Short News

ಸಂತೋಷ್ ಹತ್ಯೆ: ರಾಮಲಿಂಗಾರೆಡ್ಡಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಸಂತೋಷ್ ಹತ್ಯೆ: ರಾಮಲಿಂಗಾರೆಡ್ಡಿ ಹೇಳಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಹಿಂದು ಕಾರ್ಯಕರ್ತ ಸಂತೋಷ್‌ ಹತ್ಯೆಗೆ ಸ್ಕ್ರೂ ಡ್ರೈವರ್ ಬಳಸಲಾಗಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಗೃಹ ಸಚಿವ ಶ್ರೀ ರಾಮಲಿಂಗಾ ರೆಡ್ಡಿ ಅವರ ಧೋರಣೆಯನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ಜೆ.ಸಿ.ನಗರದಲ್ಲಿ ಪ್ರತಿಭಟನೆ ನಡೆಸಿದರು. 

ಜಯಮಹಲ್ ನ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಗೃಹ ಇಲಾಖೆಯ ವೈಫಲ್ಯದ ವಿರುದ್ಧ ಘೋಷಣೆ ಕೂಗಿದರು. ಪೊಲೀಸರ ದರ್ಪ ಅಟ್ಟಹಾಸಕ್ಕೇರಿತ್ತು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಮೋರ್ಚಾ ಕಾರ್ಯಕರ್ತರನ್ನು ಒತ್ತಡ ಹೇರಿ ಬಂಧಿಸಲು ಮುಂದಾದರು.

ಕರ್ನಾಟಕ ಲೋಕಾಯುಕ್ತ ನೇಮಕಾತಿ... ಪಿಯುಸಿ ಆದವರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಾಯುಕ್ತ ನೇಮಕಾತಿ... ಪಿಯುಸಿ ಆದವರಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಸರ್ಕಾರ, ಕರ್ನಾಟಕ ಲೋಕಾಯುಕ್ತ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ ಎಪ್ರಿಲ್ 10,2018. ಅರ್ಜಿ ಸಲ್ಲಿಕೆಗೆ ಮೇ 15,2018 ಕೊನೆಯ ದಿನಾಂಕ. ಕ್ಲರ್ಕ್ ಕಂ ಟೈಪಿಸ್ಟ್, ದಲಾಯತ್ ಸ್ಟೆನೊ, ಟೈಪಿಸ್ಟ್ ಹಾಗೂ ದಲಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಫ್ರೆಶರ್ಸ್ ಕೂಡಾ ಈ ಹುದ್ದೆಗೆ ಅಪ್ಲೈ ಮಾಡಬಹುದಾಗಿದೆ.
ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಿಯಾಜ್ ಕಾರು..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಾರುತಿ ಸುಜುಕಿ ಸಿಯಾಜ್ ಕಾರು..

ದೇಶಿಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದಿರುವ ಮಾರುತಿ ಸುಜುಕಿ ಸಂಸ್ಥೆಯು ತನ್ನ ಹೊಸ ಸಿಯಾಜ್ ಫೇಸ್‍ಲಿಫ್ಟ್ ಕಾರನ್ನು ಇದೇ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಹೊಸ ಫೇಸ್‌ಲಿಫ್ಟ್ ಮತ್ತೊಮ್ಮೆ ಗ್ರಾಹಕರನ್ನು ಮೋಡಿ ಮಾಡುವ ತವಕದಲ್ಲಿದೆ.ಡೀಸೆಲ್ ಮಾದರಿಯಲ್ಲಿ ಹೊಸ ಎಂಜಿನ್ ಅನ್ನು ವಿನ್ಯಾಸಗೊಳಿಸಿರುವುದು ಮಾರುತಿ ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಪ್ರಮುಖ ಬದಲಾವಣೆಯಾಗಿದ್ದು, ಬಿಡುಗಡೆಗು ಮುನ್ನವೆ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್  ನಡೆಸುವ ವೇಳೆ ಕಾಣಿಸಿಕೊಂಡಿದೆ.
ರಾಶಿ ಭವಿಷ್ಯ: ನೋಡಿ ಈ ಆರು ರಾಶಿಯವರು ಬಹಳ ಬುದ್ಧಿವಂತರಂತೆ!

ರಾಶಿ ಭವಿಷ್ಯ: ನೋಡಿ ಈ ಆರು ರಾಶಿಯವರು ಬಹಳ ಬುದ್ಧಿವಂತರಂತೆ!

ಮಿಥುನ ರಾಶಿಯಲ್ಲಿ ಜನಸಿದ ವ್ಯಕ್ತಿಗಳಿಗೆ ಬುಧಗ್ರಹ ಅಧಿಪತಿಯಾಗಿದ್ದಾನೆ. ಬುಧ ಸಂವಹನದ ಗ್ರಹವಾಗಿದ್ದು ಅವಳಿಗಳ ಒಡೆಯನೂ ಆಗಿರುವ ಕಾರಣ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಉತ್ತಮ ವಾಗ್ಮಿಗಳೂ, ಸುಲಭವಾಗಿ ನಗೆಚಟಾಕಿ ಹಾರಿಸುವವರೂ ಹಾಗೂ ಜಾಣರೂ ಆಗಿರುತ್ತಾರೆ. ವೃಶ್ಚಿಕ ರಾಶಿಯ ಜನರು ಕೊಂಚ ಭಿನ್ನ ವ್ಯಕ್ತಿತ್ವ ಹೊಂದಿದ್ದು ತರ್ಕಬದ್ದವಲ್ಲದ ನಿರ್ಧಾರಗಳನ್ನು ಪ್ರಕಟಿಸುವವರಾಗಿದ್ದರೂ ಜಾಣರು ಹೇಗಾಗುತ್ತಾರೆ ಎಂದು ಅಚ್ಚರಿ ಪಡಬೇಡಿ. ಆದರೆ ಇವರು ಇಷ್ಟಪಟ್ಟ ವಿಷಯದ ಕುರಿತು ನಡೆಸುವ ಆಳವಾದ ಅಧ್ಯಯನ ಇವರ ಏಕಾಗ್ರತೆಯನ್ನು ಹೆಚ್ಚಿಸಿ ಹೆಚ್ಚು ಹೆಚ್ಚಾಗಿ ಪ್ರೇರಣೆ ನೀಡುವವರೂ ಆಗಿರುತ್ತಾರೆ.