Short News

ಚೀನಾ ಗಡಿಯವರೆಗೂ ರಸ್ತೆ ನಿರ್ಮಿಸಿ ಬಿಆರ್ ಒ ಸೈನಿಕರ ಇತಿಹಾಸ!

ಚೀನಾ ಗಡಿಯವರೆಗೂ ರಸ್ತೆ ನಿರ್ಮಿಸಿ ಬಿಆರ್ ಒ ಸೈನಿಕರ ಇತಿಹಾಸ!

ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ ಒ ನೂತನ ಇತಿಹಾಸ ಬರೆದಿದೆ. ಚೀನಾದ ಲಿಮೆಕಿಂಗ್ ಮತ್ತು ಟಮಾ ಚುಂಗ್ ಚುಂಗ್ ಟಾಸ್ಕಿಂಗ್ ಅಕ್ಸಿಸ್ ನೊಂದಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲಾಗಿದ್ದು, ಲಿಮೆಕಿಂಗ್ ನಿಂದ ಈ ರಸ್ತೆ ಈಗ ಟಿಟಿಸಿ , ಟಾಸ್ಕಿಂಗ್ ವರೆಗೂ ಸುಮಾರು 80 ಕಿಲೋ ಮೀಟರ್ ದೂರವನ್ನು ಸಂಪರ್ಕಿಸಲಿದೆ. 1962ರ ಚೀನಾ ಯುದ್ದ ನಂತರ ಈ ರಸ್ತೆ ಮೂಲಕ ಚೀನಾ ಗಡಿ ತಲುಪುವಂತೆ ಮಾಡಿರುವುದು ಐತಿಹಾಸಿಕ ಸಾದನೆ ಎನಿಸಿಕೊಂಡಿದೆ.
ದ್ವಾದಶ ರಾಶಿಗಳ ಇಂದಿನ (ಮೇ 22) ದಿನ ಭವಿಷ್ಯ

ದ್ವಾದಶ ರಾಶಿಗಳ ಇಂದಿನ (ಮೇ 22) ದಿನ ಭವಿಷ್ಯ

ಮೇಷ:ರಹಸ್ಯ ಕಾರ್ಯಾಚರಣೆ ಬಹಿರಂಗ ವಾಗುವುದು, ಸಣ್ಣ ಅಡೆತಡೆಗಳು ಬರಬಹುದು. ವೃಷಭ:ಅವಿವಾಹಿತರಿಗೆ ವಿವಾಹವಾಗುವ ಯೋಗವಿದೆ. ಮಿಥುನ:ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ. ಕಟಕ:ತಂದೆ-ತಾಯಿಯರ ವಿರೋಧ ಎದುರಿಸಬೇಕಾಗುತ್ತದೆ. ಸಿಂಹ:ಕೋಪ ಕಡಿಮೆ ಮಾಡಿ ಕೊಂಡರೆ ಬಹಳ ಉತ್ತಮ. ಕನ್ಯಾ:ರಾಜಕೀಯ ಪ್ರವೇಶ ಅನಿವಾರ್ಯವಾಗಬಹುದು. ತುಲಾ:ಕುಟುಂಬದಲ್ಲಿ ಆಸ್ತಿ ಕಲಹ ಕಂಡುಬರುವುದು. ವೃಶ್ಚಿಕ:ಆರೋಗ್ಯ ಸಮಸ್ಯೆ ಮಾನಸಿಕ ಚಿಂತೆಗೆ ಕಾರಣವಾಗಬಹುದು. ಧನುಸ್ಸು:ತಂದೆ-ತಾಯಿಯರ ಬಗ್ಗೆ ಕಾಳಜಿ ವಹಿಸಿ. ಮಕರ: ಮನೆ ದೇವರ ಪೂಜೆ ಮಾಡಿ. ಕುಂಭ:ಪುಸ್ತಕ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ. ಮೀನ:ಮಕ್ಕಳ ವಿಚಾರದಲ್ಲಿ ಅಸಮಾಧಾನ.
ಓ ಮೈ ಗಾಡ್ ಪೆಟ್ರೋಲ್ ಬೆಲೆ ಇಷ್ಟೊಂದಾ...!?

