Short News

ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆ ಇಲ್ಲ: ಖರ್ಗೆ

ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆ ಇಲ್ಲ: ಖರ್ಗೆ

ಜಮ್ಮು ಕಾಶ್ಮೀರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವ ಮುಖ ಇಟ್ಟುಕೊಂಡು ಕಾಶ್ಮೀರದಲ್ಲಿ ಸರ್ಕಾರ ರಚಿಸುತ್ತದೆ ಎಂದು ಪ್ರಶ್ನೆ ಮಾಡಿದರು. ಈಗಾಗಲೇ ಪಿಡಿಪಿ ಜೊತೆ ಸರ್ಕಾರ ರಚಿಸಿ ಆಡಳಿತದಲ್ಲಿ ವಿಫಲವಾಗಿ ರಾಜಕೀಯ ಲಾಭಕ್ಕಾಗಿ ಮೈತ್ರಿ ಮುರಿದುಕೊಂಡಿದೆ. ಈಗ ಯಾವ ಪುರುಷಾರ್ಥಕ್ಕಾಗಿ ಮತ್ತೆ ಸರ್ಕಾರ ರಚಿಸಲು ಮುಂದಾಗಿದೆ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಭಾರತದ ನೌಕಾದಳದ ಯುದ್ಧ ಸಾಮಾಗ್ರಿಗಳ ನಾಶಕ್ಕೆ ಜೈಶ್ ಸಂಘಟನೆ  ತರಬೇತಿ!

ಭಾರತದ ನೌಕಾದಳದ ಯುದ್ಧ ಸಾಮಾಗ್ರಿಗಳ ನಾಶಕ್ಕೆ ಜೈಶ್ ಸಂಘಟನೆ ತರಬೇತಿ!

ಜೈಶ್​-ಎ-ಮೊಹಮ್ಮದ್ ಉಗ್ರಸಂಘಟನೆ ಸಮುದ್ರಕ್ಕಿಳಿದು ಭಾರತದ ನೌಕಾದಳದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂಬ ಆಘಾತಕಾರಿ ಸ್ಫೋಟಕ ಮಾಹಿತಿ ಹರಿದಾಡುತ್ತಿದೆ. ಈ ಸಂಬಂಧ ಭಾರತದ ಇಂಟೆಲಿಜೆನ್ಸ್​ ವಿಂಗ್​ ನೌಕಾದಳಕ್ಕೆ ಎಚ್ಚರಿಕೆಯಿಂದ ಇರುವಂತೆ ಸಂದೇಶ ರವಾನಿಸಿದೆ. ಇಂಟೆಲಿಜೆನ್ಸ್​ಗೆ ದೊರೆತಿರುವ ಮಾಹಿತಿಯಂತೆ ಜೈಶ್ ಉಗ್ರರು ಪಾಕಿಸ್ತಾನದ ಬಹವಲ್ಪುರದಲ್ಲಿ ಸಾಗದಾಳಕ್ಕಿಳಿಯುವ ತಂತ್ರಗಾರಿಕೆ ಕುರಿತಂತೆ ತರಬೇತಿ ಪಡೆಯುತ್ತಿದೆ. ಎಂದು ತಿಳಿದುಬಂದಿದೆ.
ಕೊಯಿನೂರ್ ವಜ್ರ  ಭಾರತಕ್ಕೆ ತರಲು ವಿದೇಶಿ ಅಧಿಕಾರಿಗಳೊಂದಿಗೆ ಮಾತುಕತೆ

ಕೊಯಿನೂರ್ ವಜ್ರ ಭಾರತಕ್ಕೆ ತರಲು ವಿದೇಶಿ ಅಧಿಕಾರಿಗಳೊಂದಿಗೆ ಮಾತುಕತೆ

ಜಗತ್ತಿನ ಅಮೂಲ್ಯ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರ್ ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಾಪಸ್ ತರುವ ಕುರಿತಂತೆ ವಿದೇಶಿ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಕೇಂದ್ರ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ವಿಕೆ ಸಿಂಗ್ ಭಾರತೀಯರು ಮತ್ತು ಸಂಸತ್ ವ್ಯಕ್ತಪಡಿಸಿದ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದ ಪುರಾತತ್ವ ಸಮೀಕ್ಷೆಯಿಂದ ಮಾಹಿತಿ ಪಡೆದು ಮತ್ತೆ ಕೊಹಿನೂರ್ ಮತ್ತು ಇತರ ಪ್ರಾಚೀನ ವಸ್ತುಗಳನ್ನು ವಾಪಸ್ ತರಲು ವಿದೇಶಿ ಅಧಿಕಾರಿಗಳ ಜತೆ ಚರ್ಚಿಸುತ್ತಿರುವುದಾಗಿ ಹೇಳಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 9 ಕ್ಕೆ ಏರಿಕೆ

ಗ್ರೇಟರ್ ನೋಯ್ಡಾದಲ್ಲಿ ಕಟ್ಟಡ ಕುಸಿತ: ಸಾವಿನ ಸಂಖ್ಯೆ 9 ಕ್ಕೆ ಏರಿಕೆ

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಿರ್ಮಾಣ ಹಂತದ ಎರಡು ಕಟ್ಟಡಗಳು ಕುಸಿದ ಪರಿಣಾಮ ಸಾವಿಗೀಡಾದವರ ಸಂಖ್ಯೆ 9 ಕ್ಕೇರಿದೆ. ಗ್ರೇಟರ್ ನೋಯ್ಡಾದ ಶಾಹ್ ಬೆರಿ ಗ್ರಾಮದಲ್ಲಿ ಜುಲೈ 17 ರಂದು ಘಟನೆ ನಡೆದಿದ್ದು, ಕಟ್ಟಡದ ಅವಶೇಷದಡಿಯಲ್ಲಿ ಮತ್ತಷ್ಟು ಜನ ಸಿಲುಕಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹಲವರನ್ನು ಈಗಾಗಲೇ ರಕ್ಷಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಸಂತಾಪ ವ್ಯಕ್ತಪಡಿಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more