Short News

ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಮೂರು ತಿಂಗಳ ಬಳಿಕ ಭಾರತಕ್ಕೆ ಬಂದ ಗೋವಾ ಸಿಎಂ

ಅಮೆರಿಕಾದಲ್ಲಿ ಚಿಕಿತ್ಸೆ ಪಡೆದು ಮೂರು ತಿಂಗಳ ಬಳಿಕ ಭಾರತಕ್ಕೆ ಬಂದ ಗೋವಾ ಸಿಎಂ

ಅನಾರೋಗ್ಯದ ಕಾರಣಕ್ಕೆ ಅಮೆರಿಕಾದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆದಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಮೂರು ತಿಂಗಳ ಬಳಿಕ ಭಾರತಕ್ಕೆ ಬಂದಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಪರಿಕ್ಕರ್ ಅವರು ಇದೇ ವರ್ಷ ಮಾರ್ಚ್ ತಿಂಗಳಿನಲ್ಲಿ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದರು. ಗುರುವಾರ ಮುಂಬೈಗೆ ಆಗಮಿಸಿರುವ ಅವರು , ಬಳಿಕ ಮತ್ತೊಂದು ವಿಮಾನದಲ್ಲಿ ಗೋವಾ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆಂದು ತಿಳಿದುಬಂದಿದೆ.
ರಾಮನ ಪಾದದ ಗುರುತನ್ನು ಪೂಜಿಸಲಾಗುವ ಇಲ್ಲಿಗೆ ಭಕ್ತರ ದಂಡೇ ಬರುತ್ತದೆ

ರಾಮನ ಪಾದದ ಗುರುತನ್ನು ಪೂಜಿಸಲಾಗುವ ಇಲ್ಲಿಗೆ ಭಕ್ತರ ದಂಡೇ ಬರುತ್ತದೆ

ಬಿಹಾರದಲ್ಲಿರುವ ವೈಶಾಲಿ ಜಿಲ್ಲೆಯು ಹಿಂದಿನಕಾಲದಲ್ಲಿ ಬೌದ್ಧರು ಹಾಗೂ ಜೈನರ ಕೇಂದ್ರವಾಗಿತ್ತು. ಇದೀಗ ಇದೊಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಈ ಸ್ಥಳದಲ್ಲಿ ಜನಕ್‌ಪುರಕ್ಕೆ ತೆರಳುವ ದಾರಿಯಲ್ಲಿ ರಾಮನ ಹೆಜ್ಜೆಗುರುತುಗಳನ್ನು ಕಾಣಬಹುದು. ರಾಮನ ಪಾದದ ಗುರುತು ಇರುವ ಜಾಗದಲ್ಲೇ ದೇವಾಲಯವನ್ನು ಕಟ್ಟಲಾಗಿದೆ. ರಾಮಚೌರಾ ಮಂದಿರಕ್ಕೆ ಭಗವಾನ್ ರಾಮನ ಈ ಹೆಜ್ಜೆಗುರುತುಗಳನ್ನು ಸಾದರಪಡಿಸುವ ಮೂಲಕ ರಾಜ್ಯದಾದ್ಯಂತದ ಹಿಂದು ಭಕ್ತರು ಹಾಜಿಪುರ್‌ಗೆ ಭೇಟಿ ನೀಡುತ್ತಾರೆ.
ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ

ಸಹೋದರನಿಗೆ ಸಚಿವ ಸ್ಥಾನ ಕೊಡಲು ಪರೋಕ್ಷವಾಗಿ ಆಗ್ರಹಿಸಿದ ರಮೇಶ ಜಾರಕಿಹೊಳಿ

ಪರೋಕ್ಷವಾಗಿ ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಳಗಾವಿಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಮ್ಮಿಶ್ರ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಈಗಾಗಲೇ ಒಂದು ಸಚಿವ ಸ್ಥಾನ ನೀಡಿದ್ದಾರೆ. ಇನ್ನೂ ಎರಡು ಸಚಿವ ಸ್ಥಾನವನ್ನು ವಾಲ್ಮೀಕಿ ಸಮುದಾಯಕ್ಕೆ ಕೊಡಬೇಕೆಂಬ ಬೇಡಿಕೆಯಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಮೊದಲ ಹಂತದಲ್ಲಿ ನಾನು, ತುಕಾರಾಂ ಮತ್ತು ನಾಗೇಂದ್ರ ಹೆಸರು ಇತ್ತು. ಕೊನೆ ಗಳಿಗೆಯಲ್ಲಿ ಅವರಿಬ್ಬರ ಹೆಸರು ಕೈ ಬಿಡಲಾಯಿತು.
ಪ್ರತಿ ರಾಶಿಚಕ್ರದವರಲ್ಲಿ ಕಂಡು ಬರುವ ನಕಾರಾತ್ಮಕ ಗುಣಗಳು

ಪ್ರತಿ ರಾಶಿಚಕ್ರದವರಲ್ಲಿ ಕಂಡು ಬರುವ ನಕಾರಾತ್ಮಕ ಗುಣಗಳು

ಈ ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಭಿನ್ನವಾಗಿರುತ್ತಾರೆ. ಒಬ್ಬರ ವ್ಯಕ್ತಿತ್ವ ಮತ್ತೊಬ್ಬರಂತಿರುವುದಿಲ್ಲ. ಇದರಿಂದಾಗಿಯೇ ಕೆಲವೊಮ್ಮೆ ಕಲಹ ಹಾಗೂ ಇತರ ಮನಸ್ತಾಪಗಳು ನಡೆಯುತ್ತಿರುತ್ತದೆ. ಹುಟ್ಟಿದ ಸಮಯ, ಗ್ರಹಗತಿ ಹಾಗೂ ಇತರ ಕೆಲವೊಂದು ಅಂಶಗಳು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ.ಇಂತಹ ವ್ಯಕ್ತಿತ್ವವು ಕೇವಲ ಸಾಮಾಜಿಕ ಜೀವನದಲ್ಲಿ ಮಾತ್ರವಲ್ಲದೆ ಸಂಬಂಧದಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಪ್ರತಿಯೊಂದು ರಾಶಿಯಲ್ಲೂ ಕೆಲವೊಂದು ವಿಶಿಷ್ಟ ಹಾಗೂ ವಿಚಿತ್ರವಾದ ನಕಾರಾತ್ಮಕ ಗುಣಲಕ್ಷಣಗಳು ಇರುತ್ತದೆ.

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more