ಓ ಮೈ ಗಾಡ್ ಪೆಟ್ರೋಲ್ ಬೆಲೆ ಇಷ್ಟೊಂದಾ...!?

ಜೂನ್ 15, 2017 ರಿಂದ ಪ್ರತಿದಿನವೂ ಇಂಧನ ದರ ಪರಿಷ್ಕರಿಸಲಾಗುತ್ತಿರುವುದರಿಂದ ಗಣನೀಯ ಬದಲಾವಣೆ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಮೇ 22 ರಂದು ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 78.12ರೂ! ಡಿಸೆಲ್ ದರ ಪ್ರತಿ ಲೀ.ಗೆ 69.25! ಇದು ಸಿಲಿಕಾನ್ ಸಿಟಿ ಬೆಂಗಳೂರಿಗರ ತಾಪತ್ರಯವಾದರೆ, ವಾಣಿಜ್ಯನಗರಿ ಮುಂಬೈಯ ಕತೆ ಮತ್ತಷ್ಟು ಕಷ್ಟದ್ದು. ಅಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 83.16 ರೂ.! ಗಗನಕ್ಕೇರಿದ ಇಂಧನ ದರ ಶ್ರೀಸಾಮಾನ್ಯನಲ್ಲಿ ಆತಂಕ ಹುಟ್ಟಿಸಿದೆ. ಕಳೆದ 16 ವರ್ಷಗಳಲ್ಲಿ ನಂತರ ಇಂಧನ ದರ 2013 ರ ಸೆಪ್ಟೆಂಬರ್ ನಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಅದಾದ ನಂತರ 2018 ರ ಮೇ ತಿಂಗಳಿನಲ್ಲಿ ದಾಖಲೆಯ ಏರಿಕೆ ಕಂಡಿದೆ.
ಕ್ರೊಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಕ್ರೊಮಾ ಸ್ಟೋರ್‌ನಲ್ಲಿಯೂ OnePlus 6 ಮಾರಾಟ...! ಎಂದಿನಿಂದ..?

ಆಸಕ್ತ ಖರೀದಿದಾರರು ಮೊದಲು ಇದರ ಅನುಭವ ಪಡೆದು ನಂತರ ಖರೀದಿಸಲು ಅವಕಾಶವಿದ್ದು, 112 ಕ್ರೋಮಾ ಸ್ಟೋರ್ ಗಳಲ್ಲಿ ಮೇ 22ರಿಂದ ಮಾರಾಟ ನಡೆಯಲಿದೆ. ಈ ಕಂಪೆನಿಗಳು ಪ್ರತಿದಿನವೂ ಕ್ಯಾಷ್ ಬ್ಯಾಕ್ ಆಫರ್ ಗಳನ್ನು ನೀಡಲಿದ್ದು, ಈ ನಿಟ್ಟಿನಲ್ಲಿ HDFC ಬ್ಯಾಂಕ್, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟೆಡ್, ಮತ್ತು ಪೆಟಿಎಂ ಗಳ ಜೊತೆ ಪಾರ್ಟನರ್ಶಿಪ್ ಹೊಂದಿದೆ. ಎಸ್ ಬಿಐ ಕಾರ್ಡ್ ಬಳಸುವವರಿಗೂ ಕೂಡ 2000 ರುಪಾಯಿಯ ಕ್ಯಾಷ್ ಬ್ಯಾಕ್ ಸಿಗಲಿದೆ. ಆದರೆ ಈ ಎಲ್ಲಾ ಆಫರ್ ಗಳು ಮಾರಾಟ ಆರಂಭವಾದ ಕೇವಲ ಒಂದು ವಾರ ಮಾತ್ರ ಇರಲಿವೆಯಂತೆ.