ಬಿಬಿಎಂಪಿ ಸದಸ್ಯೆ ರೇಖಾ ಅವರ ಪತಿ ಕದಿರೇಶ್ ಹತ್ಯೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡದ ಶಂಕೆ ಇದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆಗ್ರಹಿಸಿದ್ದಾರೆ.

ಜೆಸಿ ನಗರದ ಗೂಡ್ಸ್ ಶೆಡ್ ರೋಡ್ ಬಳಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಬಿಜೆಪಿ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಟೀಂ ಇಂಡಿಯಾದ ಮೂವರಿಗೆ ಪ್ರತಿಷ್ಠಿತ ಕ್ರಿಕ್​ಇನ್ಫೋ ಪ್ರಶಸ್ತಿ

ಕ್ರಿಕೆಟ್​ನ ಪ್ರತಿಷ್ಠಿತ ವೆಬ್​ಸೈಟ್​ ಇಎಸ್​ಪಿಎನ್​ ಅತ್ಯುತ್ತಮ ಪ್ರದರ್ಶನ ತೋರಿರುವ ಆಟಗಾರರಿಗೆ ಕ್ರಿಕ್​ಇನ್ಫೋ ಪ್ರಶಸ್ತಿ ನೀಡುತ್ತಾ ಬರುತ್ತಿದ್ದು,2017ರ ಪ್ರಶಸ್ತಿಗಳಿಸಿರುವವರ ಪಟ್ಟಿಯನ್ನು ಪ್ರಕಟಿಸಿದೆ. ಭಾರತದ 3ಜನ ಈ ಪ್ರಶಸ್ತಿಗೆ ಆಯ್ಜೆಯಾಗಿದ್ದು,ಯಜುವೀಂದ್ರ್​ ಚಹಲ್​ ಅತ್ಯುತ್ತಮ ಟಿ20 ಬೌಲರ್, ಕುಲ್​ದೀಪ್​ ಯಾದವ್​ ಡೆಬ್ಯು ಕ್ರಿಕೆಟರ್​ ಆಗಿ ಹೊರಹೊಮ್ಮಿದ್ದಾರೆ. ಇನ್ನು ವರ್ಷದ ಬ್ಯಾಟಿಂಗ್​ ಪರ್ಫಾರ್ಮರ್​ ಆಗಿ ಹರ್ಮನ್​ಪ್ರೀತ್​ ಕೌರ್​ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 12 ಪ್ರಶಸ್ತಿಗಳಲ್ಲಿ 3 ಜನ ಭಾರತೀಯರಿದ್ದು, ಅತಿ ಹೆಚ್ಚು ಪ್ರಶಸ್ತಿ ಪಡೆದ ದೇಶ ಎಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ.
ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅವರ ಹಾವ ಭಾವ, ಧ್ವನಿ ಏರಿಳಿತದ ವಿಶ್ಲೇಷಣೆ

ಮೋದಿ ಅತ್ಯುತ್ತಮ ಸಂವಹನಾಕಾರ, ಅವರ ಭಾಷಣ ಕಲೆಗೆ ಹೋಲಿಸಬಹುದಾದ ಇನ್ನೊಬ್ಬ ರಾಜಕಾರಣಿ ಸದ್ಯಕ್ಕಂತೂ ರಾಷ್ಟ್ರ ರಾಜಕಾರಣದಲ್ಲಿ ದೂರಕ್ಕೂ ಕಾಣ ಸಿಗುತ್ತಿಲ್ಲ. ಇದ್ದರೂ ಮೋದಿ ಅವರ ಶೈಲಿಯನ್ನೇ ಅನುಕರಿಸುವವರು ಇದ್ದಾರೆ ಅಷ್ಟೆ.

ಅವರ ಭಾಷಣ ಶೈಲಿ, ಧ್ವನಿ ಏರಿಳಿತ, ಹಾವ ಭಾವ, ಪದಗಳ ಆಯ್ಕೆ, ಎಲ್ಲವೂ ಗಮನಿಸಲರ್ಹ. ಅವರ ಭಾಷಣವನ್ನು ಸಂಶೋಧಿಸಿ ಪುಟಗಟ್ಟಲೆ ಪ್ರಬಂಧ ಬರೆದ ಪತ್ರಕರ್ತರೂ ಇದ್ದಾರೆ. ಈ ಲೇಖನದಲ್ಲೂ ಇದೇ ಪ್ರಯತ್ನವನ್ನು ಮಾಡ ಹೊರಟಿದ್ದೇವೆ.

ಬರಿಗೈಲಿ ಕೆಂಡ ತೂರುವ ಕೂಡ್ಲಿಗಿಯ 'ಗುಗ್ಗರಿ ಹಬ್ಬ' ನೋಡಿದ್ರಾ!

ಬರಿಗೈಲಿ ಕೆಂಡ ತೂರುವ ಕೂಡ್ಲಿಗಿಯ 'ಗುಗ್ಗರಿ ಹಬ್ಬ' ನೋಡಿದ್ರಾ!

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೊಗ್ಗಲು ಓಬಳೇಶ್ವರ ಜಾತ್ರೆ ಅಂದರೆ ಬಹಳ ವಿಶೇಷ ಹಾಗೂ ವಿಶಿಷ್ಟ. ನಿಗಿನಿಗಿ ಕೆಂಡವನ್ನು ಬರಿಗೈಲಿ ತೆಗೆದುಕೊಂಡು ಇಲ್ಲಿ ಭಕ್ತರು ಒಬ್ಬರ ಮೇಲೊಬ್ಬರು ತೂರಾಡುತ್ತಾರೆ.

ಪ್ರತಿ ಮೂರು ವರ್ಷಕ್ಕೆ ಒಮ್ಮೆ ಈ ಆಚರಣೆ ನಡೆಯುತ್ತದೆ. ವಾಲ್ಮೀಕಿ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಗ್ರಾಮದಲ್ಲಿ 'ಬೇಡ ಸಂಸ್ಕೃತಿ'ಯ ಆಚರಣೆ ಇಂದಿಗೂ ನಡೆದುಬರುತ್ತಿದೆ.

ಒಂದು ವೇಳೆ ಇದನ್ನು ಮಾಡದಿದ್ದರೆ ಕೆಡುಕು ಉಂಟಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆ. ಅಂದಹಾಗೆ ಕೆಂಡ ತೂರಿದರೂ ಯಾರಿಗೂ ಸುಟ್ಟ ಗಾಯಗಳಾಗುವುದಿಲ್ಲ. ಅದು ಕೂಡ ದೇವರ ಮಹಿಮೆ ಎಂಬುದು ನಂಬಿಕೆ.